- ರೋಟರಿ ಸಂಸ್ಥೆಯಿಂದ ಶ್ರೀಅನುಲಕ್ಷ್ಮೀ ಸೇವಾ ಆಶ್ರಮಕ್ಕೆ ವಾಷಿಂಗ್ ಮಿಷನ್, ಬೀರು, ರ್ಯಾಕ್ ಕೊಡುಗೆು
ಚಾಮರಾಜನಗರ : ಸೈಕಲ್ ಅಗರಬತ್ತಿ ಮಾಲೀಕ ಗುರು, ಪ್ರಕಾಶ್ ಅವರು ರೋಟರಿ ಸಂಸ್ಥೆಯ ಸಹಕಾರದಲ್ಲಿ ನಗರದ ನಂಜನಗೂಡು ರಸ್ತೆಯ ಸಮೀಪದಲ್ಲಿರುವ ಶ್ರೀಅನುಲಕ್ಷ್ಮೀ ಸೇವಾ ಆಶ್ರಮಕ್ಕೆ ವಾಷಿಂಗ್ ಮಿಷನ್, ಬೀರು, ಸ್ಟೋರೇಜ್ರ್ಯಾ ಕ್ ಕೊಡುಗೆಯಾಗಿ ನೀಡಲಾಯಿತು.
ಪಿಡಿಜಿ ಡಾ.ನಾಗಾರ್ಜುನ್ ಮಾತನಾಡಿ, ನಿಮ್ಮ ಸಮಾಜಮುಖಿ ಸೇವೆಗೆ ರೋಟರಿ ಸದಾ ಚಿರಋಣಿಯಾಗಿರುತ್ತದೆ. ಇದು ಗುರು ಅವರು ಕಾರ್ಯಕ್ರಮವಾಗಿದೆ. ನಿಮ್ಮ ಆಶ್ರಮಕ್ಕೆ ವಾಷಿಂಗ್ ಮಿಷನ್, ಬೀರು, ರ್ಯಾಕ್ ಕೊಡುಗೆಯಾಗಿ ನೀಡಿದ ಗುರು ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇವೆ. ನಿಮ್ಮ ಆಶ್ರಮದ ಸೇವಾ ಕಾರ್ಯಕ್ಕೆ ನಿಮ್ಮೊಂದಿಗೆ ಸದಾ ಇರುತ್ತೇವೆ. ಮುಂದಿನ ದಿನಗಳಲ್ಲಿ ನಿಮ್ಮ ಸಹಕಾರ ಮಾಡುವುದಾಗಿ ತಿಳಿಸಿದರು.
ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ಕಳೆದ ಮೂರು ವರ್ಷದಿಂದ ನಮ್ಮ ಸಂಸ್ಥೆಯು ಶ್ರೀಅನುಲಕ್ಷ್ಮೀ ಸೇವಾ ಆಶ್ರಮದೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಅನೇಕ ದಾನಿಗಳಿಂದ ಸೈಕಲ್ ಅಗರಬತ್ತಿ ಮಾಲೀಕ ಗುರು, ಅಂಕಶೆಟ್ಟಿ ಅವರಿಂದ ಕಳೆದ 2 ವರ್ಷದಿಂದ ಧನಸಹಾಯ, ಅವಶ್ಯಕ ವಸ್ತುಗಳನ್ನು ನೀಡುತ್ತಾ ಬರಲಾಗಿದ್ದು, ಇಂದು ಆಶ್ರಮಕ್ಕೆ ಅತಿ ಮುಖ್ಯವಾಗಿ ಬೇಕಾಗಿದ್ದ ವಾಷಿಂಗ್ ಮಿಷನ್, 2 ರ್ಯಾಕ್, ಒಂದು ಬೀರುವನ್ನು ಗುರು, ಪ್ರಕಾಶ್ ಅವರು ರೋಟರಿ ಸಹಕಾರದಲ್ಲಿ ಕೊಡುಗೆಯಾಗಿ ನೀಡಿದ್ದಾರೆ. ಅವರಿಗೆ ಸಂಸ್ಥೆಯ ವತಿಯಿಂದ ತುಂಬು ಹೃದಯದ ಧನ್ಯವಾದ ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಸದಸ್ಯರಾದ ಸಿ.ವಿ.ಶ್ರೀನಿವಾಸಶಟ್ಟಿ, ಜಿ.ಆರ್.ಅಶ್ವಥ್‌ನಾರಾಯಣ್, ವಲಯ ಪ್ರತಿನಿಧಿ ಯೋಗರಾಜು,
ಜಿ ಅಧ್ಯಕ್ಷರಾದ ನಾಗರಾಜು, ಚಂದ್ರಪ್ರಭಜೈನ್… ಶ್ರೀಅನುಲಕ್ಷ್ಮೀ ಸೇವಾ ಟ್ರಸ್ಟ್ ಕಾರ್ಯದರ್ಶಿ ಮಹದೇವು ಇತರರು ಹಾಜರಿದ್ದರು.