ಡಾ.ವಿಷ್ಣುವರ್ಧನ್‌ ಕನ್ನಡ ಚಿತ್ರರಂಗದ ಶ್ರೇಷ್ಠ ನಟರು : ಉಮ್ಮತ್ತೂರು ಇಂದುಶೇಖರ್

ಕೇಕ್ ಕತ್ತರಿಸಿ, ವಿಷ್ಣುಗೀತೆಗಳ ಗಾಯನ ಮೂಲಕ ಜನ್ಮದಿನೋತ್ಸವ ಆಚರಣೆ
    ಚಾಮರಾಜನಗರ: ಸಾಹಸಸಿಂಹ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿ, ಮಾನವೀಯ ಮೌಲ್ಯಗಳ ಹರಿಕಾರರಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಜಿಲ್ಲಾ ವಕೀಲರ ಸಂಘದ ಮಾಜಿ
ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಹೇಳಿದರು.
   ಚಾಮರಾಜನಗರ: ಸಾಹಸಸಿಂಹ ಡಾ. ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಶ್ರೇಷ್ಠ ನಟರಾಗಿ, ಮಾನವೀಯ ಮೌಲ್ಯಗಳ ಹರಿಕಾರರಾಗಿ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ ಎಂದು ಜಿಲ್ಲಾ ವಕೀಲರ ಸಂಘದ
ಮಾಜಿ ಅಧ್ಯಕ್ಷ ಉಮ್ಮತ್ತೂರು ಇಂದು ಶೇಖರ್ ಹೇಳಿದರು.
    ನಗರದ ಮೈಸೂರು ರಸ್ತೆಯಲ್ಲಿರುವ ಮಕಾವ್ ಹೋಟೆಲ್ ಸಭಾಂಗಣದಲ್ಲಿ  ಸಾಹಸಸಿಂಹ ಡಾ.ವಿಷ್ಣು ವರ್ಧನ್ ಅಭಿಮಾನಿ ಸ್ನೇಹ ಬಳಗದ ವತಿಯಿಂದ ನಡೆದ ಡಾ.ವಿಷ್ಣುವರ್ಧನ್ 76ನೇ ಜನ್ಮದಿನೋತ್ಸವ, ಇಂಚರ ಗಾನೋತ್ಸವ ಸೀಸನ್ -3 ವಿಷ್ಣು ಗೀತೆಗಳ ಸ್ವರ ಸಂಭ್ರಮ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
  ವಿಷ್ಣುವರ್ಧನ್ ಭಾರತದ ಶ್ರೇಷ್ಠ ಚಲನಚಿತ್ರ ನಟರಾಗಿದ್ದರು. ಸುಸಂಸ್ಕೃತರು ಹಾಗೂ ಜೀವನ ಮೌಲ್ಯಗಳನ್ನು ಕೋಟ್ಯಾಂತರ ಅಭಿಮಾನಿಗಳಿಗೆ ನೀಡಿದವರು. ವಿಷ್ಣುವರ್ಧನ್ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿವೆ ಎಂದರು.
ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಪುಷ್ಷಾರ್ಚನೆ ಮಾತನಾಡಿ,  ಸಾಹಸಸಿಂಹ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಮೇರು ನಟರಾಗಿದ್ದರು. ಅವರ ಚಿತ್ರಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ನೀಡಿದ್ದಾರೆ ಎಂದರು.
ಸಾಹಿತಿ ಸೋಮಶೇಖರ್ ಬಿಸಲವಾಡಿ ಮಾತನಾಡಿ,
ಭಾರತೀಯ ಚಲನಚಿತ್ರ ರಂಗದ ಅಪರೂಪದ ವ್ಯಕ್ತಿತ್ವ ಹೊಂದಿದ್ದ ನಟ ವಿಷ್ಣುವರ್ಧನ್ ಸಂತನಂತೆ ಬದುಕಿದ್ದಾರೆ. ಕನ್ನಡ ಚಲನಚಿತ್ರ ರಂಗದ ಮೂಲಕ ವಿಶ್ವಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಷ್ಣುವರ್ಧನ್ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ನಾಡು ,ನುಡಿ ,ಜಲ, ಭಾಷೆಯ ಜೊತೆಗೆ ಸಾಂಸಾರಿಕ ಜೀವನ ,ರಾಷ್ಟ್ರ ಪ್ರೇಮ, ಸಂಸ್ಕೃತಿಯ ರಕ್ಷಣೆ, ಜೀವನದ ಹೊಂದಾಣಿಕೆ ಹಾಗೂ ಸಾಮಾಜಿಕ ಮೌಲ್ಯಗಳ ಚಿಂತನೆಯ ಆದರ್ಶ ಚಿತ್ರಗಳನ್ನು ರಚಿಸಿದ್ದಾರೆ. ಕೋಟಿ ಅಭಿಮಾನಿಗಳಲ್ಲಿ ಹಾಗೂ ಜನರಲ್ಲಿ ಶ್ರೇಷ್ಠವಾದ ಮೌಲ್ಯಗಳನ್ನು ನೀಡಿದರು. ಅವರು ಬದುಕಿದ್ದಾರೆ .
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಅವರ ಪಾಲಾಗುತ್ತಿತ್ತು. ಎಂದರು
    ಸಾಹಸಸಿಂಹ ವಿಷ್ಣುವರ್ಧನ್ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು.
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿ ಸ್ನೇಹ ಬಳಗದ  ಜಿಲ್ಲಾ ಜನಪರ ಹೋರಾಟಗಾರ ಆಲೂರುಮಲ್ಲು, ಜ.ಸುರೇಶ್ ನಾಗ್ ಹರದನಹಳ್ಳಿ,  ಎಎಸ್ ಐ ಮಹದೇವಪ್ಪ, ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಸುಗಂಧರಾಜ್, ಕರಿನಂಜನಪುರ ಕೂಸಣ್ಣ, ವಕೀಲ ಮಲ್ಲು, ಸಿ. ಡಿ. ಪ್ರಕಾಶ್, ಶಿವಣ್ಣ, ಐಸಿರಿ ಸುರೇಶ್ ಮೈಸೂರು, ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಆನಂದ್ ಭಗೀರಥ, ಬಿಜೆಪಿ ಮುಖಂಡ ದಯಾನಿಧಿ,
ಡಾ.ಸುಗಂಧರಾಜು, ಮೇಘಶ್ರೀ, ಮಹಾದೇವಸ್ವಾಮಿ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *