ರೈತರ ಸಾಲ ಮನ್ನಾ ಮಾಡುವಂತೆ ಸಿ.ವೈ.ಅಭಿಲಾಶ್ ಒತ್ತಾಯ

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ ): ರಾಜ್ಯದಲ್ಲಿ ಬರಗಾಲ ಆವರಿಸಿದ್ದು ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಸರ್ಕಾರವು ರೈತರ ನೆರವಿಗೆ ಧಾವಿಸಬೇಕೆಂದು ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ವೈ.ಅಭಿಲಾಶ್ ಮನವಿ ಮಾಡಿದರು.

ಅವರು ಸಾಲಿಗ್ರಾಮ ತಾಲೂಕಿನ ಚನ್ನoಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025 – 26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಂಘದಿಂದ 2025 – 26ನೇ ಸಾಲಿನಲ್ಲಿ ಆರು ಕೋಟಿ 65 ಲಕ್ಷ ಹಾಗೂ 2026 – 27ನೇ ಸಾಲಿನಲ್ಲಿ ಮೂರು ಕೋಟಿ 66 ಲಕ್ಷ ರೂಗಳ ಕೆಸಿಸಿ, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನ, ಹೈನುಗಾರಿಕೆ ಸಾಲ ಸೇರಿದಂತೆ ವಿವಿಧ ಸಾಲಗಳನ್ನು ವಿತರಣೆ ಮಾಡಲಾಗಿದ್ದು ಸಂಘವು
2025 – 26ನೇ ಸಾಲಿನಲ್ಲಿ ಐದು ಲಕ್ಷ ರೂಗಳ ನಿವ್ವಳ ಲಾಭ ಗಳಿಸಿದೆ ಎಂದರು.

ಸಂಘದ ಎಲ್ಲಾ ದಾಖಲೆಗಳನ್ನು ಗಣಕೀಕೃತ ಉತ್ತಮವಾಗಿ ಮಾಡುವ ಮೂಲಕ ರಾಜ್ಯದಲ್ಲಿ ಉತ್ತಮ ಸಂಘ ಎಂಬ ಪುರಸ್ಕಾರವನ್ನು ನಮ್ಮ ಸಂಘವು ಪಡೆದಿರುವುದು ಸಂಘದ ಪಾರದರ್ಶಕ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಇದಕ್ಕೆ ಸಹಕಾರ ನೀಡಿದ ಸಂಘದ ಆಡಳಿತ ಮಂಡಳಿಯವರು, ಸಿಬ್ಬಂದಿ ವರ್ಗದವರು ಹಾಗೂ ಸಂಘದ ಸರ್ವ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದರು.

ಮುಂದಿನ ದಿನಗಳಲ್ಲಿ ಸಂಘದ ಸದಸ್ಯರುಗಳಿಗೆ ಹೆಚ್ಚಿನ ಸಾಲ ಸೌಲಭ್ಯಗಳು, ಗೊಬ್ಬರ ಸೇರಿದಂತೆ ವಿವಿಧ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನ ಮಾಡುವ ಮೂಲಕ ಸಂಘದ ಬೆಳವಣಿಗೆಯೊಂದಿಗೆ ಸದಸ್ಯರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸಂಘದ ಸರ್ವ ಸದಸ್ಯರುಗಳು ಕೂಡ ಯಶಸ್ವಿನಿ ಯೋಜನೆಯಲ್ಲಿ ನೊಂದಣಿ ಮಾಡಿಕೊಳ್ಳುವ ಮೂಲಕ ಅದರ ಲಾಭವನ್ನು ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ರೈತರುಗಳು ಹಾಗೂ ಗಣ್ಯರುಗಳನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶಂಕರನಾಯಕ, ನಿರ್ದೇಶಕರುಗಳಾದ ಸಿ.ಎಚ್.ಕುಮಾರ, ಚಲುವಯ್ಯ, ಸಿ.ಜಿ.ತಮ್ಮೇಗೌಡ, ಪುಟ್ಟೇಗೌಡ, ಸಿ.ಕೆ.ಮಲ್ಲಿಕಾರ್ಜುನ, ಸೈಯದ್ ಇಸ್ರಾರ್, ಸಿ.ಆರ್.ರಘುನಾಥ್, ಮಾಜಿ ನಿರ್ದೇಶಕ ನರಸಿಂಹೇಗೌಡ, ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ರವಿ, ಸಂಘದ ಸಿಇಓ ಆರ್.ಮಂಜು, ಸಿಬ್ಬಂದಿಗಳಾದ ಹೆಚ್.ಪಿ.ರಾಜೇಶ್, ಕೆ.ಎನ್.ಧನಲಕ್ಷ್ಮಿ, ಶಿಕ್ಷಕ
ಸಿ.ಎನ್.ಪ್ರಭು, ಮುಖಂಡರುಗಳಾದ ಧನಂಜಯ, ಅರವಿಂದ, ಗಂಗಾಧರ, ಕೃಷ್ಣೆಗೌಡ, ಈ.ಚಂದ್ರು, ಅಭಿಜಿತ್, ವೀರಪ್ಪಾಜಿ, ಲೋಕೇಶ್, ಶಿವರಾಮ, ಮಂಜು, ರೇವಣ್ಣ, ಹಲಗೇಗೌಡ, ಪ್ರಮೋದ, ಕಿಟ್ಟಿ, ಸಿ.ಜೆ.ರವಿ, ಪ್ರಕಾಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *