ಸದೃಢ ದೇಶ ಕಟ್ಟುವ ಯುವಜನತೆ ಈ ದೇಶದ ಬೆನ್ನುಲುಬು : ಜಿಲ್ಲಾಧಿಕಾರಿ ಶ್ರೀರೂಪ

ಚಾಮರಾಜನಗರ: ಯುವಜನರು ಈ ದೇಶದ ಬೆನ್ನುಲುಬಾಗಿದ್ದು, ಯುವಕ, ಯುವತಿಯರು ಕುತೂಹಲಕ್ಕಾಗಿ ಮಾದಕ ವ್ಯಸನಿಗಳಾಗದೇ ಉತ್ತಮ ಭವಿಷ್ಯಕ್ಕಾಗಿ ಸದೃಢ ದೇಶ ಕಟ್ಟಲು ಮುಂದಾಗುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.

   ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಯುವ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಎನ್.ಎಸ್.ಎಸ್ ಘಟಕ, ಚಾಮರಾಜನಗರ ವಿಶ್ವವಿದ್ಯಾನಿಲಯ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ನಶ ಮುಕ್ತ - ಯುವ ವಿಕಸಿತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

   ಸದೃಢ ದೇಶ ಕಟ್ಟಲು ಸದೃಢ ಯುವಕರು ಬೇಕು ಎಂಬ ವಿವೇಕಾನಂದರ ಸಂದೇಶದ ಮಹತ್ವವನ್ನು ನಾವೆಲ್ಲರೂ ಮನಗಾಣಬೇಕಿದೆ. ಈ ದೇಶದ ಶಕ್ತಿಯಾಗಿರುವ ಯುವ ಸಂಪನ್ಮೂಲ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಿರುವ ನಿಟ್ಟಿನಲ್ಲಿ ಯುವಕ, ಯುವತಿಯರು ಮದ್ಯ ಹಾಗೂ ಮಾದಕ ವ್ಯಸನಕ್ಕೆ ಸಿಲುಕದಂತೆ ಜೀವನದುದ್ದಕ್ಕೂ ಎಚ್ಚರ ವಹಿಸಬೇಕು. ಮಾದಕ ಪದಾರ್ಥಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತರಾಗಿ ಅವುಗಳಿಂದ ದೂರವಿದ್ದು, ಮಾದಕ ವಸ್ತುಗಳ ವಿರುದ್ಧ ಇತರರಿಗೂ ವ್ಯಾಪಕ ಅರಿವು ಮೂಡಿಸುವ ಅಗತ್ಯವಿದೆ ಎಂದರು.

   ಮಾದಕ ವ್ಯಸನಕ್ಕೆ ಒಳಗಾಗುವವರಲ್ಲಿ ಹದಿಹರೆಯದ ಯುವಕ, ಯುವತಿಯರೇ ಹೆಚ್ಚು. ಕುತೂಹಲಕ್ಕಾಗಿ ಸೇವಿಸುವ ಮಾದಕ ವಸ್ತುಗಳು ಮುಂದಿನ ದಿನಗಳಲ್ಲಿ ಚಟವಾಗಿ ಪರಿವರ್ತಿತವಾಗಿ ಯುವಜನರ ಶೈಕ್ಷಣಿಕ ಜೀವನ ಕುಂಠಿತವಾಗಲಿದೆ. ಸಾಮಾಜಿಕ ಹಾಗೂ ಕೌಟುಂಬಿಕ ಸಾಮರಸ್ಯ, ಆರ್ಥಿಕ ಸ್ಥಿರತೆ ಹಾಳಾಗುವ ಸಂಭವವಿದೆ. ಮಕ್ಕಳ ತಂದೆ-ತಾಯಿಯರು ಇದರಿಂದ ನಿರಾಶರಾಗಲಿದ್ದಾರೆ. ಒಂದುವೇಳೆ ಈಗಾಗಲೇ ಯುವಕ, ಯುವತಿಯರು ಮಾದಕ ವ್ಯಸನಿಗಳಾಗಿದ್ದರೆ ಯೋಗ, ಧ್ಯಾನದ ಮೂಲಕ ವ್ಯಸನದಿಂದ ಹೊರಬಂದು ನಶಾಮುಕ್ತ ಸಮಾಜಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು. 

   ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಎಂ.ಎನ್. ಶಶಿಧರ್ ಅವರು ಮಾತನಾಡಿ ನಶಾಮುಕ್ತ ಭಾರತ ಅಭಿಯಾನದಡಿ ಪೊಲೀಸ್ ಇಲಾಖೆಯು ವಿವಿಧ ಇಲಾಖೆಗಳು, ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಲ್ಲಿ ರಚನಾತ್ಮಕ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುತ್ತಿದೆ. ಅಭಿಯಾನದ ಉದ್ದೇಶ ಹೆಚ್ಚು ಜನರಿಗೆ ತಲುಪಿಸುವುದೇ ಆಗಿದೆ. ಯುವಜನತೆ ಒಮ್ಮೆ ವ್ಯಸನಿಗಳಾಗಿ ಮಾರ್ಪಟ್ಟರೆ ಅದರಿಂದ ಹೊರಬರಲು ಕಷ್ಟಸಾಧ್ಯವಾಗಲಿದೆ. ಅದಕ್ಕಾಗಿ ಯುವಜನಾಂಗಕ್ಕೆ ಹೆಚ್ಚಿನ ಜಾಗೃತಿ ಅಗತ್ಯವಾಗಿದೆ ಎಂದರು. 

   ಜಿಲ್ಲೆಯಲ್ಲಿ ಯುವಜನರಲ್ಲದೇ, ಆದಿವಾಸಿಗಳು ಸಹ ಹೆಚ್ಚಾಗಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವುದು ಕಂಡುಬಂದಿದೆ. ಮದ್ಯ ಹಾಗೂ ಮಾದಕ ಪದಾರ್ಥಗಳ ಸಾಗಾಣಿಕೆ, ಮಾರಾಟ, ಬಳಕೆ ಶಿಕ್ಷರ್ಹ ಅಪರಾಧವಾಗಿದೆ. ಮಾದಕ ವಸ್ತುಗಳ ಸೇವನೆಯ ಸರಪಳಿಯನ್ನು ಪರಿಣಾಮಕಾರಿಯಾಗಿ ಕಳಚಲು ರೈಸ್ (ಆರ್.ಐ.ಎಸ್.ಈ) ಹಾಗೂ ಬೇಡ ಬ್ರೋ ಎಂಬ ವಿಶಿಷ್ಟ ಕಾರ್ಯಕ್ರಮಗಳನ್ನು ಸರ್ಕಾರವೇ ಅಧಿಕೃತವಾಗಿ ಅನುಷ್ಠಾನ ಮಾಡಿದೆ. ಉತ್ತಮ ಕಲಿಕೆಯನ್ನು ಗುರಿಯಾಗಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಯುವ ಸಮೂಹ ಮುಂದಾಗಬೇಕು ಎಂದು ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಎಂ.ಎನ್. ಶಶಿಧರ್ ಅವರು ಹೇಳಿದರು.

   ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಪಸಭಾಪತಿ ಡಾ. ಎಂ. ಮಹೇಶ್ ಅವರು ಮಾತನಾಡಿ ಮಾದಕ ವ್ಯಸನಿಗಳಲ್ಲಿ ಪುರುಷರು ಮಾತ್ರವಲ್ಲ, ಇತ್ತೀಚೆಗೆ ಮಹಿಳೆಯರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ಐ.ಸಿ.ಯುನಲ್ಲಿ ದಾಖಲಾಗಿರುವ ಶೇ. 40ರಷ್ಟು ಮಂದಿ ಮಾದಕ ವ್ಯಸನಿಗಳಾಗಿದ್ದಾರೆ. ದೇಶದಲ್ಲಿ ಶೇ. 70ರಷ್ಟು ಜನರು ಆಲ್ಕೋಹಾಲ್ ವ್ಯಸನಕ್ಕೆ ಒಳಗಾಗಿದ್ದು, ಕರ್ನಾಟಕದಲ್ಲಿ ಶೇ. 11ರಷ್ಟು, ಚಾಮರಾಜನಗರ ಜಿಲ್ಲೆಯಲ್ಲಿ ಶೇ. 8.2ರಷ್ಟು ಹಾಗೂ ಜಿಲ್ಲೆಯ ಶೇ. 22ರಷ್ಟು ಆದಿವಾಸಿಗಳು ವ್ಯಸನಕ್ಕೀಡಾಗಿರುವುದು ಕಂಡುಬಂದಿದೆ. ವ್ಯಸನದಿಂದ ಹೊರಬರಲು ಜಾಗೃತಿ ಕಾರ್ಯಕ್ರಮಗಳು ಬಹಳ ಮುಖ್ಯವಾಗಿದೆ ಎಂದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈ ಭಾರತ್ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಪಿ. ಅಖಿಲ್ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ. ಮಹೇಶ್ ಅವರು ನಶ ಮುಕ್ತ - ಯುವ ವಿಕಸಿತ ಭಾರತ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

   ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್.ಎಸ್.ಎಸ್ ಘಟಕ ಅಧಿಕಾರಿ ದೀಪ, ಜಾನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ, ಜೈ ಭುವನೇಶ್ವರಿ ಯುವಕ ಸಂಘದ ಅಧ್ಯಕ್ಷರಾದ ಜಿ. ಬಂಗಾರು, ಚಿತ್ರಕಲಾವಿದರಾದ ಮಧುಸೂಧನ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *