ಪಾರ್ವತಿ ಬಾಲ ಸೇವಾಶ್ರಮ ಮಕ್ಕಳಿಂದ ಕೇಕ್ ಕತ್ತರಿಸಿ ವಿ.ಶ್ರೀನಿವಾಸ ಪ್ರಸಾದ್ ಹುಟ್ಟುಹಬ್ಬ ಆಚರಣೆ

  • ಅಭಿಮಾನಿ ಬಳಗದಿಂದ ಬೆಳಗಿನ ಉಪಹಾರ ವ್ಯವಸ್ಥೆ

ಚಾಮರಾಜನಗರ:  ಸ್ವಾಭಿಮಾನಿ ಚಕ್ರವರ್ತಿ ಮಾಜಿ ಸಂಸದರಾದ ದಿವಂಗತ ವಿ.ಶ್ರೀನಿವಾಸ ಪ್ರಸಾದ್ ರವರ 79ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಅಭಿಮಾನಿ ಬಳಗದ  ಪ್ರಮುಖರಾದ ನಗರಸಭಾ ಮಾಜಿ ಸದಸ್ಯ ರಾಮಸಮುದ್ರ ಬಸವರಾಜು, ಎಲ್.ಪ್ರಸನ್ನ ಅವರ ನೇತೃತ್ವದಲ್ಲಿ ನಗರದ ನ್ಯಾಯಾಲಯದ ರಸ್ತೆಯಲ್ಲಿರುವ ಪಾರ್ವತಿ ಬಾಲ ಸೇವಾಶ್ರಮದ ಮಕ್ಕಳಿಂದ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸಲಾಯಿತು.

ಪಾರ್ವತಿ  ಬಾಲ ಸೇವಾಶ್ರಮದ ಮಕ್ಕಳಿಗೆ  ವಿ. ಶ್ರೀನಿವಾಸ ಪ್ರಸಾದ್ ಅಭಿಮಾನಿ ಬಳಗದ ವತಿಯಿಂದ ಬೆಳಗಿನ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

ತಾ.ಪಂ.ಮಾಜಿ ಅಧ್ಯಕ್ಷ ಚಿಕ್ಕಮಹದೇವು ಮಾತನಾಡಿ, ಕರ್ನಾಟಕ ರಾಜಕಾರಣದಲ್ಲಿ ದಿವಂಗತ ಮಾಜಿ ಕೇಂದ್ರ ಸಚಿವರಾದ ವಿ.ಶ್ರೀನಿವಾಸಪ್ರಸಾದ್ ಅವರು ಅಪರೂಪದ ರಾಜಕಾರಣಿಯಾಗಿದ್ದರು. ಅವರು ನಮ್ಮಿಂದ ದೂರವಾಗದಿದ್ದರು ಅವರು ಮಾಡಿರುವ ಜನಪರಸೇವೆ, ಕಾರ್ಯಗಳು ಜೀವಂತವಾಗಿ ಉಳಿದಿವೆ. ಅವರು ಸ್ವಾಭಿಮಾನದ ಪ್ರತೀಕವಾಗಿದ್ದರು. ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ವಿ.ಶ್ರೀನಿವಾಸಪ್ರಸಾದ್‌. ಅವರು ರಾಜಕೀಯ ಜೀವನದುದ್ದಕ್ಕೂ ಸ್ವಾಭಿಮಾನದಿಂದ ಬದುಕಿದ್ದರು. ಅವರು ಅಂಬೇಡ್ಕ‌ರ್ ಅವರ ಅನುಯಾಯಿಯಾಗಿ ಅವರ ತತ್ತ್ವ. ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜಕಾರಣ ಮಾಡಿದರು. ಅವರು ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ರಾಜಕಾರಣಿಗಳನ್ನು ಹುಟ್ಟು ಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಆದರ್ಶ ವ್ಯಕ್ತಿತ್ವ, ಜೀವನಕ್ರಮ ನಮಗೆ ಮಾದರಿ, ಮಾರ್ಗದರ್ಶನವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭಾ ಮಾಜಿ ಮಾಜಿ ಅಧ್ಯಕ್ಷ  ಸುರೇಶ್ ನಾಯಕ, ಸದಸ್ಯ ರಾಮಸಮುದ್ರ ಬಸವರಾಜು,  ಎಲ್.ಪ್ರಸನ್ನ,  ತಾ.ಪಂ.ಮಾಜಿ ಅಧ್ಯಕ್ಷ ಚಿಕ್ಕಮಹದೇವು, ಸಿ.ಕೆ.ಮಂಜುನಾಥ್,  ನಾಗವಳ್ಳಿ ನಾಗಯ್ಯ,  ಹೆಬ್ಬಸೂರು ರಂಗಸ್ವಾಮಿ,  ಎಂ.ಶಿವಮೂರ್ತಿ, ನಾಗಬಸವಣ್ಣ,  ಸಿದ್ದಯ್ಯನಪುರ ಶಿವರಾಜ್, ಮೋಹನ್, ರವಿಚಂದ್ರಪ್ರಸಾದ್ ಕಹಳೆ,  ಮಹಾದೇವಸ್ವಾಮಿ,ಆಶ್ರಮದ ಮಾತಾಜಿ ಚಂದ್ರಕಲಾ, ವಿದ್ಯಾರ್ಥಿಗಳು ಇತರರು ಹಾಜರಿದ್ದರು.

Leave a Reply

Your email address will not be published. Required fields are marked *