ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಪ್ರಮಾಣವಚನ : ನಗರದಲ್ಲಿ ಉಪ್ಪಾರ ಸಮುದಾಯದಿಂದ ಸಂಭ್ರಮ

ಚಾಮರಾಜನಗರ: ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಅವರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಉಪ್ಪಾರ ಸಮುದಾಯ ಸಂಭ್ರಮಾಚರಣೆ ಮಾಡಿತು..
  ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಬೆಂಗಳೂರಿನ ರಾಜಭವನದಲ್ಲಿ ನೂತನ ಸಚಿವರಾಗಿ ಸಿ.ಪುಟ್ಟರಂಗಶೆಟ್ಟರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ  ಉಪ್ಪಾರ ಸಮುದಾಯದ ಯಜಮಾನರು, ಮುಖಂಡರು, ಯುವಕರು ನೂತನ ಸಚಿವರಾದ ಸಿ.ಪುಟ್ಟರಂಗಶೆಟ್ಟರ ಭಾವಚಿತ್ರ ಹಿಡಿದು,
ಪಟಾಕಿ ಸಿಡಿಸಿ, ಸಿಹಿ ಸಂಭ್ರಮಿಸಿದರು.
ಕಾಂಗ್ರೆಸ್ ಪಕ್ಷವು ಉಪ್ಪಾರ ಸಮುದಾಯ ಏಕೈಕ ಸಚಿವರಾಗಿ ಸಿ.ಪುಟ್ಟರಂಗಶೆಟ್ಟಿ ಅವರನ್ನು ಮಾಡಿರುವುದು ತುಂಬಾ ಖುಷಿ ತಂದಿದ್ದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ವರಿಷ್ಠರಿಗೆ ಉಪ್ಪಾರ ಸಮುದಾಯ ವತಿಯಿಂದ ಈ ಮೂಲಕ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.  ಈ ಸಂದರ್ಭದಲ್ಲಿ ಯಜಮಾನರಾದ ನಾಗಶೆಟ್ಟಿ, ಮಸಣಶೆಟ್ಟಿ, ಪೈಲ್ವಾನ್ ನಂಜಪ್ಪ, ಚನ್ನಿಗಶೆಟ್ಟಿ,  ಯುವಕರಾದ ನಟರಾಜು,ಮಹೇಶ್, ಮಂಜು ಹಾಜರಿದ್ದರು.

Leave a Reply

Your email address will not be published. Required fields are marked *