ಪೌರಕಾರ್ಮಿಕರ ಸೇವೆ ಅನನ್ಯ: ಜಿಲ್ಲಾಧಿಕಾರಿ ಶ್ರೀರೂಪ

  • ನಗರಸಭೆ ವತಿಯಿಂದ ಆಯೋಜಿಸಿದ ಪೌರಕಾರ್ಮಿಕರ ಕ್ರೀಡಾಕೂಟಕ್ಕೆ ಚಾಲನೆ

ಚಾಮರಾಜನಗರ: ಸಮಾಜದ ಆರೋಗ್ಯ ಮತ್ತು ಸ್ವಚ್ಛತೆಗಾಗಿ ದಿನವಿಡೀ ನಿರಂತರ ಶ್ರಮಿಸುವ ಪೌರಕಾರ್ಮಿಕರ ಸೇವೆ ಅನನ್ಯ ಎಂದು  ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
   ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ  ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಸಭೆ ವತಿಯಿಂದ  ನಡೆದ ಪೌರಕಾರ್ಮಿಕರ ಕ್ರೀಡಾಕೂಟಕ್ಕೆ ಚಾಲನೆ‌ ನೀಡಿ ಮಾತನಾಡಿ.ಪೌರಕಾರ್ಮಿಕರ ಕಠಿಣ ಪರಿಶ್ರಮದಿಂದ ಪಟ್ಟಣದಲ್ಲಿ ಸ್ವಚ್ಛ ವಾತಾವರಣ ನೆಲೆಸಿದೆ.ಎಲ್ಲ ಪೌರಕಾರ್ಮಿಕರು ಅತ್ಯಂತ ಸಂಭ್ರಮ ಹಾಗೂ ಲವಲವಿಕೆಯಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ. ಎಲ್ಲರಿಗೂ ಶುಭವಾಗಲಿ ಎಂದು ಪೌರಕಾರ್ಮಿಕ ದಿನಾಚರಣೆ ಶುಭಾಶಯ ಕೋರಿದರು.
ಪುರುಷ ಹಾಗೂ ಮಹಿಳಾ ಪೌರಕಾರ್ಮಿಕರಿಗಾಗಿ  ಮ್ಯೂಸಿಕಲ್ ಚೇರ್, ಲೆಮನ್ ಸ್ಪೂನ್,  ಗುಂಡು ಎಸೆತ ಹಾಗೂ ಮಹಿಳೆಯರ ಓಟದ ಸ್ಪರ್ಧೆ ಸೇರಿದಂತೆ ಮುಂತಾದ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು.
   ಕಾರ್ಯಕ್ರಮದಲ್ಲಿ ಪೌರಾಯುಕ್ತ ಪರಶುರಾಮ ಛಲವಾದಿ, ಆರೋಗ್ಯ ಅಧಿಕಾರಿ ಮಂಜುನಾಥ್, ಪುಷ್ಷಾ, ಎಇಇ ರೂಪ, ವ್ಯವಸ್ಥಪಕ ಸುಧಾರಾಣಿ, ಸಿನಿಯರ್ ಪ್ರೋಗ್ರಾಮ್  ಸಿದ್ದಪ್ಪಾಜಿ, ಲೆಕ್ಕಾ ಪರಿಶೋಧಕಿ ಮಂಗಳಗೌರಿ, ದ್ವಿತೀಯ ದರ್ಜೆ ಸಹಾಯಕ ಚಿತ್ರ,  ಕ್ರೀಡಾ ಸಮಿತಿ ಸದಸ್ಯ ವಿ.ಶ್ರೀನಿವಾಸಪ್ರಸಾದ್,  ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಪಳನಿಸ್ವಾಮಿ ನಿತಿನ್, ಪ್ರಸಾದ್, ಎಲ್ಲಾ ಸಿಬ್ಬಂದಿವರ್ಗ ಹಾಗೂ ಪೌರಕಾರ್ಮಿಕರು ಹಾಜರಿದ್ದರು.

Leave a Reply

Your email address will not be published. Required fields are marked *