ಶ್ರೇಷ್ಠ ಗಾಯಕರ ಗಾಯನದಿಂದ ಸಾಹಿತಿಗಳ ಸಾಹಿತ್ಯಗಳು ಜನರ ಹೃದಯದಲ್ಲಿ ನೆಲೆಸಿದೆ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ : ಶ್ರೇಷ್ಠ ಗಾಯಕರ ಗಾಯನದಿಂದ ಸಾಹಿತಿಗಳ ಸಾಹಿತ್ಯಗಳು ಜನರ ಹೃದಯದಲ್ಲಿ ನೆಲೆಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಪಿ ಬಿ ಶ್ರೀನಿವಾಸ್ ಜನ್ಮದಿನ ಹಾಗೂ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಶ್ರೀ ಅನಂತನಾಗ್ ರವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತ ಪಿ ಬಿ ಶ್ರೀನಿವಾಸ್ ರವರು ಭಾರತೀಯ ಚಿತ್ರರಂಗದ ಹಿನ್ನೆಲೆ ಗಾಯಕರು, ಸಂಯೋಜಕರು,ಕವಿಗಳು, ಗೀತರಚನಕಾರರು, ವಾದ್ಯ ವಾದಕರು ಆಗಿದ್ದರು.
ಎಂಟು ಭಾಷೆಗಳ ಪಾಂಡಿತ್ಯವನ್ನು ಗಳಿಸಿದ ಶ್ರೇಷ್ಠ ವ್ಯಕ್ತಿಗಳು. ಪ್ರತಿವಾದಿ ಭಯಂಕರ ಮನೆತನದ ಹೆಸರನ್ನು ಹೊಂದಿದ್ದ ಶ್ರೀನಿವಾಸರವರು ಚಲನಚಿತ್ರ ರಂಗದಲ್ಲೂ ತಮ್ಮ ಸಂಗೀತ ಸ್ವರದ ಮೂಲಕ ಹೃದಯ ಮನಸ್ಸಿಗೆ ಮುದ ನೀಡುವ ಮೂಲಕ ಕೋಟ್ಯಾಂತರ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾರೆ.
ಸಾವಿರಾರು ಹಾಡುಗಳ ರಚನೆಯನ್ನು ಮಾಡಿರುವ ಪಿಬಿಎಸ್ ಧ್ವನಿ ವಿಶೇಷವಾದದ್ದು.
ಚಲನಚಿತ್ರಗಳ ಹಾಡುಗಳು ಇಂದಿಗೂ ಜನಪ್ರಿಯವಾಗಿದೆ. ಡಾ. ರಾಜಕುಮಾರ್ ಅವರೇ ಹೇಳಿರುವಂತೆ ಪಿಬಿ ಶ್ರೀನಿವಾಸ್ ರವರ ಧ್ವನಿ ನನಗೆ ಆತ್ಮವಿದ್ದಂತೆ ಎಂದಿರುವುದು ಶ್ರೀನಿವಾಸ್ ರವರಿಗೆ ನೀಡಿರುವ ಗೌರವವೇ ಆಗಿದೆ. ರಾಜಕುಮಾರ್ ಅವರ ಚಲನಚಿತ್ರಗಳ ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಪಿಬಿ ಶ್ರೀನಿವಾಸ್ ಅವರ ಗಾಯನವೇ ರಾಜಕುಮಾರ್ ಅವರಿಗೆ ಅತ್ಯುನ್ನತ ಅಭಿನಯ ಹಾಗೂ ಹಾಡುಗಳು ಪೂರಕವಾಗಿ ಎಲ್ಲಾ ಚಿತ್ರಗಳು ಯಶಸ್ವಿಯಾಗಿ ಕನ್ನಡ ಚಿತ್ರರಂಗದಲ್ಲಿ ಬೆಳೆಯಿತು ಎಂದು ತಿಳಿಸಿದರು.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಅನಂತನಾಗ್ ರವರ ಕುರಿತು ಮಾತನಾಡಿದ ಬರಹಗಾರ ಲಕ್ಷ್ಮಿ ನರಸಿಂಹ ಅನಂತ್ ನಾಗ್ ರವರು ತಮ್ಮ ಅಭಿನಯದ ಜೊತೆಗೆ ವ್ಯಕ್ತಿತ್ವದ ಬಹುದೊಡ್ಡ ವ್ಯಕ್ತಿ. ಅವರ ಸಂಸ್ಕೃತ,ಇಂಗ್ಲೀಷ್, ಕನ್ನಡ, ಮರಾಠಿ ಭಾಷೆಗಳ ಜ್ಞಾನ ಅಪಾರವಾದದ್ದು. ಅನಂತ್ ನಾಗ್ ರವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಹೊಂದಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ಗೌರವ ಮತ್ತು ಹೆಮ್ಮೆಯನ್ನು ತಂದಿದೆ. ಕನ್ನಡಕ್ಕೆ ಮೂರನೇ ದಾದಾಸಾಹೇಬ್ ಪ್ರಶಸ್ತಿ ಇಂದು ಪ್ರಧಾನವಾಯಿತು. ಅನಂತ್ ನಾಗ್ ರವರ ಅಭಿನಯ ಯುವ ನಟರಿಗೆ ಮಾದರಿ. ಚಿತ್ರರಂಗದಲ್ಲಿ ತಾಳ್ಮೆ ಹಾಗೂ ಶ್ರೇಷ್ಠ ನಟನೆಯನ್ನು ಅಳವಡಿಸಿಕೊಂಡು ಕೀರ್ತಿವಂತರಾಗಿ ಚಲನಚಿತ್ರರಂಗದಲ್ಲಿ ಉಳಿಯಲು ಯುವ ಪೀಳಿಗೆ ಅನಂತನಾಗರವರ ಶ್ರೇಷ್ಠತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರನ್ ಪ್ರಸಾದ್ ರವರು ಪಿಬಿ ಶ್ರೀನಿವಾಸ್ ರವರ ಚಲನಚಿತ್ರ ಗೀತೆಗಳ ಗಾಯನ ನಡೆಸಿಕೊಟ್ಟರು. ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನೂರಾರು ಕನ್ನಡ ಗೀತೆಗಳು ಹಾಡುವ ಮೂಲಕ ಕನ್ನಡದ ಕಲೆಯ ಸಾಹಿತ್ಯ ಸಂಗೀತ ಕ್ಷೇತ್ರಗಳ ಪರಿಚಯ ಅವರ ಗಾಯನದ ಮೂಲಕ ಪ್ರತಿಯೊಬ್ಬರನ್ನು ತಲುಪಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿ ಕೆ ಆರಾಧ್ಯ,ನಿವೃತ್ತ ಶಿಕ್ಷಕಿ ಸರಸ್ವತಿ, ವೀರಶೆಟ್ಟಿ, ಸುರೇಶ ಗೌಡ, ಬಸವರಾಜು ನಾಗೇಶ, ಮಂಜುನಾಥ, ಸುರೇಶ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *