- ಅನರ್ಹರಿಗೆ ಪಿಂಚಣಿ ರದ್ದು ಮಾಡಿ ಅರ್ಹರಿಗೆ ಮಾಶಾಸನ ಬಿಡುಗಡೆ ಮಾಡಲು ಒತ್ತಾಯ.
- ಮೇ .30 ರೊಳಗೆ ಮಾಶಾಸನ ಬಿಡುಗಡೆ ಮಾಡದಿದ್ದರೆ ಜಿಲ್ಲಾಡಳಿತ ಭವನ ಮುಂದೆ ಪ್ರತಿಭಟನೆ
ಚಾಮರಾಜನಗರ: ವಿಕಲಚೇತನರಿಗೆ 3 ತಿಂಗಳಿಂದ ಬಾಕಿಯಿರುವ ಮಾಶಾಸನವನ್ನು ಮಂಜೂರು ಮಾಡುವಂತೆ ಜಿಲ್ಲಾಡಳಿತವನ್ನು ಕರ್ನಾಟಕ ರಾಜ್ಯ ಅಂಗವಿಕಲ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ವಿ. ಕುಮಾರ್ ಕೊಳ್ಳೇಗಾಲ ಆಗ್ರಹಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ,ವಿಕಲಚೇತನರು ಸಮಾಜದಲ್ಲಿ ಗೌರವಹಿತವಾದ ಬದುಕನ್ನು ಬದುಕಲಿ ಎಂದು ಸಾಮಾಜಿಕ ಭದ್ರತೆಯನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಂದ ಜಂಟಿಯಾಗಿ ಜಾರಿಗೊಳಿಸಿರುತ್ತದೆ. ಇದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 25 ಸಾವಿರಕ್ಕೂಹೆಚ್ಚು ಫಲಾನುಭವಿಗಳು ಈ ಸೌಲಭ್ಯವನ್ನು ಪಡೆಯುತ್ತಿರುತ್ತಾರೆ ಇದರಲ್ಲಿ 800 ರೂ. 1400 ರೂಪಾಯಿ, ರೂ.2000ಗಳನ್ನು ಪಡೆಯುತ್ತಿರುವ ವಿಕಲಚೇತನರು ಈ ಸೌಲಭ್ಯವನ್ನು ಪಡೆದ ವಿಕಲಚೇತನರು ತನ್ನ ದೈನಂದಿನ ಖರ್ಚುಗಳನ್ನು ಮಾಡುತ್ತಾ ಅದರಲ್ಲಿ ಆಸ್ಪತ್ರೆ ಖರ್ಚು ಔಷಧಿಯ ಖರ್ಚು ಮತ್ತು ಆಹಾರ ಸೌಲಭ್ಯಗಳಿಗಾಗಿ. ಮನೆ ಬಾಡಿಗೆ.ವಾಹನ ದುರಸ್ತಿ. ವಾಹನಗಳಿಗೆ ಪೆಟ್ರೋಲ್. ಇತ್ಯಾದಿಗಳಿಗೆ ಬಳಕೆ ಮಾಡುತ್ತಿರುತ್ತಾರೆ ಆದರೆ ದುರಾದೃಷ್ಟವಸ ಮೂರು ತಿಂಗಳುಗಳಿಂದ ಈ ಮಾಸಾಸನ ಹಣ ನಮ್ಮ ಜಿಲ್ಲೆಯಲ್ಲಿ ಬಂದಿರುವುದಿಲ್ಲ ಇದರಿಂದ ವಿಕಲಚೇತನರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ ಇದನ್ನು ಕೇಳಿದರೆ ನಕಲಿ ದಾಖಲಾತಿಗಳನ್ನು ನೀಡಿ ಸೌಲಭ್ಯ ಪಡೆಯುತ್ತಿದ್ದಾರೆ ಅದನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದೇವೆ ಆದ ಕಾರಣ ಯಾರಿಗೂ ನೀಡಲಿಲ್ವಾ ಎನ್ನುತ್ತಿದ್ದಾರೆ ಇದು ಸರಿಯೇ ತಾವುಗಳು ನಕಲಿ ಅಂಗವಿಕಲನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡಿಸಿ ಪತ್ತೆ ಹಚ್ಚಿ ನಿಜವಾದ ಅಂಗವಿಕಲರಿಗೆ ದಯಮಾಡಿ ತೊಂದರೆ ಕೊಡಬೇಡಿ ನೀವು ಪರೀಕ್ಷಿಸಿಕೊಳ್ಳಿ ವಿಕಲಚೇತನರಿಗೆ ಮೊದಲು ಮಾಸಾಸವನ್ನು ಪೂರ್ಣವಾಗಿ ವಿತರಿಸಿ ಮೂರು ತಿಂಗಳಿಂದ ತಡೆ ಹಿಡಿದಿರುವ ಎಲ್ಲ ಮೊತ್ತ ವನ್ನು ಏಕಕಾಲದಲ್ಲಿ ಪಾವತಿಸಿ ಇದರಿಂದ ಅಂಗವಿಕಲರು ತಮ್ಮ ದೈನಂದಿನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾಡಳಿತ ಜಿಲ್ಲೆಯ ವಿಕಲಚೇತನರಿಗೆ 3 ತಿಂಗಳಿಂದ ಬಾಕಿಯಿರುವ ಮಾಶಾಸನವನ್ನು ಮೇ 30 ರೊಳಗೆ
ಮಂಜೂರು ಮಾಡಬೇಕು ಇಲ್ಲದಿದ್ದರೆ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಅಂಗವಿಕಲರ ಸಮಾಜ ಮತ್ತು ಹೋರಾಟ ಸೇವಾ ಸಮಿತಿ ಅಧ್ಯಕ್ಷ ಉತ್ತುವಳ್ಳಿ ಸಿದ್ದಯ್ಯ ಮಾತನಾಡಿ, ಮೂರು ತಿಂಗಳುಗಳಿಂದ ಜಿಲ್ಲೆಯ
ವಿಕಲಚೇತನರಿಗೆ ಮಾಶಾಸನ ಬಿಡುಗಡೆಯಾಗಿಲ್ಲ. ಇದರಿಂದ ತುಂಬಾ ಸಮಸ್ಯೆ ಆಗಿದೆ. ಮೇ.30 ರೊಳಗೆ ಮಾಶಾಸನ ಬಿಡುಗಡೆ ಮಾಡದಿದ್ದರೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಲಾಗುವುದು ಅದಕ್ಕೂ ಸ್ಪಂದಿಸದಿದ್ದರೆ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಂಗವಿಕಲರ ಸಮಾಜ ಮತ್ತು ಹೋರಾಟ ಸೇವಾ ಸಮಿತಿ ಕಾರ್ಯದರ್ಶಿ ಮಂಗಲ ರಮೇಶ್, ಉಪಾಧ್ಯಕ್ಷ ಮಂಗಲ ಹೊಸೂರು ಸ್ಟಿಫನ್, ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯೆ ದೀಪಾಕುಮಾರಿ ಹಾಜರಿದ್ದರು.