ಚಾಮರಾಜನಗರ: ನಗರಕ್ಕೆ ಭೇಟಿ ನೀಡಿದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಯುವಕ ಘಟಕದ ರಾಜ್ಯಾಧ್ಯಕ್ಷ ಟಿ.ಆರ್.ತುಳಸಿರಾಮ್ ಅವರನ್ನು ನಾಯಕ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು.
ನಗರದ ಪ್ರವಾಸಿಮಂದಿರದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷರಾದ ಎಂ.ರಾಮಚಂದ್ರ ಅವರ ನೇತೃತ್ವದಲ್ಲಿ ಸಮುದಾಯದ ವತಿಯಿಂದ ತುಳಸಿರಾಮ್ ಅವರಿಗೆ ಶಾಲು ಹೊದಿಸಿ, ಹಾರಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಾಯಕ ಸಮುದಾಯದ ಯುವ ಮುಖಂಡರಾದ ಕೆಲ್ಲಂಬಳ್ಳಿ ನಾಗೇಂದ್ರ, ಶಿವುವಿರಾಟ್, ಚಂದ್ರಶೇಖರ್, ಸ್ವಾಮಿ, ಚಂದು, ನಾಗೇಶ್ ಇತರರು ಹಾಜರಿದ್ದರು.
