ಚಾಮರಾಜನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸೈದ್ದಾಂತಿಕ ಸಾಮಾರ್ಥ್ಯ, ಮಾನವೀಯ ಸಾಮಾಜಿಕ ಬದ್ದತೆಯುಳ್ಳ ಚಿಂತಕ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವುದು ಕಾಂಗ್ರೆಸ್ ಪಕ್ಷಕ್ಕೆ ಭಾರಿ ನಷ್ಟವನ್ನು ಉಂಟುಮಾಡಲಿದೆ ಎಂದು ಅಹಿಂದ: ದೇಸಿ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ ಹೇಳಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡಾ.ಎಚ್.ಸಿ.ಮಹದೇವಪ್ಪ ಅವರಂತಹ ಸೈದ್ದಾಂತಿಕ ಸಾಮರ್ಥದ ವ್ಯಕ್ತಿಯನ್ನು ಕೈಬಿಟ್ಟಿರುವುದು ನೋವಿನ ಸಂಗತಿ. ತಮ್ಮ ಸೈದ್ಧಾಂತಿಕ ನಿಲುವಿನಿಂದ ಮೈಸೂರು ಮತ್ತು ಕರ್ನಾಟಕದ ಜನತೆಯನ್ನು ಅವರು ಸದಾ ಎಚ್ಚರದಲ್ಲಿ ಇಟ್ಟಿದ್ದರು. ಎಷ್ಟು ಎತ್ತರಕ್ಕೆ ಬೆಳೆದಿದ್ದರು ಎಂದರೆ ಅವರ ವಿಚಾರಗಳನ್ನು ಕೇ ಳಬೇಕು ಎಂದು ಸಾಮಾನ್ಯರಿಗೂ, ಚಿಂತಕರಿಗೂ ಅನಿಸುತ್ತಿತ್ತು. ಕಾಂಗ್ರೆಸ್ ಪಕ್ಷವನ್ನು ಅವರು ಸದೃಡವಾಗಿ ಇಟ್ಟಿದ್ದರು. ಅವರನ್ನು ಸಚಿವ ಸಂಪುಟದಿಂದ ಕಡೆಗಣಿಸಿರುವುದು ಸಮುದಾಯ, ಅಭಿಮಾನಿಗಳಿಗೆ ಅಘಾತ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಎಚ್.ಸಿ.ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ನಂತರದ ನೈಜ ಉತ್ತರಾಧಿಕಾರಿಯಾಗಲು ಅರ್ಹರು. ಆದರೆ, ಇಂದಿನ ರಾಜಕೀಯ ಬೆಳವಣಿ ಗೆಗಳಲ್ಲಿ ಅಹಿಂದ ವರ್ಗದ ನಾಯಕರನ್ನು ಕಡೆಗಣಿಸಲಾಗುತ್ತಿದೆ ಇದು ಕಾಂಗ್ರೆಸ್ಗೆ ಮುಂದಿನ ದಿನಗಳಲ್ಲಿ ನುಂಗಲಾರದ ತುತ್ತಾಗುತ್ತದೆ. ದೂರಿದರು.
ಕಾಂಗ್ರೆಸ್ ಹೈಕಮಾಂಡ್‌ನ ದಲಿತ ವಿರೋಧಿ ತಂತ್ರಗಾರಿಕೆಯಿಂದ ಮಹದೇವಪ್ಪ ಅವರಂತಹ ಪ್ರಬಲ ನಾಯಕರಿಗೆ ಅನ್ಯಾಯವಾಗಿದೆ. ಇದು ಪಕ್ಷದ ಮೇಲೆ ದುಷ್ಪರಿಣಾಮ ಬೀರಲಿದೆ. ಇಂದಿನ ರಾಜಕಾರಣದಲ್ಲಿ ಮೇಲ್ವರ್ಗದ ಲಾಬಿಗಳು ಯಶಸ್ವಿಯಾಗುತ್ತಿದ್ದು, ಅಹಿಂದ ಮತ್ತು ದಲಿತ ರಾಜಕಾರಣವು ಅವಕಾಶವಾದಿ ರಾಜಕಾರಣದ ಬಲಿಪಶುಗಳಾಗುತ್ತಿವೆ ಎಂದರು.ಎಚ್.ಸಿ.ಮಹದೇವಪ್ಪ ಅವರು ದಲಿತ ಚಳವಳಿ ಮತ್ತು ಸಂಘಟನೆಗಳ ಪ್ರಬಲ ಧ್ವನಿಯಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡದಿರುವುದು ದಲಿತ ಸಮುದಾಯಗಳ ಬೆಂಬಲವನ್ನು ಕಾಂಗ್ರೆಸ್ ಕಳೆದುಕೊಳ್ಳಲು ಕಾರಣವಾಗಬಹುದು. ಮಹದೇವಪ್ಪ ಅವರ ಬೆಂಬಲಿಗರು ಮತ್ತು ಮುಖಂಡರು ಈ ಅನ್ಯಾಯವನ್ನು ಉಗ್ರವಾಗಿ ಖಂಡಿಸುತ್ತಿದ್ದು, ತಕ್ಷಣವೇ ಪಕ್ಷವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಹಿಂದ -ದೇಶಿ ಸಮುದಾಯಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಮಹಮ್ಮದ್ ಮತೀನ್, ಪ್ರಧಾನ ಕಾರ್ಯದರ್ಶಿ ಎಲ್.ಶಂಭುಲಿಂಗಸ್ವಾಮಿ, ಉಪಾಧ್ಯಕ್ಷರಾದ ರಾಚಪ್ಪ, ಎಂ.ರಾಮು, ಆಸಿಫ್ ಉಲ್ಲಾ, ಸೈಯದ್ ಅಜರ್ ಹಾಜರಿದ್ದರು.
