
ಮಹದೇಶ್ವರಬೆಟ್ಟ: ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿಯಾಗಿ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು.
ಮಲೆಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಂತರ ಅದ್ಧೂರಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ನಂತರ ಮಾತನಾಡಿದ ಅವರು, ಪೌರ ಕಾರ್ಮಿಕರಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದ್ದು, ಪೌರ ಕಾರ್ಮಿಕರು ತಮ್ಮ ನಿತ್ಯದ ಕರ್ತವ್ಯದ ಜೊತೆಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಈ ವೇಳೆ ಎಲ್ಲಾ ಪೌರಕಾರ್ಮಿಕಗಳು ಸದಸ್ಯರು ಪೌರಕಾರ್ಮಿಕ ಮಹಿಳಾ ಪೌರಕಾರ್ಮಿಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ್, ಸಂಘದ ಅಧ್ಯಕ್ಷರು ಎಂಪಿ ಗೋಪಾಲ, ಮಹದೇವ್, ಯಜಮಾನ್ ಕೆ.ಮಾದ, ಮೇಸ್ತ್ರೀಗಳಾದ ನಾಗರಾಜ್, ಗುಂಡು ರಾಜ್, ಜಿ.ರಾಜ್, ಮಾದೇಶ್, ರವಿ ರಾಜು ಸೋಮಣ್ಣ ಸೇರಿದಂತೆ ಎಲ್ಲಾ ಪೌರಕಾರ್ಮಿಕರು, ಇತರೆ ನೌಕರರು ಹಾಜರಿದ್ದರು.
