- ಕರಿನಂಜನಪುರ ಡೇರಿಗೆ 3.88 ಲಕ್ಷ ರೂ. ನಿವ್ವಳ ಲಾಭ ; 1.81 ಲಕ್ಷ ರೂ. ಬೋನಸ್ ವಿತರಣೆ : ಬಸವಣ್ಣ
ಚಾಮರಾಜನಗರ, ಆ. 24- ಚಾಮುಲ್ ಅವರಣದಲ್ಲಿ ನಂದಿನಿ ಐಸ್‌ಕ್ರೀಂ ಘಟಕ ನಿರ್ಮಾಣ ಕಾಮಗಾರಿಗೆ ಸದ್ಯದಲ್ಲಿಯೇ ಶಂಕುಸ್ಥಾಪನೆ ಮಾಡಲಿದ್ದು, ಐಸ್‌ಕ್ರೀಂ ಘಟಕ ನಿರ್ಮಾಣದಿಂದ ರೈತರಿಗೆ ಇನ್ನು ಹೆಚ್ಚಿನ ಲಾಭವಾಗಲಿದೆ ಎಂದು ಚಾಮುಲ್ ಅಧ್ಯಕ್ಷ ನಂಜು0ಡಸ್ವಾಮಿ ತಿಳಿಸಿದರು.
ನಗರದ ಸಮೀಪದ ಕರಿನಂಜನಪುರ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಚಿವರಾಗಿದ್ದ ದಿ. ಎಚ್.ಎಸ್. ಮಹದೇವಪ್ರಸಾದ್ ಅವರ ಶ್ರಮದ ಫಲವಾಗಿ ಇಂದು ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾಗಿದೆ. ಅವರು ಅಂದು ಕುದೇರು ಬಳಿ 42 ಎಕರೆ ಜಾಗವನ್ನು ಮಂಜೂರು ಮಾಡಿಸಿ, ಪ್ರತ್ಯೇಕ ಹಾಲು ಒಕ್ಕೂಟದ ರಚನೆ ಮಾಡಿದ ಪರಿಣಾಮ ನಮ್ಮ ಒಕ್ಕೂಟ ಲಾಭದಲ್ಲಿ ನಡೆಯುತ್ತಿದೆ.
ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲ ಸಂಗ್ರಹವಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿಯೇ ಹಾಲು ಮೊಸರು ಸೇರಿ 1ಲಕ್ಷ ಲೀಟರ್ ಹಾಲು ಮಾರಾಟವಾಗಿ, ಇನ್ನುಳಿದ ಹಾಲನ್ನು ಪೌಡರ್ ಹಾಗೂ ಇತರೇ ಒಕ್ಕುಟಗಳಿಗೆ ಕಳುಹಿಸುತ್ತಿದ್ದೇವೆ.
ನಂದಿನಿ ಐಸ್‌ಕ್ರಿಂಗೆ ಹೆಚ್ಚಿನ ಬೇಡಿಕೆ ಇದೆ. ಕೇರಳ, ತಮಿಳುನಾಡು ಹಾಗೂ ರಾಜ್ಯದ ಇತರೇ ಜಿಲ್ಲೆಗಳಲ್ಲಿ ನಂದಿನಿ ಐಸ್‌ಕ್ರೀಂಗಾಗಿ ಬೇಡಿಕೆ ಇದನ್ನು ಇದನ್ನ ಮನಗಂಡು ನಮ್ಮ ಒಕ್ಕೂಟ, ಸರ್ಕಾರ ಹಾಗೂ ಮಹಾಮಂಡಳದ ನೆರವು ಪಡೆದು ಚಾಮುಲ್ ಆವರಣದಲ್ಲಿ ಐಸ್‌ಕ್ರೀಂ ಘಟಕವನ್ನು ಸ್ಥಾಪನೆ ಮಾಡಲಾಗುತ್ತದೆ. ಇದರ ಸಂಪೂರ್ಣ ಲಾಭವನ್ನು ರೈತರಿಗೆ ನೀಡುವ ಚಿಂತನೆ ನಮ್ಮದಾಗಿದೆ. ಕ್ರಿಯಾ ಯೋಜನೆ ಸಿದ್ದವಾಗಿದ್ದು, ಇನ್ನು ಒಂದು ತಿಂಗಳಲ್ಲಿ ಘಟಕ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ, ಘಟಕವನ್ನು ಆರಂಭಿಸುತ್ತೇವೆ ಎಂದು ತಿಳಿಸಿದರು.
