ಚಾಮರಾಜನಗರ: ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರ ಆಪ್ತ ಸಹಾಯಕರು ಹಾಗೂ ಸಮಾಜ ಸೇವಕರಾದ ಸ್ನೇಹಜೀವಿ ಗೋಪಾಲ್ ಹೊರೆಯಾಲ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಸ್ನೇಹ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಸಂತೇಮರಹಳ್ಳಿ ಸಂತೇಮಾಳದಲ್ಲಿ ಯಶಸ್ವಿಯಾಗಿ ನಡೆಯಿತು.
ಬಿಪಿ, ಶುಗರ್, ಕಫ ಪರೀಕ್ಷೆ ಹಾಗೂ ಇತರೆ ಜನರಲ್ ಪರೀಕ್ಷೆ ಮಾಡಲಾಯಿತು. ಅಗತ್ಯಯುಳ್ಳವರಿಗೆ ಔಷಧಿ ವಿತರಿಸಲಾಯಿತು. ಶಿಬಿರ 70ಕ್ಕೂ ಹೆಚ್ಚು ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಆಯೋಜಕರು ಆನಂದ್ ಹೆಗ್ಗವಾಡಿಪುರ ಮಾತನಾಡಿ, ಚಾಮರಾಜನಗರ: ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ ಅವರ ಆಪ್ತ ಸಹಾಯಕರು ಹಾಗೂ ಸಮಾಜ ಸೇವಕರಾದ ಸ್ನೇಹಜೀವಿ ಗೋಪಾಲ್ ಹೊರೆಯಾಲ ಅವರ ಹುಟ್ಟು ಹಬ್ಬದ ಅಂಗವಾಗಿ ಅವರ ಸ್ನೇಹ ಬಳಗದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಭಗವಂತ ಅವರಿಗೆ ಹೆಚ್ಚು ಆರೋಗ್ಯ, ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಶಿಬಿರದಲ್ಲಿ ಲೋಕೇಶ್, ಪ್ರಕಾಶ್, ಶ್ರೀನಿವಾಸ್ ಟೈಲರ್, ಪ್ರಭಾವತಿ, ರಾಜಮ್ಮ, ಶಿವಮ್ಮ, ಚಿರಂತನ್ ಚೇತನ್, ರಾಧ, ಮಂಜುಳ, ಸುಮಾ,ಮಂಜುನಾಥ್, ಶೈಲಾ, ನಂದಿನಿ ಇತರರು ಭಾಗವಹಿಸಿದ್ದರು.