ದೊಡ್ಡರಾಯಪೇಟೆಯಲ್ಲಿ ಧಮ್ಮಪಯಣ ಜಾಥಗೆ ಅದ್ಧೂರಿ ಸ್ವಾಗತ

  • ಮೊಂಬತ್ತಿ ಬೆಳಗಿ, ಹೂ ಮಳೆಯೊಂದಿಗೆ ಜಾಥಾ ವಾಹನ ಸ್ವಾಗತಿಸಿ ಬರಮಡಿಕೊಂಡ ಗ್ರಾಮಸ್ಥರು
  • ಗ್ರಾಮಗಳಿಂದ ಕುಟುಂಬ ಸಮೇತರಾಗಿ ಭಾಗವಹಿಸಿ ಸಮ್ಮೇಳನ ಯಶಸ್ವಿಗೆ ಸಹಕರಿಸಲು ಮನವಿ

ಚಾಮರಾಜನಗರ.: ಜಿಲ್ಲೆಯಲ್ಲಿ ಅ.24 ಮತ್ತು 25 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನದ ಅಂಗವಾಗಿ ನಡೆಯುತ್ತಿರುವ ಧಮ್ಮ ಪಯಣ ಜಾಗೃತಿ ಜಾಥಾವನ್ನು ದೊಡ್ಡರಾಯಪೇಟೆ ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿ ಕೊಳ್ಳಲಾಯಿತು.
ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗಕ್ಕೆ ಆಗಮಿಸಿದ ಧಮ್ಮಪಯಣ ಜಾಗೃತಿ ಜಾಥ ಸ್ಥಬ್ಧಚಿತ್ರಕ್ಕೆ.ಗ್ರಾಮಸ್ಥರು ಮೊಂಬತ್ತಿ ಬೆಳಗಿ ಪುಷ್ಪವೃಷ್ಠಿಯೊಂದಿಗೆ.ಸ್ವಾಗತಿಸಿ ಬರಮಾಡಿಕೊಂಡರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಡಾ..ಬಿ.ಆ‌ರ್.ಅಂಬೇಡ್ಕ‌ರ್ ಯುವಕರ ಸಂಘದ ಕಚೇರಿ ಮುಂಭಾಗದಲ್ಲಿ ಮುಕ್ತಾಯಗೊಂಡಿತು.
  ಸ್ವಾಗತ ಸಮಿತಿ ಜಿಲ್ಲಾ ಸಂಚಾಲಕ ವೆಂಕಟರಮಣಸ್ವಾಮಿ ಪಾಪು ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಭೌದ್ಧ ಸಮ್ಮೇಳನ ಮಾಡುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. .24 ಮತ್ತು 25 ರಂದು ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನಕ್ಕೆ ದೊಡ್ಡರಾಯಪೇಟೆ ಗ್ರಾಮದಿಂದ ಕುಟುಂಬ ಸಮೇತರಾಗಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಜಿ.ಪಂ.ಮಾಜಿ ಸದಸ್ಯ ಎ.ಆರ್.ಬಾಲರಾಜು ಮಾತನಾಡಿ. ನಮ್ಮ ಸಹೋದರರಾದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಎ.ಆರ್.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ
ಅಂತಾರಾಷ್ಟ್ರೀಯ ಭೌದ್ಧ ಸಮ್ಮೇಳನ ನಡೆಯಲಿದೆ. ಅದರ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಬೌದ್ಧಧರ್ಮ 2600 ವರ್ಗಗಳು ಆದರೂ ವಿಶ್ವದಾದ್ಯಂತ ಗಟ್ಟಿಯಾಗಿ ನೆಲೆಗೊಂಡಿದೆ. ದೇಶದಲ್ಲಿ ಬೌದ್ಧಧರ್ಮ ಪ್ರವರ್ಧಮಾನಕ್ಕೆ ಬರಲು ಸಾಮ್ರಾಟ್ ಅಶೋಕ್. ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರಮ ಅಪಾರವಾಗಿದೆ. ಶ್ರೇಷ್ಠ ಬೌದ್ಧವನ್ನು ಬೆಳಸಿ.. ಉಳಿಸಬೇಕಿದೆ ಎಂದರು.
ವಕೀಲರಾದ ಅರುಣ್‌ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಅ.24 ಮತ್ತು 25 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನಕ್ಕೆ ನಮ್ಮ ಗ್ರಾಮದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ತಿಳಿಸಿದರು.
ಗ್ರಾಮದ ಯಜಮಾನರಾದ ರಾಜು, ಮಹದೇವಯ್ಯ, ಅಶೋಕ್, ಮಹಾದೇವಸ್ವಾಮಿ, ಮೇಸ್ತ್ರಿ ಮಹದೇವಯ್ಯ
, ಗ್ರಾ.ಪಂ.ಮಾಜಿ ಸದಸ್ಯ ಸಿದ್ದರಾಜು ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಪ್ರತಾಪ್, ಮುಖಂಡರಾದ
ನಾಗರಾಜು, ಪುಟ್ಟರಾಜು, ಪವನ್, ನಟರಾಜು,ಪುಟ್ಟಸ್ವಾಮಿ, ಆಟೋ ರಾಜು, ಮಹಿ ಉಪಾಸಕರು, ಉಪಾಸಕಿಯರು, ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳು,
ಗ್ರಾಮಸ್ಥರು  ಭಾಗವಹಿಸಿದ್ದರು

Leave a Reply

Your email address will not be published. Required fields are marked *