ಜವಾಹರ ನವೋದಯ ವಿದ್ಯಾಲಯದಲ್ಲಿ 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಾಮರಾಜನಗರ: ಚಾಮರಾಜನಗರ ತಾಲೂಕು ಹೊಂಡರಬಾಳುವಿನಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 2026-27ನೇ ಸಾಲಿನ 11ನೇ ತರಗತಿ ದಾಖಲಾತಿಗೆ ಅರ್ಹ ಅಭ್ಯರ್ಥಿಗಳಿಂದ ಆಫ್‍ಲೈನ್ ಮೂಲಕ ನೇರ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ಅವಧಿಯನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ.  

ಮೀಸಲಾತಿಯು ಕೇಂದ್ರ ಸರ್ಕಾರದ ನಿಯಮದಂತೆ ಅನ್ವಯವಾಗಲಿದೆ. ಅಭ್ಯರ್ಥಿಗಳು ಆಫ್‍ಲೈನ್ ಮೂಲಕ ಉಚಿತವಾಗಿ ಈ ಹಿಂದೆ ಜೂನ್ 25ರೊಳಗೆ ಅರ್ಜಿ ಸಲ್ಲಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆಫ್‍ಲೈನ್ ಅರ್ಜಿ ಸಲ್ಲಿಸಲು ಅರ್ಜಿ ಪ್ರತಿಗಳನ್ನು ಅಭ್ಯರ್ಥಿಗಳು hಣಣಠಿs://ಜಡಿive.googಟe.ಛಿom/ಜಿiಟe/ಜ/1ಐgeಒ3uಟಿZ5ಡಿhಕಿಇಛಿಅ-ಔb03ಆgಜಥಿಗಿತಿಏಏಈತಿh/vieತಿ?usಠಿ=shಚಿಡಿiಟಿg   ವೆಬ್‍ಸೈಟ್ ಮೂಲಕ ಹಾಗೂ ಶಾಲಾ ಕಚೇರಿಯಲ್ಲೂ ಅರ್ಜಿ ಪ್ರತಿಯನ್ನು ಉಚಿತವಾಗಿ ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ಸಹಾಯವಾಣಿ ಸಂಖ್ಯೆ 9008259934, 9495246505…

Leave a Reply

Your email address will not be published. Required fields are marked *