ಮೈಸೂರು : ಮೈಸೂರಿನ ರಾಜರಾಜೇಶ್ವರಿ ನಗರದಲ್ಲಿನ “ಶ್ರೀ ಆರ್ಟ್ ಇವೆಂಟ್ಸ್ ಮ್ಯಾನೇಜ್‌ಮೆಂಟ್” ಅವರ “ಶ್ರೀ ಆರ್ಟ್ ಫಿಲಿಂಸ್” ವತಿಯಿಂದ ಗಡಿನಾಡಹುಲಿ ಫಿಲ್ಮ್ ಬ್ಯಾನರಿನಲ್ಲಿ ‘ಅಮೋಘ’ ಹೊಸ ಕನ್ನಡ ಚಲನಚಿತ್ರದ ‘ಹೊತ್ತಳು ನನ್ನ ಭಾರ’ ತಾಯಿ ಕುರಿತಾದ ಹಾಡು ಬಿಡುಗಡೆ ಮಾಡಲಾಯಿತು .
ಮೈಸೂರು, ಬೆಂಗಳೂರು, ಮಡಿಕೇರಿ ಮತ್ತು ಮಂಗಳೂರು ಸುತ್ತಮುತ್ತ ಚಲನಚಿತ್ರದ ಚಿತ್ರೀಕರಣ ನಡೆಸಲಾಗಿದ್ದು , ನಾಲ್ಕು
ಹಾಡುಗಳು , ಒಂದು ಸಾಹಸ ದೃಶ್ಯ ಕೂಡ ಚಿತ್ರದಲ್ಲಿದೆ. ಗಡಿನಾಡಹುಲಿ ಪುನೀತ್ ಕುಮಾರ್ ಕೆ.ಎನ್ ನಿರ್ದೇಶಿಸಿ, ನಿರ್ಮಾಣದಲ್ಲಿ ಲಿಖಿತಕುಮಾರ್ ಶ್ರೀಧರ್ ಪ್ರಸ್ತುತಪಡಿಸಿದ ‘ಹೊತ್ತಳು ನನ್ನ ಭಾರ’ ಇದೀಗ ಎಲ್ಲಡೆ ಮೆಚ್ಚುಗೆ ಗಳಿಸಿದೆ. ತಾರಾಗಣದಲ್ಲಿ ಮಿಶೆಲ್ ಸೆಕ್ವೇರಾ, ಗಡಿನಾಡಹುಲಿ ಪುನಿತ ಕುಮಾರ, ಕೆ.ಎನ್.ರೇಷ್ಮಾ , ಪ್ರತಿಭಾ ಶೆಟ್ಟಿ, ಈಶ್ವರ ಶೆಟ್ಟಿ, ಸಂತೋಷ ಗೋಪಾಲ ರೆಡ್ಡಿ,
ಧನುಷ್ ಎಸ್.ಕೆ.ಮೈಸೂರ, ಕಲ್ಕಿ, ಮಾಸ್ಟರ್ ಪ್ರೀತಮ್, ಮಾಸ್ಟರ್ ಲಿಶಾಶ್ರೀ, ಶ್ರೀನಿವಾಸ ಮೂರ್ತಿ, ಶ್ವೇತ ಲಿಖಿತ್ ಮೊದಲಾದವರಿದ್ದಾರೆ.
ಶ್ರೀ ಹರ್ಷ ಶ್ರೀಧರ್(ಆಕಾಶ) ಛಾಯಾಗ್ರಹಣದ ಜೊತೆಗೆ ಸಂಕಲನವಿದೆ , ಧನುಷ್ ಡಿ.ಕೆ.ಎಸ್ ಸಂಗೀತ ಸಂಯೋಜನೆ , ಭವತಾರಣಿ ಕೆ.ಎನ್ ಹಿನ್ನೆಲೆ ಗಾಯಕರಾಗಿದ್ದಾರೆ. ಎಸ್ ಎಫ್ ಎಕ್ಸ್ ಮನುರೈ, ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಎಂ ರಾವ್ ಸ್ಟುಡಿಯೋ ಮೈಸೂರು, ಕಲಾನಿರ್ದೇಶನ ಚಂದನ ಕುಮಾರ್, ಪಿಆರ್ ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹ ನಿರ್ದೇಶನ
ವಸಂತಕುಮಾರ ಎಸ್.ಎನ್ ಅವರದಿದೆ , ಅತ್ಯಂತ ಭಾವಪೂರ್ಣವಾದ ತಾಯಿಯ ಬಲಿದಾನ ಮತ್ತು ತ್ಯಾಗವನ್ನು ಬಿಂಬಿಸುವ
ಈ ಹಾಡನ್ನು ಗಂಟೆಗೆ “ಶ್ರೀ ಆರ್ಟ್ ಫಿಲಿಂಸ್” ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಲಿದ್ದು ವೀಕ್ಷಕರು ವೀಕ್ಷಿಸಿ ಚಿತ್ರತಂಡವನ್ನು ಪ್ರೋತ್ಸಾಹಿಸಬೇಕು ಎಂದಿದ್ದಾರೆ.
(ಡಾ.ಪ್ರಭು ಗಂಜಿಹಾಳ)
ಮೊ- 9448775346
