ಚಾಮರಾಜನಗರ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಹಲವಾರು ಜನಪರ ಯೋಜನೆಯನ್ನು ಜಾರಿ ಮಾಡಿದ್ದಾರೆ ಇದನ್ನು ಬಳಸಿಕೊಂಡು ಮುಖ್ಯ ವಾಹಿನಿಗೆ ಬರಬೇಕು ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊಫೆಸರ್ ಎಂ ಆರ್ ಗಂಗಾಧರ್ ತಿಳಿಸಿದರು.

ನಗರದ ಜೋಡಿ ರಸ್ತೆಯಲ್ಲಿರುವ ಜೆಎಸ್ಎಸ್ ಮಹಿಳಾ ಕಾಲೇಜು ಸಭಾಂಗಣದಲ್ಲಿ ಭಾರತ ಸರ್ಕಾರದ ಮೈ ಭಾರತ್ ಕೇಂದ್ರ. ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ. ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಪಂಡಿತ್ ದೀನಾ ದಯಳ್ ಉಪಾಧ್ಯಾಯ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರು ಹಾಕುವಮೂಲಕ ಚಾಲನೆ ನೀಡಿ ಮಾತನಾಡಿ
ಕೇಂದ್ರ ಸರ್ಕಾರ ರಾಷ್ಟ್ರ ನಾಯಕರ ಜನ್ಮ ದಿನಾಚರಣೆಯ ಪ್ರಯುಕ್ತ ಶಾಲಾ ಕಾಲೇಜುಗಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದೆ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಹಣ ಆಸ್ತಿ ಕಳ್ಳತನ ಆಗಬಹುದು ಆದರೆ ವಿದ್ಯಾವನ್ನು ಯಾರು ಕಳ್ಳತನ ಮಾಡಲು ಸಾಧ್ಯವಾಗಲಿಲ್ಲ ಆದ್ದರಿಂದ ಶಿಕ್ಷಣ ಕಲಿತು ತಮ್ಮ ಭವಿಷ್ಯ ಉಜ್ವಲ ಮಾಡಿಕೊಳ್ಳಿ ಹಾಗೂ ಪ್ರೊಫೆಸರ್ ಗಳು ಪಾಠ ಮಾಡುವಾಗ ತಮ್ಮ ಗಮನವನ್ನು ಇತರ ಕಡೆ ಹರಿಸಿದೆ ವಿದ್ಯಾಭ್ಯಾಸಕ್ಕೆ ಗಮನ ಹರಿಸಿದರೆ ಪರೀಕ್ಷಾ ಸಂದರ್ಭದಲ್ಲಿ ಉತ್ತಮ ಅಂಕ ಗಳಿಸುವ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ಸಾಹಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿಎಸ್ ವಿನಯ ಮಾತನಾಡಿ ಪಂಡಿತ್ ದೀನಾ ದಾಯಾಳ್ ರಾಷ್ಟ್ರ ಸಂರಕ್ಷಣೆ ಜೊತೆಗೆ ಪತ್ರಿಕೆಯ ಸಂಪಾದಕರಾಗಿ ಹಲವಾರು ಲೇಖನಗಳ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ದಾರಿದೀಪವಾಗಿದ್ದಾರೆ.
ಪತ್ರಿಕೆ ಓದುವವರ ಜೊತೆಗೆ ಜ್ಞಾನ ಅಭಿವೃದ್ಧಿ ಆಗಲು ಸಾಧ್ಯ ಆದ್ದರಿಂದ ಬಿಡುವಿನ ಸಂದರ್ಭದಲ್ಲಿ ಗ್ರಂಥಾಲಯಗಳಿಗೆ ಭೇ
ಟಿ ನೀಡಿ ರಾಷ್ಟ್ರ ನಾಯಕರ ಗ್ರಂಥಗಳು ಹಾಗೂ ದಿನಪತ್ರಿಕೆಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೆಎಸ್ಎಸ್ ಶಿಕ್ಷಣ ಮಾವಿದ್ಯಾಲಯ ಡಾ ಕೆ ಸಿ ಬಸವಣ್ಣ ಅಧ್ಯಕ್ಷತೆ ವಹಿಸಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ. ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಭಾರತೀಯ ಸಂಸ್ಕೃತಿ ಬಿಮಿಸುವ ಹಲವಾರು ಕಾರ್ಯಕ್ರಮಗಳು ಹಮ್ಮಿಕೊಂಡು ಬರಲಾಗುತ್ತಿದೆ. ಜೆಎಸ್ಎಸ್ ಶಿಕ್ಷಣ ಸಂಸ್ಥೆ ಗ್ರಾಮಗಳು ಮೂಲಕ ಪ್ರಾರಂಭವಾಗಿ ದೇಶವಿದೇಶಗಳಲ್ಲಿ ಕೋಟ್ಯಂತರ ಮಂದಿ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸಿ ಅವರಿಗೆ ದಾರಿದೀಪವಾಗಿದ್ದಾರೆ ಇವಾಗ ಅವರ ಬದುಕು ನಂದಾದೀಪವಾಗಿದೆ ಎಂದು ಹೇಳಿದರು.
ಜೆಎಸ್ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ ಎಂ ಪ್ರಭು, ಮೈ ಭಾರತ ಕೇಂದ್ರ ಜಿಲ್ಲಾ ಯುವಜನ ಅಧಿಕಾರಿ ಶಾಲೋಮ್ ಫಿಲಿಪ್ ಥಾಮಸ್. ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು.. ಪ್ರೊಫೆಸರ್ ಸಿದ್ದರಾಜು. ಶಿವಕುಮಾರ್. ಸುರೇಶ್. ಮೈ ಭಾರತ್ ಕೇಂದ್ರ. ಎನ್ ಎನ್ ಸಹನ. ವಿದ್ಯಾರ್ಥಿ ಸಂಘದ ಗಗನ. ಮೇಘಶ್ರೀ. ಸೆರೆದಂತೆ 15 ಹೆಚ್ಚು ವಿದ್ಯಾರ್ಥಿಗಳು ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾಗಿ ಬಹುಮಾನ ಸ್ವೀಕರಿಸಿದರು.
ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯ ಎಲ್ಲಾ ವಿಭಾಗದ ಮುಖ್ಯಸ್ಥರು ಹಾಜರಿದ್ದರು
