ಹಂಡರಕಳ್ಳಿಮೋಳೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಚಾಮರಾಜನಗರ: ತಾಲೂಕಿನ ಹಂಡರಕಳ್ಳಿಮೋಳೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ  ರೋಟರಿ ಸಂಸ್ಥೆಯ  ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಶಿಬಿರದಲ್ಲಿ 120 ಮಂದಿ ತಪಾಸಣೆ ಮಾಡಿಸಿಕೊಂಡರು.ಅಗತ್ಯಯುಳ್ಳವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು
    ರೋಟರಿ ಸಂಸ್ಥೆ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ  ರೋಟರಿ ಸಂಸ್ಥೆಯ  ವತಿಯಿಂದ ಗ್ರಾಮದಲ್ಲಿ
ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಸಂಸ್ಥೆಯ ವತಿಯಿಂದ ಪ್ರತಿತಿಂಗಳ ಮೊದಲ ‌ಭಾನುವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯುತ್ತದೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ಪಂದನ ಆಸ್ಪತ್ರೆಯ ವೈದ್ಯರಾದ ಅವಿನಾಶ್ ಮಾತನಾಡಿ, ಮಹಿಳೆಯರ ಆರೋಗ್ಯಕ್ಕೆ ಸಂಬಂಸಿದಂತೆ ,ಹೃದಯಾಘಾತ , ಉತ್ತಮ ಆಹಾರದ ಸೇವನೆ ಮಾಡುವ ಬಗ್ಗೆ, ದುಶ್ಚಟಗಳಿಂದ ದೂರ ಇರುವ ಬಗ್ಗೆ ಸಲಹೆ ಸೂಚನೆ ನೀಡಿದರು.
 ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ
ಕಾರ್ಯದರ್ಶಿ ಜಿ. ಅಂಕಶೆಟ್ಟಿ, ಸಿ.ಎ.ನಾರಾಯಣ, ಪ್ರಭುಸ್ವಾಮಿ,  ವಲಯದ ಮೇಲ್ವಿಚಾರಕರು, ಜ್ಞಾನ ವಿಕಾಸ ಸಮನ್ವಯಾಧಿಕಾರಿ, ಸ್ಪಂದನ ಆಸ್ಪತ್ರೆಯ ಸಿಬ್ಬಂದಿಗಳು ಕಾರ್ಯಕ್ಷೇತ್ರದ ಸೇವಪ್ರತಿನಿಧಿ ಕೇಂದ್ರದ ಸದಸ್ಯರು, ಗ್ರಾಮದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *