ಚಾಮರಾಜನಗರ: ಚಾಮರಾಜನಗರದ ನಿರ್ಮಿತಿ ಕೇಂದ್ರವು ಕರ್ನಾಟಕ ಸರ್ಕಾರದ ಸಹಕಾರ ಸಂಘಗಳ ನೋಂದಾಯಿತ ಕಾಯ್ದೆ-1960ರ ಪ್ರಕಾರ ನೋಂದಾಯಿತ ಸಂಸ್ಥೆಯಾಗಿದ್ದು, ಈ ಕೇಂದ್ರದಲ್ಲಿ ಖಾಲಿ ಇರುವ ಯೋಜನಾ ವ್ಯವಸ್ಥಾಪಕರ (ಪ್ರಾಜೆಕ್ಟ್ ಮ್ಯಾನೇಜರ್) ಒಂದು ಹುದ್ದೆಗೆ ಮೂರು ವರ್ಷದ (03) ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಯ ಸಂಖ್ಯೆ ಒಂದು(01) ಇದೆ. ಒಂದೇ ಹುದ್ದೆ ಆಗಿರುವುದರಿಂದ ಯಾವುದೇ ಮೀಸಲಾತಿ ನಿಗದಿಪಡಿಸಿರುವುದಿಲ್ಲ.
ಅಭ್ಯರ್ಥಿಗಳು ಯು.ಜಿ.ಸಿ ಅಥವಾ ಎ.ಐ.ಸಿ.ಟಿ.ಇ ಯಿಂದ ಮಾನ್ಯತೆ ಪಡೆದ ಎಂ.ಟೆಕ್ ಪದವಿ(ಫುಲ್ ಟೈಮ್/ರೆಗ್ಯುಲರ್)ತೇರ್ಗಡೆಯಾಗಿರಬೇಕು.(ಸಿವಿಲ್ ಎಂಜಿನಿಯರಿಂಗ್/ಟೆಕ್ನಾಲಜಿಯಲ್ಲಿ ಪದವಿ ಹೊಂದಿರಬೇಕು ಮತ್ತು ಎಂ.ಟೆಕ್ ಇನ್ ಸ್ಟ್ರಕ್ಚರಲ್ ಎಂಜಿನಿಯರಿಂಗ್/ ಎಂ. ಆರ್ಕ್ ಆರ್ಕಿಟೆಕ್ಚರ್ ವಿದ್ಯಾರ್ಹತೆ ರೆಗ್ಯುಲರ್ ಮೋಡ್‌ನಲ್ಲಿ ಹೊಂದಿರಬೇಕು.)
ವಯೋಮಿತಿ 45 ವರ್ಷಗಳು ಮೀರಿರಬಾರದು(ಅರ್ಜಿ ಸಲ್ಲಿಸುವ ದಿನಾಂಕಕ್ಕೆ).
ಸರ್ಕಾರಿ/ಅರೆ ಸರ್ಕಾರಿ/ ಸ್ವಾಮ್ಯದ ಇತರೆ ಸಂಸ್ಥೆಗಳು/ನಿಗಮ/ಮಂಡಳಿಗಳಲ್ಲಿ ಕನಿಷ್ಠ 10 ವರ್ಷಗಳು ಕಾರ್ಯನಿರ್ವಹಿಸಿದವರಿಗೆ ಆದ್ಯತೆ ನೀಡಲಾಗುವುದು.(ಅರ್ಜಿ ಸಲ್ಲಿಸುವ ದಿನಾಂಕಕ್ಕೆ)
ಅರ್ಹ ವಿದ್ಯಾರ್ಹತೆ ಮತ್ತು ಸೇವಾ ಅನುಭವವುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ನವೆಂಬರ್ 18 ರಿಂದ ಡಿಸೆಂಬರ್ 2 ರ ಸಂಜೆ 5 ಗಂಟೆಯೊಳಗೆ ಸ್ವಯಂ ದೃಢೀಕೃತ ದಾಖಲಾತಿಯೊಂದಿಗೆ https://chamrajnagar.nic.in/en/ ಇಲ್ಲಿಗೆ ಆನ್ ಲೈನ್ ಮೂಲಕ ಸಲ್ಲಿಸಬಹುದು
ಅರ್ಜಿಗಳನ್ನು ಮದ್ದಾಂ, ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸುವಂತಿಲ್ಲ ಎಂದು
ನಿರ್ಮಿತಿ ಕೇಂದ್ರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
