- ರೋಟರಿ ಸಂಸ್ಥೆ ವತಿಯಿಂದ ಇಂಜಿನಿಯರ್ ದಿನಾಚರಣೆ
ಚಾಮರಾಜನಗರ: ದೇಶಕ್ಕೆ ಇಂಜಿನಿಯರ್‌ಗಳ ಕೊಡುಗೆ ಅಪಾರವಾಗಿದೆ’ ಎಂದು ರೋಟರಿ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಹೇಳಿದರು.
ನಗರದ ರೋಟರಿ ಭವನದಲ್ಲಿ ನಡೆದ ರೋಟರಿ ಸಂಸ್ಥೆ ವತಿಯಿಂದ ನಡೆದ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದ ಮಹಾನ್ ಇಂಜಿನಿಯರ್, ಭಾರತರತ್ನ ಮೊಕ್ಷಗುಂಡಂವಿಶ್ವೇಶ್ವರಯ್ಯ ಅವರ ಜನ್ಮದಿನದ ನೆನಪಿಗಾಗಿ ಇಂಜಿನಿಯರ್ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತ ಸರ್ಕಾರವು 1986ರಲ್ಲಿ ಸೆ.15 ನ್ನು ರಾಷ್ಟ್ರೀಯ ಇಂಜಿನಿಯರ್ ದಿನವೆಂದು ಘೋಷಿಸಿದೆ ಎಂದರು.
ದೇಶದ ಮೂಲಭೂತ ಸೌಲಭ್ಯ, ನೀರಾವರಿ ವ್ಯವಸ್ಥೆ, ಸುಂದರ ಕಟ್ಟಡಗಳ ನಿರ್ಮಾಣ ಕೈಗಾರಿಕಾ ಅಭಿವೃದ್ಧಿಗೆ ಇಂಜಿನಿಯರ್ ಗಳು ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.
ಸನ್ಮಾನ ಸ್ವೀಕರಿಸಿದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿ.ರಮೇಶ್ ಮಾತನಾಡಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಇಂಜಿನಿಯರ್‌ಗಳ ಸೇವೆಯನ್ನು ಗುರುತಿಸಿ ತಮ್ಮಗಳನ್ನು ಸನ್ಮಾನಿಸಿ ತಮ್ಮಗಳ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಇದಕ್ಕಾಗಿ ರೋಟರಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ರೋಟರಿ ಸಂಸ್ಥೆಯು ಮತ್ತಷ್ಟು ಸೇವಾ ಕಾರ್ಯಗಳ ಮೂಲಕ ಜನಸೇವೆ ಮಾಡುವಂತಾಗಲಿ ಎಂದು ಆಶಿಸಿದರು.
ಸನ್ಮಾನ: ಸಹಾಯಕ ಕಾರ್ಯಪಾಲಕ ಅಭಿಯಂತರಾದ ವಿ.ರಮೇಶ್, ಹರದನಹಳ್ಳಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿ. ಧ್ರುಪದ್, ಕಿರಿಯ ಇಂಜಿನಿಯರ್ ಎಸ್.ಮಂಜುನಾಥ್, ರೋಟರಿ ಸಂಸ್ಥೆಯ ಇಂಜಿನಿಯರ್‌ಗಳಾದ ಮೋಹನ್, ರಾಜುವರ್ಗೀಸ್, ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥಾಪಕ ಸದಸ್ಯರಾದ ಜಿ.ಆರ್.ಅಶ್ವಥನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ,ಕಾರ್ಯದರ್ಶಿ ಅಂಕಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
