ರೈತರು ಡೈರಿಗೆ ಗುಣಮಟ್ಟ ಹಾಲನ್ನು ನೀಡಿ :ಹೆಚ್.ಎಸ್.ಬಸವರಾಜು

ಚಾಮರಾಜನಗರ : ರೈತರು ಹಾಲು ಉತ್ಪಾದಕರ ಸಂಘಕ್ಕೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘದ ಅಭಿವೃದ್ಧಿಪಡಿಸಿ ತಾವು ಹೆಚ್ಚಿನ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಚಾಮುಲ್ ನಿರ್ದೇಶಕ ಹೆಚ್.ಎಸ್.ಬಸವರಾಜು ಸಲಹೆ ನೀಡಿದರು.
ನಗರದ ರಾಮಸಮುದ್ರ ಬೂದಿತಿಟ್ಟು ಕ್ರಾಸ್ ಹಾಲು ಉತ್ಪಾದಕರ ಸಹಕಾರ ಸಂಘದ. ಕಚೇರಿ ಮುಂಭಾಗದಲ್ಲಿ ನಡೆದ ಸಂಘದ 2025–26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ತುಂಬಾ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಿದರೆ 32 ರೂ.ನಿಂದ 43 ರೂ. ತನಕ ಒಂದು ಲೀಟರ್‌ಗೆ ಒಕ್ಕೂಟ ದರ ನೀಡುತ್ತದೆ. ಸರ್ಕಾರವು ಸಹ ಒಂದು ಲೀಟರ್ ಹಾಲಿಗೆ 5 ಪ್ರೋತ್ಸಾಹಧನ ನೀಡುತ್ತಿದೆ ಎಂದರು.
ಮೊದಲು ಒಕ್ಕೂಟದಲ್ಲಿ 25 ಸಾವಿರ ಹಾಲು ಮಾರಾಟ ಆಗುತ್ತಿತ್ತು. ಗ್ರಾಮಗಳಲ್ಲಿ ನಂದಿನಿ ಮಳಿಗೆಗಳನ್ನು ಆರಂಭಿಸಿದ ಮೇಲೆ ಒಂದು ಲಕ್ಷ ಲೀಟರ್ ಹಾಲು ಮಾರಾಟ ಆಗುತ್ತಿದೆ. ಉಳಿದ ಹಾಲನ್ನು ಪ್ಯಾಕೇಟ್ , ಪೌಡ‌ರ್ ಮಾಡಲಾಗುತ್ತದೆ. ಅಲ್ಲದೆ ರಾಜ್ಯ ಸರ್ಕಾರ ಕ್ಷೀರ ಭಾಗ್ಯ ಯೋಜನೆಯಡಿಂಯಲ್ಲಿ ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುತ್ತಿದೆ. ವಿದ್ಯಾ ಇಲಾಖೆಯ ಮೂಖಾಂತರ ಸರ್ಕಾರದಿಂದ ಒಕ್ಕೂಟಕ್ಕೆ ಹಣ ಬರುತ್ತಿದೆ. ರೈತರಿಂದ ಒಕ್ಕೂಟಕ್ಕೆ ಬರುವ ಎಲ್ಲ ಹಾಲು ಮಾರಾಟ ಆಗುತ್ತಿದೆ ಎಂದರು.
ಸಂಘಕ್ಕೆ 170 ದಿನಗಳವರೆಗೆ ಹಾಲು ಹಾಕಿ ಮೃತಪಟ್ಟಂತಹ ಷೇರುದಾರರಿಗೆ ರೈತ ಕಲ್ಯಾಣ ಟ್ರಸ್ಟ್, ಯೋಜನೆಯಡಿಯಲ್ಲಿ ಮೃತಕುಟುಂಬಕ್ಕೆ 15 ಸಾವಿರ ಕೊಡುವ ವ್ಯವಸ್ಥೆ ಇದೆ. ಅದನ್ನು ಎಪ್ರಿಲ್‌ ನಿಂದ ಇಚೆಗೆ 20 ಸಾವಿರ ರೂ. ಕೊಡುವ ವ್ಯವಸ್ಥೆ ಮಾಡಲಾಗಿದೆ. ಒಕ್ಕೂಟದಲ್ಲಿ ಪಶುವೈದ್ಯರ ಕೊರತೆವಿದೆ. ಒಕ್ಕೂಟವು 80 ಸಾವಿರ ರೂ. ವೇತನ ನೀಡಿ ವೈದ್ಯರನ್ನು ನೇಮಿಸಿಕೊಳ್ಳಲು ಸಿದ್ಧವಿದ್ದೇನೆ. ಪಶುವೈದ್ಯರ ಕೊರತೆಯಾಗಿದೆ’ ಎಂದರು.
ಸಂಘದ ಅಧ್ಯಕ್ಷ ಎಂ.ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಚಾಮುಲ್‌ ನಿರ್ದೇಶಕ ಸದಾಶಿವಮೂರ್ತಿ ಮಾರ್ಗದ ವಿಸ್ತರಣಾಧಿಕಾರಿ ಹೆಚ್.ಜೆ.ಲಕ್ಷ್ಮೀ, ಸಂಘದ ನಿರ್ದೇಶಕರಾದ ಎಂ.ಶಿವಶಂಕ‌ರ್, ಮಲ್ಲು, ಮಹಾದೇವಸ್ವಾಮಿ, ಬಸವರಾಜು, ಶಿವಣ್ಣ, ಚಂದ್ರಮ್ಮ, ಶಾರದಮ್ಮ, ಮುಖ್ಯ ಕಾರ್ಯನಿರ್ವಾಹಕ ಎಸ್.ಚಂದ್ರಶೇಖರಸ್ವಾಮಿ, ಹಾಲು
ಪರೀಕ್ಷಕ ಎನ್.ಚಿನ್ನಸ್ವಾಮಿ. ಆರ್.ಎಸ್.ಪ್ರತಾಪ್, ಮಹೇಶ್, ಪ್ರಭುಸ್ವಾಮಿ ಸಂಘದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *