ವಿದ್ಯಾರ್ಥಿನಿಯರು ಮುಖ್ಯ ವಾಹಿನಿಗೆ ಬನ್ನಿ : ಡಾ. ಎಂ ಪ್ರಭು

ಚಾಮರಾಜನಗರ ಸೆ,4 ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ ಎಂ ಪ್ರಭು ಕರೆ ನೀಡಿದರು.

ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ದೈಹಿಕ ಶಿಕ್ಷಣ ವಿಭಾಗ ಶುಕ್ರವಾರ ಏರ್ಪಡಿಸಿದ ರಾಷ್ಟ್ರೀಯ ಕ್ರೀಡಾ ದಿನಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಮುಖ್ಯ ವಾಹಿನಿಗೆ ಬರಲು ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ ,ಕ್ರೀಡೆ, ಎನ್ಎಸ್ಎಸ್ ಹಾಗೂ ಧಾರ್ಮಿಕ. ಆರೋಗ ತಪಾಸಣೆಶಿಬಿರ ಕಾರ್ಯಕ್ರಮಗಳು ಯೋಜನೆ ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.

ಚಾಮರಾಜನಗರ ವಿಶ್ವವಿದ್ಯಾಲಯ ಕ್ರೀಡಾ ಸಲಹೆ ಸಮಿತಿ ಸದಸ್ಯ ಜಿ ಬಂಗಾರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ ಜೆಎಸ್ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ದೈಹಿಕ ಶಿಕ್ಷಕರ ಮಾರ್ಗದರ್ಶನ ಎಂದು ತಿಳಿಸಿದರು.

ಜೆಎಸ್ಎಸ್ ಮಹಿಳಾ ಕಾಲೇಜು ದೈಹಿಕ ನಿರ್ದೇಶಕ ಎಸ್ ಉಮೇಶ್ ಮಾತನಾಡಿ. ಕ್ರೀಡಾಪಟುಗಳಿಗೆ ಸಮಯ ಪ್ರಜ್ಞೆ ಶಿಸ್ತು. ಕಠಿಣ ನಿರಂತರ ಅಭ್ಯಾಸದಿಂದ ಅಭ್ಯಾಸ ಮಾಡಿದರೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು ಈಗಾಗಲೇ ವಿದ್ಯಾರ್ಥಿನಿಯರು ಇತ್ತೀಚಿಗೆ ನಡೆದ ಗುಡ್ಡಗಾಡು ಓಟ ಹಾಗೂ ಜಿಲ್ಲಾಡಳಿತ ಏರ್ಪಡಿಸಿದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದರು.

ಕಾಲೇಜಿನ ಪ್ರೊಫೆಸರ್ ಹಾಗೂ ಕ್ರೀಡಾ ಸಮಿತಿ ಸದಸ್ಯರಾದ ಎಂ ಯೋಗೇಶ್. ಮಮತಾ. ರಶ್ಮಿ. ತೇಜಸ್ವಿನಿ
ಕ್ರೀಡಾಕೂಟದಲ್ಲಿ ವಿಜೇತರಾದಪ್ರತಿಭಾವಂತ ವಿದ್ಯಾರ್ಥಿನಿ ಭುವನ ಆರ್ ಶೇಖರ್, ಇಂಚರ , ಜ್ಯೋತಿಕ ಎಸ್
ಸೋನು ಆರ್‌ಎನ್, ಪಾರ್ವತಿ ಎನ್ , ಮಾಹಿನ್ ತೀರ್ದೋಸ್ , ಅಕ್ಷತಾ ಸಿ, ಸೌಂದರ್ಯ. ಇತರರು ಹಾಜರಿದ್ದರು

Leave a Reply

Your email address will not be published. Required fields are marked *