ವಿಜಯ ರಾಘವೇಂದ್ರ ಅಭಿನಯದ ‘ರುದ್ರಾಭಿಷೇಕಂ’ ಚಿತ್ರ ತೆರೆಗೆ

ಹುಬ್ಬಳ್ಳಿ : ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ಅವರ “ರುದ್ರಾಭಿಷೇಕಂ” ಚಿತ್ರ ಇದೆ ಸೆಪ್ಟಂಬರ್ 25 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ನಿರ್ದೇಶಕ ಕೆ.ವಸಂತ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಕಲೆ, ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದಾದ ವೀರಗಾಸೆ ಕಲೆ ಆರಾಧಿಸುವ ಕುಟುಂಬ ಕುರಿತು ಮತ್ತು ವೀರಭದ್ರ ದೇವರ ಇತಿಹಾಸ ಹೇಳುವ ‘ರುದ್ರಾಭಿಷೇಕಂ’ದಲ್ಲಿ ವೀರಗಾಸೆಯ ಕುಣಿತ ಗಮನ ಸೆಳೆಯಲಿದೆ.

ವೀರಗಾಸೆಯ ವಿಶೇಷ ಲುಕ್ ನಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದು ಇದರಲ್ಲಿ ದ್ವಿ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ದೈವ ಕಲ್ಪನೆಯ ಸಾಮಾಜಿಕ ಚಿತ್ರ ಇಲ್ಲಿದೆ ತಂದೆ ಮತ್ತು ಮಗನ ಪಾತ್ರಗಳಲ್ಲಿ ವಿಜಯ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರ ಅನಿಸಿದ್ರಿಂದ ನಾನು ಈ ಸಿನಿಮಾಕ್ಕೆ ಒಪ್ಪಿಕೊಂಡೆ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಸಂಗೀತ ನೀಡುವುದರೊಂದಿಗೆ ಇದರಲ್ಲಿ ಒಂದು ಪಾತ್ರ ಮಾಡಿದ್ದಾರೆ.

ಥ್ರಿಲ್ಲರ್ ಮಂಜು ಅವರು ವಿಜಯರಾಘವೇಂದ್ರ ಅವರಿಗಾಗಿಯೇ ವಿಶೇಷವಾದ ಹೊಡೆದಾಟದ ಪಟ್ಟುಗಳನ್ನು ಇಲ್ಲಿ ಅಳವಡಿಸಿದ್ದಾರೆ ಎಂದರು.

ಚಿತ್ರೀಕರಣ ಸಂದರ್ಭದಲ್ಲಿ ಹಲವು ಅಡೆತಡೆಗಳು ಎದುರಾದರು ಅವುಗಳನ್ನು ಮೆಟ್ಟಿನಿಂತು ಪೂರ್ಣಪ್ರಮಾಣದ ಚಿತ್ರವನ್ನು ತಂದ ಬಗೆಯನ್ನು ನಿರ್ದೇಶಕ ವಸಂತ್ ಕುಮಾರ್ ಹೇಳಿದರು. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿಯೇ ಕಳೆದ ತಿಂಗಳು ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಅಂದು ಮಾಜಿ ಸಿಎಂ ಸಂಸದ ಜಗದೀಶ್ ಶೆಟ್ಟರ್ ಪಾಲ್ಗೊಂಡು ನಮಗೆ ಶುಭ ಕೋರಿದ್ದರು.

ಈಗಾಗಲೇ ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ ಎಂದರು. ಚಿತ್ರದಲ್ಲಿ ವಿಜಯರಾಘವೇಂದ್ರ, ನಾಯಕಿಯಾಗಿ ಪ್ರಿಯಾಂಕ ತಿಮ್ಮೇಶ,
ಬಲರಾಜ್‌ವಾಡಿ, ಶಂಕರ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್ ಪ್ರಸಾದ, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ್ ಹೂಗಾರ್, ಸೌಂದರ್ಯ, ನವನೀತ, ಮಮತಾ, ಮಂಜುಳಾ, ಧನಲಕ್ಷ್ಮಿ, ಸ್ವಾತಿ, ಮೊದಲಾದವರಿದ್ದಾರೆ.

ತಾಂತ್ರಿಕ ವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್, ವಿ.ಮನೋಹರ್ ಸಂಗೀತ ನೀಡಿದ್ದಾರೆ.ಭಜರಂಗಿ ಮೋಹನ್ ನೃತ್ಯ ಸಂಯೋಜನೆ, ಸಾಹಸ ಥ್ರಿಲ್ಲರ್‌ಮಂಜು,
ಕಲಾ ನಿರ್ದೇಶನ ಬಾಬುಖಾನ್ ಮಾಡಿದ್ದಾರೆ. ಮೇಕಪ್ಪ ನೊಣವಿನಕೆರೆಕುಮಾರ, ವಸ್ತ್ರಾಲಂಕಾರ ಪಶುಪತಿ, ಸಂಕಲನ ಮುತ್ತುರಾಜ್.ಟಿ , ಪಿ ಆರ್ ಓ ನಾಗೇಂದ್ರ, ಡಾ. ಪ್ರಭು.ಗಂಜಿಹಾಳ ,ಮನು ಧೀರಜ್,ಸಹ ನಿರ್ದೇಶನ ಚಿತ್ರಕಥೆ-ಸಾಹಿತ್ಯ ನಿರ್ದೇಶನ ಕೆ ವಸಂತ್‌ಕುಮಾರ್ ಅವರದಿದೆ.

ಎನ್.ಜಯರಾಮ್, ಕೆ.ಎನ್.ಮಂಜುನಾಥ್, ಕೆ. ವೆಂಕಟೇಶ್, ಬಿ.ಚಿದಾನಂದ ಮೂರ್ತಿ, ಸುರೇಶ ಬಾಬು, ಕೆ.ಎಸ್.ರವಿ, ಬಿ.ಕೆ.ಅಶ್ವತ್ ನಾರಾಯಣ, ಡಾ.ಎಂ.ಶಿವಕುಮಾರ, ಕುಸುಮಾ ವಸಂತಕುಮಾರ ಒಂಬತ್ತು ಜನ ನಿರ್ಮಾಪಕರಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರಾದ ಚಿದಾನಂದ ಮೂರ್ತಿ, ಅಶ್ವಥ ನಾರಾಯಣ,ಡಾ .ಪ್ರಭು ಗಂಜಿಹಾಳ,ಡಾ.ವೀರೇಶ. ಹಂಡಿಗಿ,ವಿನಾಯಕ್ ಹುಬ್ಬಳ್ಳಿ ಇತರರು ಪಾಲ್ಗೊಂಡಿದ್ದರು.
-ಡಾ.ಪ್ರಭು ಗಂಜಿಹಾಳ
ಮೊ:9448775346

Leave a Reply

Your email address will not be published. Required fields are marked *