ಚಾಮರಾಜನಗರ; ನಗರದ ರಾಮಸಮುದ್ರ ಬಡಾವಣೆಯ ಶ್ರೀಗುರುಕಂಬಳೇಶ್ವರ ಭಿಕ್ಷದ ಮಠ ವತಿಯಿಂದ ಮೇ.23,24 ರಂದು ಬಸವ ಜಯಂತಿ, ಧಾರ್ಮಿಕ ಸಭೆ ನಡೆಯಲಿದೆ ಎಂದು ಗೌಡಿಕೆ ಮಹೇಶ್ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೇ.23.ರಂದು ಶನಿವಾರ ಬಸವ ಜಯಂತಿ ಅಂಗವಾಗಿ ಜಗಜ್ಯೋತಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ಬೆಳಿಗ್ಗೆ 10 ಗಂಟೆಗೆ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಸಂಜೆಗೆ ಮುಕ್ತಾಯವಾಗಲಿದೆ ಎಂದರು.
ಧಾರ್ಮಿಕ ಸಭೆ : ಮೇ.24 ರಂದು ಭಾನುವಾರ ಬೆಳಿಗ್ಗೆ10:30 ಕ್ಕೆ
ಶ್ರೀಮಠ
ಮಹದೇವಸ್ವಾಮೀಜಿಗಳಿಗೆ ಗುರುವಂದನೆ,
ಶ್ರೀ
ಮಲ್ಲನಮೂಲೆ ಚನ್ನಬಸವಮಹಾಸ್ವಾಮೀಜಿ ಶ್ರೀಗಳವರಿಗೆ ನುಡಿನಮನ ಕಾರ್ಯಕ್ರಮ, ಬಸವ ಮಂದಿರದ 12 ನೇ ವರ್ಷ ಹಾಗೂ ಶ್ರೀಮಠದ 30 ನೇ ವರ್ಷದ ವಾರ್ಷಿಕೋತ್ಸವ
ಪ್ರಯುಕ್ತ ಧಾರ್ಮಿಕ ಸಭೆ ಅಯೋಜಿಸಲಾಗಿದೆ ಎಂದರು
ಅಂದು ಶ್ರೀಮಠದ ಆವರಣದಲ್ಲಿ ಬೆಳಿಗ್ಗೆ 7 ಕ್ಕೆ ಧ್ವಜಾರೋಹಣ ವನ್ನು ನಗರದ ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಾಸ್ವಾಮೀಜಿ ನೆರವೇರಿಸುವವರು, ಬೆಳಿಗ್ಗೆ 8 ಕ್ಕೆ ಸುಕ್ಷೇತ್ರ ಮಲ್ಲನಮೂಲೆ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದಲಿಂಗಮಹಾಸ್ವಾಮೀಜಿಗಳ ದಿವ್ಯಪಾದಪೂಜೆ, ಬೆಳಿಗ್ಗೆ 10:30ಕ್ಕೆ ಧಾರ್ಮಿಕ ಸಭೆ ಆರಂಭವಾಗಲಿದ್ದು, ದೇವನೂರು ಶ್ರೀಗುರುಮಲ್ಲೇಶ್ವರ ತ್ರಿವಿಧ ದಾಸೋಹ ಮಠದ ಶ್ರೀ ಮಹಾಂತಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವವರು, ಶ್ರೀಮಲ್ಲನಮೂಲೆ ಸುಕ್ಷೇತ್ರ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಸಿದ್ದಲಿಂಗಸ್ವಾಮಿಜೀ ಅಧ್ಯಕ್ಷೆ ತೆ ವಹಿಸುವವರು, ಹರವೆ ವಿರಕ್ತ ಮಠಾಧ್ಯಕ್ಷರಾದ ಶ್ರೀ ಸರ್ಪಭೂಷಣಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಮರಿಯಾಲ ಮುರುಘರಾಜೇಂದ್ರ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರ
ಸ್ವಾಮೀಜಿ ಶ್ರೀಬಸವೇಶ್ವರ ಭಾವಚಿತ್ರಕ್ಕೆ ಪುಷ್ಷಾರ್ಚನೆ ಮಾಡುವವರು, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಾಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮೀಜಿ, ಮುಡುಕನಪುರ ಹಲವಾರ ಮಠಾಧ್ಯಕ್ಷರಾದ ಶ್ರೀ ಷಡಕ್ಷರ ದೇಶಿಕೇಂದ್ರಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ದೇವನೂರು ನಿವೃತ್ತ ಪ್ರಾಂಶುಪಾಲ ಪ್ರೊ.ಸದಾಶಿವಮೂರ್ತಿ, ಅಖಿಲ ಭಾರತೀಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವವರು, ವಿವಿಧ ಮಠಾಧೀಶರುಗಳು ಭಾಗವಹಿಸಲಿದ್ದಾರೆ ಈ ಕಾರ್ಯಕ್ರಮಕ್ಕೆ ಬಸವಾದಿ ಶರಣರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಮುವಾರು ಯಜಮಾನರಾದ ಆರ್.ಪುಟ್ಟಮಲ್ಲಪ್ಪ, ಯಜಮಾನ ನಾಗರಾಜಪ್ಪ. ಗೌಡಿಕೆ ಗುರುಮಲ್ಲಪ್ಪ, ಮಾಜಿ ಯಜಮಾನರಾದ ಆರ್.ವಿ.
ಮಹದೇವಸ್ವಾಮಿ, ಎಲ್.ಮಹದೇವಪ್ಪ,
ಮಾಜಿ ಗೌಡಿಕೆ ನಾಗರಾಜು, ಯುವ ಮುಖಂಡ ಆರ್.ಎನ್.ನವೀನ್ ಕುಮಾರ್ ಹಾಜರಿದ್ದರು.