ಡಾ. ಎಸ್ ಎಲ್ ಭೈರಪ್ಪನವರು ವಿಶ್ವ ಶ್ರೇಷ್ಠ ಸಾಹಿತಿ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಭಾರತೀಯ ಇತಿಹಾಸದಲ್ಲಿ ಆಳವಾದ ಸಂಶೋಧನೆ, ಮೌಲ್ಯಗಳ ಚಿಂತನೆ ಹಾಗೂ ಭಾರತೀಯ ಪರಂಪರೆಯ ಬಗ್ಗೆ ನಿಜ, ಸತ್ಯ ವಿಚಾರಗಳನ್ನು ಸಾಹಿತ್ಯದಲ್ಲಿ ದಾಖಲಿಸಿದ ವಿಶ್ವ ಶ್ರೇಷ್ಠ ಸಾಹಿತಿ ಡಾ. ಎಸ್ ಎಲ್ ಭೈರಪ್ಪನವರು. ಆಧುನಿಕ ಯುಗದ ಓದುಗರ ಸಾಹಿತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಡಾ. ಎಸ್ ಎಲ್ ಭೈರಪ್ಪನವರ ಪುಣ್ಯಸ್ಮರಣೆ ಹಾಗೂ ಕೊಡುಗೆಗಳ ಕುರಿತು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಬೈರಪ್ಪನವರ ಜೀವನ ಮತ್ತು ಅವರ ಸಾಧನೆಗಳು ಸರ್ವರಿಗೂ ಮಾದರಿಯಾದದ್ದು. ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳು ಭೈರಪ್ಪನವರ ಸಾಹಿತ್ಯವನ್ನು ಅಧ್ಯಯನವನ್ನು ಮಾಡುವುದರ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ನೈಜತೆಯ ಚಿಂತನೆಗಳನ್ನು ಅಗಾಧವಾಗಿ ಅರಿಯಬಹುದು. ಅವರ 21 ಕಾದಂಬರಿಗಳಲ್ಲೂ ಭಾರತೀಯ ಸಂಸ್ಕೃತಿ, ಪರಂಪರೆ,ರಾಮಾಯಣ, ಮಹಾಭಾರತ, ಸಾಮಾಜಿಕತೆ, ಜೀವನ ಮೌಲ್ಯಗಳು ಮತ್ತು ಭಾರತೀಯ ತತ್ವಶಾಸ್ತ್ರದ ಸತ್ಯವಾದ,ಆಳವಾದ ಅಧ್ಯಯನದ ಹಾಗೂ ಸಂಶೋಧನೆಯ ಮೂಲಕ ನಡೆಸಿದ ಅಪಾರ ಚಿಂತನೆಯ ಸಾಹಿತ್ಯವು ನಮಗೆ ದೊರೆಯುವುದು. ಕಾದಂಬರಿಗಳಾದ ಪರ್ವ, ಆವರಣ, ಮಂದ್ರ, ಗೃಹಭಂಗ, ವಂಶವೃಕ್ಷ, ಸಾರ್ಥ, ದಾಟು, ಕೃತಿಗಳು ಸೇರಿದಂತೆ ಅವರ ಎಲ್ಲಾ ಕಾದಂಬರಿಗಳು ಬಿಡುಗಡೆ ಹಾಗೂ ಬಿಡುಗಡೆಯ ಮುನ್ನವೆ ದಾಖಲೆಯ ಪ್ರಮಾಣದಲ್ಲಿ ಖರೀದಿ ಆಗುತ್ತಿದ್ದು ಅವರ ಸಾಹಿತ್ಯದ ಅಭಿಮಾನಿಗಳು ಮತ್ತು ಓದುಗರ ಕುತೂಹಲವನ್ನು ಸಾಹಿತ್ಯ ವಲಯದಲ್ಲಿ ಕಾಣಬಹುದು. ಬೈರಪ್ಪನವರ ಸಾಹಿತ್ಯ ಇಡಿ ವಿಶ್ವದಲ್ಲಿ ಹಲವಾರು ಭಾಷೆಗಳಲ್ಲಿ ಭಾಷಾಂತರವಾಗಿ ಜನಪ್ರಿಯಗೊಳಿಸಿದೆ. ಕನ್ನಡ ಸಾಹಿತ್ಯದ ಇತಿಹಾಸದ ಪರಂಪರೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಪುಸ್ತಕಗಳು ಓದುಗರ ಕೈ ಹಿಡಿದು ಭೈರಪ್ಪನವರ ಸಾಹಿತ್ಯವಾಗಿರುವುದು ಗೌರವ ತಂದಿದೆ. ಭೈರಪ್ಪನವರ ಸಾಹಿತ್ಯ ಚರ್ಚೆ,ಸಂವಾದಗಳು ನಡೆದು ಸಾಹಿತ್ಯದ ದೃಷ್ಟಿಕೋನಗಳ ಚಿಂತನ ಮಂಥನ ನಡೆಯುತ್ತಿರುವುದೇ ಸಾಕ್ಷಿಯಾಗಿದೆ ಎಂದು ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ರವಿಚಂದ್ರನ್ ಪ್ರಸಾದ್ ರವರು ಭೈರಪ್ಪನವರ ಜೀವನ ಮತ್ತು ಸಾಧನೆಗಳ ಪರಿಚಯವನ್ನು ಮಾಡಿಕೊಟ್ಟು, ಭಾರತೀಯ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಪಾತ್ರಗಳ ಪರಿಚಯವನ್ನು ಎಳೆ ಎಳೆ ಯಾಗಿ ತಿಳಿಸಿ ಕೊಟ್ಟಿರುವ ಭೈರಪ್ಪನವರ ಸಾಹಿತ್ಯದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕ್ರಮ ರೂಪಿಸಿ ಗೌರವ ಸಲ್ಲಿಸಿರುವುದು ಹೆಮ್ಮೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿಕೆ ಆರಾಧ್ಯ,ಪದ್ಮ ಪುರುಷೋತ್ತಮ, ಕಾಗಲವಾಡಿ ರಂಗಸ್ವಾಮಿ, ನಾಗೇಶ್, ಶಿಕ್ಷಕರಾದ ಮಾಲಿನಿ, ಆಲೂರು ಮರಿಸ್ವಾಮಿ, ಶ್ರೀಮತಿ ಆರತಿ, ಇದ್ದರು.

Leave a Reply

Your email address will not be published. Required fields are marked *