ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಇಡೀ ಜಗತ್ತಿನಲ್ಲಿ ವಿಶೇಷ ಹೋರಾಟ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ : ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಇಡೀ ಜಗತ್ತಿನಲ್ಲಿ ವಿಶೇಷವಾದ ಹೋರಾಟ. ಬ್ರಿಟಿಷರ ವಿರುದ್ಧ ನಿರಂತರ ಹೋರಾಟದಲ್ಲಿ ಹಿಂಸಾತ್ಮಕ ಮತ್ತು ಅಹಿಂಸಾತ್ಮಕ ಹೋರಾಟಗಳಿಗೆ ಸ್ಪೂರ್ತಿಯಾದದ್ದು ಭಾರತೀಯ ಹಾಗೂ ಕನ್ನಡ ಸಾಹಿತ್ಯ ಪ್ರಭಾವವೆಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ “ಸಾಹಿತ್ಯ ಮತ್ತು ಸ್ವರಾಜ್ಯ” ಕುರಿತು ಕಾರ್ಯಕ್ರಮದಲ್ಲಿ ಮಾತನಾಡುತ್ತ ಸಾಹಿತ್ಯ ಕೃತಿಗಳಲ್ಲಿ ವಿವರವಾದ ಮತ್ತು ಅಪಾರವಾದ ಸ್ವಾತಂತ್ರ ಹೋರಾಟದ ವಿವರಣೆಗಳು ಉಲ್ಲೇಖಗಳು ಇದೆ. ಸ್ವಾತಂತ್ರ್ಯ ಚಳುವಳಿಯ ಹೋರಾಟಗಳು ನೂರಾರು ಸಾಹಿತ್ಯ ಕೃತಿಗಳಿಗೆ ಪ್ರೇರಣೆ ನೀಡಿತು. ಬಂಗಾಳಿ ಸಾಹಿತ್ಯ, ಮರಾಠಿ ಸಾಹಿತ್ಯಗಳ ಕೊಡುಗೆಗಳ ಪ್ರಭಾವದಿಂದ ಕನ್ನಡ ಸಾಹಿತ್ಯದಲ್ಲಿ ನೂರಾರು ಕವಿಗಳು ಬರಹಗಾರರು ತಮ್ಮದೇ ಆದ ರೀತಿಯಲ್ಲಿ ಹೋರಾಟದ ಚಿತ್ರಣವನ್ನು ನೀಡಿ ಸ್ವಾತಂತ್ರ ಚಳುವಳಿಗೆ ಚೈತನ್ಯ ಮತ್ತು ಪ್ರೋತ್ಸಾಹ ಶಕ್ತಿಯನ್ನು ನೀಡಿದ ಕೊಡುಗೆಯನ್ನು ಮರೆಯಲಾಗದು. ಬಂಕಿಮ ಚಂದ್ರ ಚಟರ್ಜಿ, ರವೀಂದ್ರನಾಥ್ ಟ್ಯಾಗೋರ್, ಈಶ್ವರ ಚಂದ್ರ ವಿದ್ಯಾಸಾಗರ, ಶರತ್ ಚಂದ್ರ ಚಟರ್ಜಿರವರ ಕೃತಿಗಳು ಕನ್ನಡಕ್ಕೆ ಬಂದವು. ಬಂಕಿಮ ಚಂದ್ರ ಚಟರ್ಜಿ ಅವರ ಆನಂದಮಠ ತುಂಬಾ ಪ್ರಭಾವ ಬೀರಿತು. ಬಿಂಡಿಗನವಿಲೆ ವೆಂಕಟಾಚಾರ್ಯ ಶಾಸ್ತ್ರಿಗಳು ಈಶ್ವರ ಚಂದ್ರ ವಿದ್ಯಾಸಾಗರರ ಮೂಲಕ ಬಂಗಾಳವನ್ನು ಕಲಿತು ಕನ್ನಡದಲ್ಲಿ ಸಾಹಿತ್ಯವನ್ನು ಅನುವಾದಿಸಿದ ಹೆಗ್ಗಳಿಕೆ ಕಾಣಬಹುದು. ವೀರ ಸಾವರ್ಕರ್ ಅವರ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಕೃತಿ, ಆಲೂರು ವೆಂಕಟರಾಯರು ಲೋಕಮಾನ್ಯ ತಿಲಕ್ ರವರ ಸಂಪರ್ಕಕ್ಕೆ ಬಂದು ಕರ್ನಾಟಕ ಕಥಾ ವೈಭವ ಎಂಬ ಕೃತಿಯನ್ನು ರಚಿಸಿ ಕನ್ನಡಿಗರಲ್ಲಿ ದೇಶಪ್ರೇಮ ಸ್ವಾಭಿಮಾನ ಮೂಡಿಸುವಲ್ಲಿ ಅಪಾರ ಕೊಡುಗೆ ಇದೆ. ಗಳಗನಾಥರ ಕನ್ನಡಿಗರ ಕರ್ಮ ಕಥೆ, ಡಿವಿಜಿಯವರ ವಿದ್ಯಾರಣ್ಯ ವಿಷಯ, ನಿಂಗಣ್ಣಯ್ಯನವರ ಶ್ರೀ ವಿದ್ಯಾರಣ್ಯರು, ಹಾಸನದ ರಾಜಾರಾಯರು, ಬಸವರಾಜ ಕಟ್ಟಿಮನಿ, ಕೋ ಚೆನ್ನಬಸಪ್ಪ, ಕುಳಕುಂದ ಶಿವ ರಾಯರು, ಶ್ರೀರಂಗ, ರಾವ್ ಬಹದ್ದೂರ್, ನಾರಾಯಣರಾವ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕುವೆಂಪು, ದ ರಾ ಬೇಂದ್ರೆ, ಗೋಕಾಕ್, ಕೈಯಾರ ಕಿಂಕಣ್ಣ ರೈ, ಕೃಷ್ಣಶರ್ಮರು, ತಾತಾಚಾರ್ಯ ಶರ್ಮರು, ಗೋಪಾಲಕೃಷ್ಣ ಅಡಿಗ, ಕೆ ಎಸ್ ನರಸಿಂಹಸ್ವಾಮಿ,ಮುಂತಾದ ನೂರಾರು ಸಾಹಿತಿಗಳು ಸ್ವಾತಂತ್ರ್ಯ ಚಳುವಳಿಯ ಹೋರಾಟದ ಕಥೆಗಳನ್ನು ತಮ್ಮದೇ ದಾಟಿಯಲ್ಲಿ ಕಥೆ, ಕಾದಂಬರಿ,ಕವನಗಳ ಮೂಲಕ ಹೋರಾಟಗಾರರಿಗೆ ಸ್ಪೂರ್ತಿಯನ್ನು, ಶಕ್ತಿಯನ್ನು ತುಂಬಿದರು. ಅನೇಕ ಕವನಗಳು ಇಂದಿಗೂ ರಾಷ್ಟ್ರಪ್ರೇಮವನ್ನು ಇಮ್ಮಡಿಗೊಳಿಸುತ್ತಿದೆ. ಸಾಹಿತ್ಯ ಪ್ರಭಾವ ಸ್ವಾತಂತ್ರ್ಯ ಚಳುವಳಿಯಲ್ಲಿ ತುಂಬಾ ಪ್ರಭಾವವನ್ನು ಬೀರಿತು ಎಂದು ಋಗ್ವೇದಿ ತಿಳಿಸಿದರು.

ಕಾರ್ಯಕ್ರಮದಲ್ಲಿ ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್ ರವರು ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿ, ಸ್ವಾತಂತ್ರ್ಯ ಚಳುವಳಿ ಸಾವಿರಾರು ಜನರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ ಚಳುವಳಿಯ ಸಂದರ್ಭದಲ್ಲಿ ಸಾಹಿತ್ಯ ರಚನೆಯ ಮೂಲಕ ಅನೇಕ ಜನರಿಗೆ ಸ್ಪೂರ್ತಿಯನ್ನು ತಂದಿತು. ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಮತ್ತು ಸ್ವಾತಂತ್ರ್ಯದ ಕುರಿತು ಚಿಂತನ ಕಾರ್ಯಕ್ರಮ ಏರ್ಪಡಿಸಿರುವುದು ಮೆಚ್ಚುಗೆ ಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಎಸ್ ಲಕ್ಷ್ಮಿ ನರಸಿಂಹ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಮತ್ತು ಸ್ವರಾಜ್ಯದ ಕುರಿತು ಚಿಂತನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಭಾಷೆ ಹಾಗೂ ಧರ್ಮ ಒಂದೇ ನಾಣ್ಯದ ಎರಡು ಮುಖಗಳು. ನಾವೆಲ್ಲರೂ ಭಾರತೀಯರು ಎಂಬ ಕಲ್ಪನೆಯನ್ನು ಮೂಡಿಸಿದೆ. ಸಾಹಿತ್ಯದ ಮೂಲಕ ಸ್ಫೂರ್ತಿ ತುಂಬಿದರು ಎಂದರು.
ರವಿಚಂದ್ರ ಪ್ರಸಾದ್, ಶಿವಲಿಂಗ ಮೂರ್ತಿರವರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಸಾಹಿತಿಗಳಾದ ಬಂಕಿಮ ಚಂದ್ರ ಚಟರ್ಜಿ, ರವೀಂದ್ರನಾಥ್ ಠಾಗೋರ್, ಕುವೆಂಪು,ಬೇಂದ್ರೆ ಅಡಿಗರ ಹಾಡುಗಳನ್ನು ರಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಾಪುರುಷೋತ್ತಮ್, ನಿವೃತ್ತ ಶಿಕ್ಷಕಿ ಸರಸ್ವತಿ,ಅಂಕೇಶ್, ಮಂಜೇಶ್,ಮಧು, ಶಿವರಾಮ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *