ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮದ ಹೊರವಲಯದ ರಸ್ತೆ ಬದಿಯಲ್ಲಿ ಗೌಜಲ ಹಕ್ಕಿಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಗೌಜಲ ಹಕ್ಕಿಗಳನ್ನು ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡಿದೆ.
ಕೊಳ್ಳೇಗಾಲ ತಾಲೂಕಿನ ದಾಸನಪುರ ಗ್ರಾಮದ ಹೊರವಲಯದ ರಸ್ತೆ ಬದಿಯಲ್ಲಿ ಗೌಜಲ ಹಕ್ಕಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿರುವುದಾಗಿ ದೊರೆತ ಮಾಹಿತಿಯಂತೆ ಇಂದು ಬೆಳಿಗ್ಗೆ 7.30 ಗಂಟೆಗೆ ವ್ಯಕ್ತಿಯೋರ್ವ ಪಂಜರಗಳನ್ನು ಇಟ್ಟುಕೊಂಡು ಗೌಜಲ ಹಕ್ಕಿಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದುದ್ದು ಕಂಡು ಬಂತು. ತಕ್ಷಣ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಸ್ವತ್ತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಬಂಧಿತ ಆರೋಪಿಯು ಮಾದೇಶ (43 ವರ್ಷ), ತಂದೆ ಮಹದೇವ, ಮೇಧಿನಿ ಗ್ರಾಮ, ತಲಕಾಡು ಹೋಬಳಿ, ಟಿ. ನರಸೀಪುರ ತಾಲೂಕು, ಮೈಸೂರು ಜಿಲ್ಲೆಯವನಾಗಿದ್ದಾನೆ. ಆರೋಪಿಯಿಂದ 12 ಗೌಜಲ ಹಕ್ಕಿ ಮತ್ತು ಗೌಜಲ ಹಕ್ಕಿಗಳನ್ನು ಅಕ್ರಮವಾಗಿ ಬಂಧಿಸಿಟ್ಟಿದ್ದ 3 ಪಂಜರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ಮಹಾನಿರೀಕ್ಷಕರು. ಸಿ.ಐ.ಡಿ. ಅರಣ್ಯ ಘಟಕ, ಬೆಂಗಳೂರು ಮತ್ತು ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್‍ನೆಜ್ಜೂರು, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಕೊಳ್ಳೆಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಅವಿನಾಶ್ ಹಾಗೂ ಸಿಬ್ಬಂದಿ ಬಸವರಾಜ್, ಸ್ವಾಮಿ, ಜಮೀಲ್, ಲತಾ, ರಾಮಚಂದ್ರ, ಪ್ರಭಾಕರ್ ಮತ್ತು ಬಸವರಾಜ್ ರವರು ಪಾಲ್ಗೊಂಡಿದ್ದರು ಎಂದು ಪ್ರಕಟಣೆ ತಿಳಿಸಿದೆ.
Like this:
Like Loading...
Related