ಕಾಗಲವಾಡಿಯಲ್ಲಿ ಗಾಳಿಮಳೆಗೆ  ಬಾಳೆ ಫಸಲು ನಾಶ

  • ಸೂಕ್ತ ಪರಿಹಾರ ಕೊಡಿಸುವಂತೆ ರೈತ ಕೆ.ಎಂ.ನಾಗಸುಂದ್ರ ಜಿಲ್ಲಾಡಳಿತಕ್ಕೆ ಮನವಿ

ಚಾಮರಾಜನಗರ:  ಗುರುವಾರ ಸಂಜೆ ಬಿದ್ದ ಜೋರು ಗಾಳಿ ಮಳೆಗೆ  ಕಾಗಲವಾಡಿಯಲ್ಲಿ ಬಾಳೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ.
ಗ್ರಾಮದ ಗೌಡಿಕೆ ಕೆ.ಎಂ.ನಾಗಸುಂದ್ರ ಎಂಬ ರೈತರಿಗೆ ಸೇರಿದ 1 ಎಕರೆ ಪ್ರದೇಶದ ಸುಮಾರು 1200ಕ್ಕೂ ಹೆಚ್ಚು ಫಸಲಿಗೆ ಬಂದಿದ್ದ
ನೇಂದ್ರ ಬಾಳೆ ಗಿಡಗಳು ನೆಲಸಮವಾಗಿದ್ದು,  ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೂ.ವೆಚ್ಚ ಮಾಡಲಾಗಿದೆ.ಕನಿಷ್ಠ 4 ಲಕ್ಷ ರೂ ಸಿಗುವ ನಿರೀಕ್ಷೆಯಲ್ಲಿದ್ದು ಮಳೆಯಿಂದ ನಷ್ಟು ಉಂಟಾಗಿದೆ. ಬಾಳೆಗೆ ಫಸಲಿಗೆ ಮಾಡಿದ ಸಾಲ ಬಡ್ಡಿ ಕಟ್ಟಲು ತೊಂದರೆ ಆಗಿದ್ದು,ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ನಷ್ಡಕ್ಕೊಳಗಾದ ಕೆ.ಎಂ.ನಾಗಸುಂದ್ರ ಆಳಲು ತೊಡಗಿಕೊಂಡಿದ್ದಾರೆ.

Leave a Reply

Your email address will not be published. Required fields are marked *