- ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿ ಪದಾಧಿಕಾರಿ ಸಭೆ
- ಚಾಮರಾಜನಗರ ಜಿಲ್ಲಾ ನೂತನ ಅಧ್ಯಕ್ಷರಾಗಿ ಸಿ.ಶೇಖರ್ ಮಸಣಾಪುರ
ಚಾಮರಾಜನಗರ: ನೊಂದ ಶೋಷಿತ ನಮುದಾಯಗಳ ಧ್ವನಿಯಾಗಿ ಕೆಲಸ ಮಾಡುವುದೇ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯ ಉದ್ದೇಶವಾಗಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ ಡಿ.ಸಿದ್ಧಪ್ಪ ದೇವಅರಸನಹಳ್ಳಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿ ಪದಾಧಿಕಾರಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶಪತ್ರ ವಿತರಿಸಿ ಮಾತನಾಡಿದರು.
ರಾಜ್ಯಾದ್ಯಂತ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅರ್ಹರಿಗೆ ಸರ್ಕಾರದ ಸೌಕರ್ಯಗಳನ್ನು ಸರಿಯಾಗಿ ತಲುಪುತ್ತಿಲ್ಲ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತಿದೆ. ಆಗಾಗಿ ನೊಂದ ಶೋಷಿತ ಸಮುದಾಯಗಳ ಪರ ನಿಲ್ಲಬೇಕು. ಅವರಿಗೆ ಸರ್ಕಾರ ಸವಲತ್ತುಗಳನ್ನು ತಲುಪಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದು, ಗಡಿಜಿಲ್ಲೆಯಲ್ಲಿ ಚಾಮರಾಜನಗರದಲ್ಲಿ ಮೊಟ್ಟಮೊದಲಿಗೆ ಜಿಲ್ಲಾ ಸಮಿತಿ ರಚನೆ ಮಾಡಿ ಪದಾಧಿಕಾರಿಗಳ ನೇಮಕ ಮಾಡಿ ಆದೇಶ ಪತ್ರ ನೀಡಲಾಗಿದ್ದು, ನೂತನ ಪದಾಧಿಕಾರಿಗಳು ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂಘಟನೆಯನ್ನು ಬಲಪಡಿಸುವಂತೆ ಸಲಹೆ ನೀಡಿದರು.
ನೂತನ ಪದಾಧಿಕಾರಿಗಳು : ಕರ್ನಾಟಕ ವಿಶ್ವರತ್ನ ಜೈಭೀಮ್ ಸಂಘಟನಾ ಸಮಿತಿಯ ಚಾಮರಾಜನಗರ ಜಿಲ್ಲಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ. ಶೇಖರ್ ಮಸನಾಪುರ, ಗೌರವಾಧ್ಯಕ್ಷರಾಗಿ ಬಸವಣ್ಣ ಮಸಣಾಪುರ, ನಿರ್ದೇಶಕರಾಗಿ ಶಶಿಕುಮಾರ್ ಬೇಡರಪುರ, ಚಂದಯ್ಯ, ನಾಗರಾಜು ನಂಜುಂಡಸ್ವಾಮಿ, ಜಯಸ್ವಾಮಿ, ರಂಗಸ್ವಾಮಿ ರವಿಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷರಾಗಿ ಜ್ಯೋತಿ ರಾಮಸಮುದ್ರ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಿ ನೇಮಕಾತಿ ಆದೇಶಪತ್ರ ವಿತರಿಸಲಾಯಿತು.
ಸಭೆಯಲ್ಲಿ ರಾಜ್ಯಾ ಗೌರವಾಧ್ಯಕ್ಷ ಮಹೇಶ್ ಕೋಚನಹಳ್ಳಿ, ರಾಜ್ಯಾಧ್ಯಕ್ಷ ಡಿ.ಸಿದ್ದಪ್ಪ ದೇವಅರಸನಹಳ್ಳಿ, ರಾಜ್ಯ ಕಾರ್ಯದರ್ಶಿ ಗುರುಸ್ವಾಮಿ ಕೆ.ಎಸ್. ಕೆರಹಳ್ಳಿ, ರಾಜ್ಯ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ದೊಡ್ಡ ಕಾಯಮ್ಮ, ಕಮಲ, ಖಜಾಂಚಿ ಮಾದಯ್ಯ ಸಂಘಟನಾ ಕಾರ್ಯದರ್ಶಿ ಎನ್.ಶಿವಕುಮಾರ್, ಸಂಚಾಲಕ ಸಿದ್ದರಾಜು ನಿರ್ದೇಶಕ ಪ್ರಕಾಶ್. ಮರಿಸ್ವಾಮಿ, ಹಾಜರಿದ್ದರು.
