ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 17 ರಿಂದ 19ರವರೆಗೆ ಆಹಾರ ಮೇಳವನ್ನು ನಗರಸಭೆ ಹತ್ತಿರ ಆಯೋಜಿಸಲಾಗಿದ್ದು, ದರಪಟ್ಟಿ ಆಹ್ವಾನಿಸಲಾಗಿದೆ.
ಆಹಾರ ಮೇಳದಲ್ಲಿ ಭಾಗವಹಿಸಲು ಹಾಗೂ ವಿಶೇಷ ತಿಂಡಿ, ತಿನಿಸುಗಳನ್ನು ಮಾಡುವ ಮತ್ತು ಸಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲು ಆಸಕ್ತಿಯುಳ್ಳವರು ದರಪಟ್ಟಿ ಮತ್ತು ಆಹಾರ ಪರವಾನಗಿ ವಿವರಗಳನ್ನು ನಗರದ ಜಿಲ್ಲಾಡಳಿತ ಭವನದಲ್ಲಿರುವ ಆಹಾರ ಇಲಾಖೆ ಕೊಠಡಿ ಸಂಖ್ಯೆ 113, 114 ಕಚೇರಿಗೆ ಅಕ್ಟೋಬರ್ 15ರೊಳಗೆ ಸಲ್ಲಿಸುವಂತೆ ಆಹಾರ ಮತ್ತು ವಸತಿ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related