ರೈತ ಕಲ್ಯಾಣ ಟ್ರಸ್ಟ್ನ ಸದಸ್ಯರಾಗಿದ್ದು, ಅಕಾಲಿಕವಾಗಿ ಮೃತಪಟ್ಟರೆ ಅಂಥ ರೈತರಿಗೆ ಕಲ್ಯಾಣ ಟ್ರಸ್ಟ್ನಿಧಿಯಿಂದ ನೀಡುತ್ತಿದ್ದ ಹಣವನ್ನು 20 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ವೈಜ್ಞಾನಿಕ ಹಾಗು ತಾಂತ್ರಿಕವಾಗಿ ಹೈನುಗಾರಿಕೆಯನ್ನು ರೈತರು ಅಳವಡಿಸಿಕೊಳ್ಳಲು ಅನುಕೂಲವಾಗುವಂತೆ ರಿಯಾಯಿತಿ ದರದಲ್ಲಿ ರಬ್ಬರ್ ಮ್ಯಾಟ್ ಅನ್ನು ಒಕ್ಕೂಟದಿಂದ ನೀಡಲಾಗುತ್ತದೆ. ಈಗಾಗಲೇ ಮೇವು ಕಟಾವ್ ಯಂತ್ರವನ್ನು ನೀಡುತ್ತಿದ್ದೇವೆ. ಇದರೊಟ್ಟಿಗೆ ರೈತರು ಸರಬರಾಜು ಮಾಡಿದ ಹಾಲಿಗೆ ಸ್ಪರ್ಧಾತ್ಮಕ ಬೆಲೆ ನೀಡುತ್ತಿದ್ದು, ಸಹಾಯಧನ ಹಾಗೂ ಹಾಲಿನ ದರ ಏರಿಕೆ ಮಾಡುವಂತೆ ಸರ್ಕಾರ ಹಾಗು ಹಾಲು ಮಹಾಮಂಡಲಕ್ಕೆ ಮನವಿ ಮಾಡಿಕೊಂಡಿದ್ದೇವೆ. ಗುಜರಾತ್ ಪ್ರಥಮ ಸ್ಥಾನದಲ್ಲಿದ್ದರೆ, ನಮ್ಮ ರಾಜ್ಯ ಹಾಲು ಶೇಖರಣೆ ಮತ್ತು ಮಾರಾಟ ಮತ್ತು ಉತ್ಕೃಷ್ಟತೆಯಲ್ಲಿ ನಂದಿನಿ ಬ್ರಾಂಡ್ 2 ಸ್ಥಾನದಲ್ಲಿದೆ. ನಮ್ಮೇಲ್ಲರ ಹೆಮ್ಮೆಯಾಗಿದೆ. ರೈತರು ಗುಣಮಟ್ಟದ ಹಾಲು ಹಾಕುವ ಮೂಲಕ ರೈತ ಸಂಸ್ಥೆಯನ್ನು ಇನ್ನು ಹೆಚ್ಚಿನ ಪ್ರಗತಿಗೆ ಮುಂದಾಗಬೇಕು ಎಂದು ತಿಳಿಸಿದರು.
ಚಾಮುಲ್ ನಿರ್ದೇಶಕರಾದ ಎಚ್.ಎಸ್. ಬಸವರಾಜು, ಸದಾಶಿವಮೂರ್ತಿ ಮಾತನಾಡಿ, ಕರಿನಂಜನಪುರ ಡೇರಿಗೆ 45 ವರ್ಷಗಳ ಇತಿಹಾಸ ಇದೆ. ಗುಣಮಟ್ಟದ ಹಾಲು ಶೇಖರಣೆ ಮಾಡುವುದಲ್ಲಿ ಮುಂಚೂಣಿಯಲ್ಲಿದ್ದು, ನಗರಕ್ಕೆ ಹೊಂದಿಕೊAಡAತೆ ಇರುವ ಕಾರಣ ಸ್ಥಳೀಯ ಮಾರಾಟ ಹೆಚ್ಚಾಗಿದೆ. ಹೀಗಾಗಿ ಲಾಭಾಂಶ ಹೆಚ್ಚಿದೆ. ಈ ಹಣದಲ್ಲಿ ರೈತರ ಅಭಿವೃದ್ದಿಗೆ ಬಳಕೆಯಾಗುತ್ತಿದೆ. ಹಸು ಎತ್ತುವ ಯಂತ್ರವನ್ನು ಖರೀದಿ ಮಾಡುವುದು ಸೇರಿದಂತೆ ಒಕ್ಕೂಟ ಹಾಗೂ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಸಂಘದ ಅಧ್ಯಕ್ಷ ಬಸವಣ್ಣ ಮಾತನಾಡಿ, ನಮ್ಮ ಸಂಘವು ಉತ್ತಮವಾಗಿ ವಹಿವಾಟು ನಡೆಸಿ, ಪ್ರಸಕ್ತ ವರ್ಷದಲ್ಲಿ 69.48 ಲಕ್ಷ ರೂ. ಹಾಲು ಖರೀದಿ ಮಾಡಿದೆ. 3.88 ಲಕ್ಷ ರೂ.ಗಳ ನಿವ್ವಳ ಲಾಭ ಬಂದಿದ್ದು, ಸದಸ್ಯೆಇಗೆ 1.81 ಲಕ್ಷ ರೂ. ಗಳ ಬೋನಸ್ ವಿತರಣೆ ಮಾಡಲಾಗುತ್ತದೆ ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ವೃಷಬೇಂದ್ರ ವಾರ್ಷಿಕ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಸಭೆಯಲ್ಲಿ ಚಾಮುಲ್ ಉಪ ವ್ಯವಸ್ಥಾಪಕ ಡಾ. ಅಮರ್, ವಿಸ್ತರಣಾಧಿಕಾರಿ ಎಚ್.ಜೆ. ಲಕ್ಷಿö್ಮ, ವಿರೂಪಾಕ್ಷ ನಿರ್ದೇಶಕರಾದ ಕೆ.ಎನ್. ಕುಮಾರಸ್ವಾಮಿ, ಸೋಮಣ್ಣ, ಮಹದೇವಪ್ಪ, ನಾಗೇಂದ್ರ, ಕೆ.ಪಿ. ರೇಚಣ್ಣ, ಗುರುಸ್ವಾಮಿ, ಸ್ವಾಮಿ, ಜಗದೀಶ್, ಸುಂದ್ರಮ್ಮ, ರೂಪ, ನೌಕರಾದ ನಂಜುAಡ, ಬಿ. ಮಹೇಂದ್ರ ಹಾಗೂ ಸರ್ವ ಸದಸ್ಯರು ಇದ್ದರು.
