ವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ

ಬೆಂಗಳೂರ : ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ಅವರ ಇದೆ ಸೆಪ್ಟಂಬರ್ ೨೫ ರಂದು ರಾಜ್ಯಾದ್ಯಂತ ತೆರೆಗೆ ಬರಲಿರುವ ‘ರುದ್ರಾಭಿಷೇಕಂ’
ಚಿತ್ರದ ಟ್ರೈಲರ್ ಬಿಡುಗಡೆ ಕರ‍್ಯಕ್ರಮ ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ನೆರವೇರಿತು.

ನಾಡಿನ ಕಲೆ, ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಕಲೆ ಆರಾಧಿಸುವ ಕುಟುಂಬ ಕುರಿತು ಮತ್ತು ವೀರಭದ್ರ ದೇವರ ಇತಿಹಾಸ ಹೇಳುವ
‘ರುದ್ರಾಭಿಷೇಕಂ’ದಲ್ಲಿ ವೀರಗಾಸೆಯ ಕುಣಿತ ಗಮನ ಸೆಳೆಯಲಿದೆ.

ವೀರಗಾಸೆಯ ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡ ವಿಜಯರಾಘವೇಂದ್ರ ಮಾತನಾಡಿ ಇದೊಂದು ದೈವ ಕಲ್ಪನೆಯ ಸಾಮಾಜಿಕ ಚಿತ್ರ ಇಲ್ಲಿ ತಂಧೆ ಮತ್ತು
ಮಗನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ವಿಶೇಷ ಪಾತ್ರ ಅನಿಸಿದ್ರಿಂದ ನಾನು ಈ ಸಿನಿಮಾಕ್ಕೆ ಒಪ್ಪಿಕೊಂಡೆ ಎಂದರು.

ಸಂಗೀತ ನರ‍್ದೇಶಕ ವಿ ಮನೋಹರ್ ಮಾತನಾಡಿ ನಾನು ಸಂಗೀತ ನೀಡುವುದರೊಂದಿಗೆ ಇದರಲ್ಲಿ ಒಂದು ಪಾತ್ರ ಮಾಡಿರುವೆ. ಈ ಪಾತ್ರದಲ್ಲಿನ ನಾನು ಡಿಫರೆಂಟ್ ಆಗಿ ಕಾಣುತ್ತಿದ್ದೇನೆ. ಮೇಕಪ್ ಆದಮೇಲೆ ನಾನು ಹೀಗೆ ಕಾಣುತ್ತಿದ್ದೇನೆ ಎಂದು ಸಂಶಯ ಬಂದಿದ್ದು ಆತರದ ಲುಕ್ ನಲ್ಲಿ ನನ್ನನ್ನು ಚಿತ್ರಿಸಿದ್ದಾರೆ ಎಂದರು. ಥ್ರಿಲ್ಲರ್ ಮಂಜು ಮಾತನಾಡಿ ವಿಜಯರಾಘವೇಂದ್ರ ಅವರಿಗಾಗಿಯೇ ಹೊಡೆದಾಟದ ಪಟ್ಟುಗಳನ್ನು ಡಿಫ್ರೆಂಟ್ ಆಗಿ ಮಾಡಿದ್ದೇನೆ ಎಂದರು. ನರ‍್ದೇಶಕ ವಸಂತ್ ಕುಮಾರ್ ಮಾತನಾಡಿ ಚಿತ್ರೀಕರಣ ಸಂರ‍್ಭದಲ್ಲಿ ಹಲವು ಅಡೆತಡೆಗಳು ಎದುರಾದರು ಅವುಗಳನ್ನು ಮೆಟ್ಟಿನಿಂತು ಪರ‍್ಣಪ್ರಮಾಣದ ಚಿತ್ರವನ್ನು ತಂದ ಬಗೆಯನ್ನು ಹೇಳಿದರು.

ಈಗಾಗಲೇ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ ಎಂದರು. ಚಿತ್ರದಲ್ಲಿ ವಿಜಯರಾಘವೇಂದ್ರ, ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ,
ಬಲರಾಜ್‌ವಾಡಿ, ಶಂಕರ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್ ಪ್ರಸಾದ, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ್ ಹೂಗಾರ್, ಸೌಂರ‍್ಯ, ನವನೀತ, ಮಮತಾ, ಮಂಜುಳಾ, ಧನಲಕ್ಷ್ಮಿ, ಸ್ವಾತಿ, ಮೊದಲಾದವರಿದ್ದಾರೆ.

ತಾಂತ್ರಿಕ ರ‍್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್, ವಿ.ಮನೋಹರ್ ಸಂಗೀತ , ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಥ್ರಿಲ್ಲರ್‌ಮಂಜು ಸಾಹಸ, ಬಾಬುಖಾನ್
ಕಲಾ ನರ‍್ದೇಶನ, ನೊಣವಿನಕೆರೆಕುಮಾರ ಪ್ರಸಾಧನ, ಪಶುಪತಿ ವಸ್ತ್ರಾಲಂಕಾರ, ಮುತ್ತುರಾಜ್.ಟಿ ಸಂಕಲನ, ನಾಗೇಂದ್ರ, ಡಾ. ಪ್ರಭು.ಗಂಜಿಹಾಳ, ಡಾ.ವೀರೇಶ್ ಹಂಡಿಗಿ ಪಿ. ಆರ್. ಓ, ಸಹನರ‍್ದೇಶನ ಮನು ಮತ್ತು ಧೀರಜ್, ಚಿತ್ರಕಥೆ-ಸಾಹಿತ್ಯ ನರ‍್ದೇಶನ ಕೆ ವಸಂತ್‌ಕುಮಾರ್ ಅವರದಿದೆ.

ಎನ್.ಜಯರಾಮ್, ಕೆ.ಎನ್.ಮಂಜುನಾಥ್, ಕೆ. ವೆಂಕಟೇಶ್, ಬಿ.ಚಿದಾನಂದ ಮರ‍್ತಿ, ಸುರೇಶ ಬಾಬು, ಕೆ.ಎಸ್.ರವಿ, ಬಿ.ಕೆ.ಅಶ್ವತ್ ನಾರಾಯಣ, ಡಾ.ಎಂ.ಶಿವಕುಮಾರ, ಕುಸುಮಾ ವಸಂತಕುಮಾರ ಒಂಬತ್ತು ಜನ ನರ‍್ಮಾಪಕರಿದ್ದಾರೆ.


-ಡಾ.ಪ್ರಭು.ಗಂಜಿಹಾಳ
ಮೊ:೯೪೪೮೭೭೫೩೪೬

Leave a Reply

Your email address will not be published. Required fields are marked *