ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಮನೆಮನೆಗೆ ತಲುಪಿಸಿ: ಹೊಸಹಳ್ಳಿಮಧುಸೂದನ್

  • ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆ


ಚಾಮರಾಜನಗರ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು ಗ್ರಾಮಗಳಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆಮನೆಗೆ ಮನವರಿಕೆ ಮಾಡಿಕೊಟ್ಟರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂದು ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಹೊಸಹಳ್ಳಿ ಮಧುಸೂದನ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಿತಿ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ನಿಮ್ಮ ನಾಯಕತ್ವ. ಬೆಳೆಯುತ್ತದೆ. ಪ್ರಚಾರ ಸಮಿತಿ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ, ಪಕ್ಷದ ಸಂಘಟನೆಯು ಆಗುತ್ತದೆ ಎಂದರು.
ಶಾಸಕರ ಅಧ್ಯಕ್ಷತೆಯಲ್ಲಿ ಆಯಾಯ ತಾಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಂಡು ಪ್ರಚಾರ ಸಮಿತಿಯ ಪದಾಧಿಕಾರಿಗಳಿಗೆ ಕಾಂಗ್ರೆಸ್‌ನ ಇತಿಹಾಸ, ಸರ್ಕಾರದ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ನಮ್ಮ ನಾಯಕತ್ವದ ಗುಣಗಳನ್ನು ಹೇಗೆ ರೂಪಿಸಬೇಕು. ಅದನ್ನು ಮನವರಿಕೆ ಮಾಡಿ ಕೊಡಲಾಗುತ್ತದೆ. ಅವರು ಆಗ ತಳಮಟ್ಟದಲ್ಲಿ ಕಾಂಗ್ರೆಸ್ ಕಟ್ಟಲು ಒಂದು ಅವಕಾಶ ಆಗುತ್ತದೆ ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ ಮಾತನಾಡಿ ಚಾಮರಾನಗರ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರಕ್ಕೆ ಪಂಚಗ್ಯಾರಂಟಿ ಯೋಜನೆಯಿಂದ 200 ಕೋಟಿ ರೂ. ಸಂದಾಯ ಆಗುತ್ತದೆ. ಇದುವರೆಗೂ 600 ಕೋಟಿ ರೂ. ಸಂದಾಯ ಆಗಿದೆ. 5 ವರ್ಷಗಳಿಗೆ ಒಂದು ಸಾವಿರ ಕೋಟಿಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗಿದೆ. ಇದನ್ನು ಪ್ರಚಾರ ಮಾಡಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಮಹದೇವು ಮಾತನಾಡಿ, ಜಿಲ್ಲಾ ಪ್ರಚಾರ ಸಮಿತಿ ಆದ ಮೇಲೆ ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಕಾಂಗ್ರೆಸ್‌ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ತಳಮಟ್ಟದಲ್ಲಿ ಪ್ರಚಾರ ಪಡಿಸಬೇಕು ಎಂದರು.
ಮತ್ತೊಬ್ಬ ಜಿಲ್ಲಾ ಕಾರ್ಯದರ್ಶಿ ಚಿಕ್ಕಮಹದೇವು, ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್, ತಾ.ಪಂ.ಮಾಜಿ ಸದಸ್ಯ ಕುಮಾರನಾಯಕ್‌, ಕೆಬ್ಬೇಪುರ ಮಧು ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ  ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷರಾದ  ಸೈಯದ್ ನಜುರುಲ್ಲಾ, ಅಶೋಕ್ ಕುಮಾರ್, ಮಹಾಲಿಂಗಸ್ವಾಮಿ, ಜಿಲ್ಲಾ ಮುಖ್ಯ ಸಂಯೋಜಕರಾದ ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ ರಾಜಕುಮಾರ್,  ಪುಟ್ಟಸ್ವಾಮಿ, ಮೊಹಮ್ಮದ್ ಇಮ್ಮಾದ್ ವುಲ್ಲಾ,  ಸಿದ್ದರಾಜು ನಾಯಕ, ಶಂಕರ್, ರುದ್ರೇಶ್, ಅರ್.ಡಿ .ಉಲ್ಲಾಸ್,ನಿಜಾಂ ಮುದ್ದೀನ್, ಬ್ಲಾಕ್ ಅಧ್ಯಕ್ಷರಾದ ಬಿಸಲವಾಡಿ ರವಿ, ಅಪ್ಸರ್ ಅಹಮದ್, ಮನೋಹರ, ವಿ.ಪ್ರಸಾದ್, ಜಿ.ಕೆ.ಲೋಕೇಶ್, ಬಾಲಕೃಷ್ಣ, ಪದಾಧಿಕಾರಿಗಳು, ಜ್ಯೋತಿ ಪ್ರಕಾಶ್, ಮಹದೇವಮ್ಮ, ಭಾಗವಹಿಸಿದ್ದರು.

Leave a Reply

Your email address will not be published. Required fields are marked *