ಮಕ್ಕಳ ಹೊಸ ಕಲಿಕೆಗೆ ಬೇಸಿಗೆ ಶಿಬಿರ ಪೂರಕ : ನ್ಯಾಯಾಧೀಶರಾದ ಈಶ್ವರ್

ಚಾಮರಾಜನಗರ: ಮಕ್ಕಳ ಹೊಸ ಕಲಿಕೆಗೆ ಬೇಸಿಗೆ ಶಿಬಿರ ಪೂರಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಹೇಳಿದರು.
   ನಗರದ ರೋಟರಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅನುಪಮಾ ಟ್ರಸ್ಟ್, ರೋಟರಿ ಸಂಸ್ಥೆ ಸಹಕಾರದಲ್ಲಿ ನಡೆದ  ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ರಜಾದಿನಗಳಲ್ಲಿ ಮಕ್ಕಳು ‌ಮನೆಯಲ್ಲಿದ್ದರೆ ಟಿವಿ ನೋಡುತ್ತಾ, ಮೊಬೈಲ್  ಗೇಮ್ ಆಡ್ತಾ ಕೂರುತ್ತಾರೆ. ಸೋಮಾರಿಗಳಾಗುತ್ತಾರೆ.ಬೇಸಿಗೆ ಶಿಬಿರಕ್ಕೆ ಬಂದರೆ. ಹೊಸಹೊಸ ವಿಷಯಗಳನ್ನು ಕಲಿಯಲು ಸಾಧ್ಯವಾಗುತ್ತದೆ. ಮಕ್ಕಳ ಸುರಕ್ಷಿತೆ, ಆಯೋಜಕರ ಅನುಭವ, ಮಕ್ಕಳಿಗೆ ಯಾವ ವಿಷಯದಲ್ಲಿ ಅಶಕ್ತಿ ಇದೆ ಎಂಬುದನ್ನು ಗುರುತಿಸಿ ಬೇಸಿಗೆ ಶಿಬಿರಗಳಿಗೆ ಸೇರಿಸಬೇಕಾಗುತ್ತದೆ ಎಂದರು.
  ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುರೇಶ್ ಮಾತನಾಡಿ, ಅಂಗನವಾಡಿ ಮಕ್ಕಳು ಈ ಶಿಬಿರದ ಉಪಯೋಗಪಡೆದುಕೊಂಡು ಓದಿನ ಕಡೆಗೆ ಆದ್ಯತೆ ನೀಡಲು ಅನುಕೂಲವಾಗಿದೆ.  ಇದರಿಂದ ಮಕ್ಕಳಿಗೆ ತುಂಬಾ ಅನುಕೂಲಗಳೇ ಜಾಸ್ತಿಯಾಗಿದೆ  ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
    ಅನುಪಮಾ ಟ್ರಸ್ಟ್ ಅಧ್ಯಕ್ಷ ಡಾ. ಪಿ. ಪ್ರೇಮಾ ವೈ.ಕೆ.ಮೋಳೆ ಪ್ರಸ್ತಾವಿಕ ವಾಗಿ ಬೇಸಿಗೆ ಶಿಬಿರಗಳು, ಮಕ್ಕಳ ದೈಹಿಕ, ಮಾನಸಿಕ ವೃದ್ದಿಗೆ ಸಹಕಾರಿಯಾಗಿವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡದ ಬದುಕಿನಲ್ಲಿ ಇಂತಹ ಬೇಸಿಗೆ ಶಿಬಿರಗಳ ಮಕ್ಕಳ ಆರೋಗ್ಯ ಅಭಿವೃದ್ಧಿ ಪೂರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆರಹಳ್ಳಿ ಬಸವರಾಜು,  ಶ್ರುತಿ, ರೇವಣ, ವೃಷಬೇಂದ್ರಪ್ಪ,  ಜನಹಿತಾಸಕ್ತಿ ಹೋರಾಟ ಗಾರರ ಸುರೇಶ್ ರಾಮಸಮುದ್ರ, ಕಂದೆಗಾಲ ಶಿವಣ್ಣ ರಾಜ್ಯ ಸಂಯೋಜಕ ಮಹಮದ್ ಗೌಸ್, ಪ್ರಾಂಶುಪಾಲ ರಂಗಸ್ವಾಮಿ,  ಸಿದ್ದಶೆಟ್ಟಿ, ಪುಷ್ಪಮರಿಸ್ವಾಮಿ,
ಯಶೋಧ, ಮಕ್ಕಳು, ಪೋಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *