ಡೈಮಂಡ್‌ಪ್ಲಸ್, ಹೈಯೆಸ್ಟ್ ಪ್ರೋಗ್ರಾಮ್ ಪ್ರಾಜೆಕ್ಟ್ ಪ್ರಶಸ್ತಿ ಮುಡಿಗೇರಿಸಿಕೊಂಡ ಚಾಮರಾಜನಗರ ರೋಟರಿ ಕ್ಲಬ್

  • ಚಾಮರಾಜನಗರ ರೋಟರಿ ಸಂಸ್ಥೆಗೆ ಸಂದ ಗೌರವ: ಕಾಗಲವಾಡಿ ಚಂದ್ರು

ಚಾಮರಾಜನಗರ: ಚಾಮರಾಜನಗರ ರೋಟರಿ ಸಂಸ್ಥೆಗೆ ಡೈಮಂಡ್ ಪ್ಲಸ್ ಪ್ರಶಸ್ತಿ, ಹೈಯೆಸ್ಟ್ ಪ್ರೋಗ್ರಾಮ್ ಪ್ರಾಜೆಕ್ಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
  ಮೈಸೂರು ಯೂನಿಯನ್ ರೆಸಾರ್ಟ್‌ ನಲ್ಲಿ ಅಂತರಾಷ್ಟ್ರೀಯ 3181 ರೋಟರಿ ಸಂಸ್ಥೆ ವತಿಯಿಂದ ನಡೆದ ಅನುಬಂಧ ಅವಾಡ್ಸ್ ನೈಟ್ಸ್ ಕಾರ್ಯಕ್ರಮದಲ್ಲಿ ಜಿಲ್ಲಾ ಗೌರ್ನರ ಪಿ.ಕೆ.ರಾಮಕೃಷ್ಣ, ಸತೀಶ್ ಬೌಲರ್, ಯಶ್ವಸಿ ಸೋಮಶೇಖರ್, ವಿಕ್ರಂದತ್ತ ಅವರು ಚಾಮರಾಜನಗರ ರೋಟರಿ ಅಧ್ಯಕ್ಷ ಕಾಗಲವಾಡಿ ಚಂದ್ರುಗೆ  ಪ್ರಶಸ್ತಿ ಪ್ರದಾನ ಮಾಡಿದರು.
    ಪ್ರಶಸ್ತಿ ಸ್ವೀಕರಿಸಿದ ಕಾಗಲವಾಡಿ ಚಂದ್ರು ಮಾತನಾಡಿ, ನಮ್ಮ ಒಂದು ವರ್ಷದ ಅವಧಿಯಲ್ಲಿ 303 ಸೇವಾ ಕಾರ್ಯಕ್ರಮಗಳನ್ನು ಮಾಡಲಾಗಿತ್ತು ಅದನ್ನು ಗುರುತಿಸಿ ಅಂತರಾಷ್ಟ್ರೀಯ ರೋಟರಿಸಂಸ್ಥೆಯು 3181 ರ ಡೈಮಂಡ್ ಪ್ಲಸ್ ಪ್ರಶಸ್ತಿ, ಹೈಯೆಸ್ಟ್. ಪ್ರೋಗ್ರಾಮ್
  ಪ್ರಶಸ್ತಿ ನೀಡಿ ಗೌರವಿಸಿರುವುದು ತುಂಭಾ ಸಂತಸವಾಗಿದ್ದು, ಇದು ಜಿಲ್ಲೆಗೆ ಹೆಮ್ಮೆ ವಿಚಾರವಾಗಿದೆ. ನಮ್ಮ. ಅವಧಿಯಲ್ಲಿ ಹೆಚ್ಚಿನ ಸೇವಾ ಕಾರ್ಯಕ್ರಮಗಳನ್ನು ಮಾಡಲು ಸಹಕರಿಸಿದ ರೋಟರಿ ಕುಟುಂಬಕ್ಕೆ ಈ ಪ್ರಶಸ್ತಿಗಳು ಸಲ್ಲುತ್ತದೆ.  ಚಾಮರಾಜನಗರ ರೋಟರಿ ಸಂಸ್ಥೆಯಲ್ಲಿ ನಮ್ಮ ಅವಧಿಯಲ್ಲಿ ಹೆಚ್ಚಿನ ಸೇವಾ ಕಾರ್ಯಕ್ರಮಗಳ ಮಾಡಲು ಸಹಕರಿಸಿದ ರೋಟರಿ ಸಂಸ್ಥೆ ಪದಾಧಿಕಾರಿಗಳು, ಸದಸ್ಯರು, ಇತರ ಸಂಘ-ಸಂಸ್ಥೆಗಳ ಮುಖ್ಯಸ್ಥರು ಹಾಗೂ ಚಾಮರಾಜನಗರ ರೋಟರಿ ಸಂಸ್ಥೆಯ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ ಎರಡು ಪ್ರಶಸ್ತಿಗಳನ್ನು ನೀಡಿದ ರೋಟರಿ ಸಂಸ್ಥೆ ಯ3181ರ ಜಿಲ್ಲಾ ಗೌರ್ನರ್ ಪಿ.ಕೆ.ರಾಮಕೃಷ್ಣ, ಸತೀಶ್ ಬೌಲರ್, ಯಶ್ವಸಿ ಸೋಮಶೇಖರ್, ವಿಕ್ರಂದತ್ತ ಅವರಿಗೆ ಈ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನಮ್ಮ ರೋಟರಿ ನಮ್ಮ ಹೆಮ್ಮೆ ಎಂದು ಹರ್ಷ ವ್ಯಕ್ತಪಡಿಸಿದರು.
     ಈ ಸಂದರ್ಭದಲ್ಲಿ ಪಿಡಿಜಿ ಡಾ.ನಾಗರಾರ್ಜುನ್, ಜಿ. ಆರ್,ಆಶ್ವಥ್ ನಾರಾಯಣ್, ಪ್ರಭಾಕರ್, ಪ್ರಕಾಶ್, ಸುರೇಶ್, ಅಬ್ದುಲ್‌ಅಜೀಜ್ ದೀನಾ, ಅಂಕಶೆಟ್ಟಿ, ಶ್ರೀನಿವಾಸನ್, ರಾಮು, ಸಂಜಯ್‌ ಕುಮಾರ್ ಜೈನ್ ಹಾಜರಿದ್ದರು

Leave a Reply

Your email address will not be published. Required fields are marked *