- ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಿಂದ ಕಲರ್ ಬೆಲ್ಟ್ ಪರೀಕ್ಷೆ
ಚಾಮರಾಜನಗರ: ಕ್ರೀಡೆಯು ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ವೃದ್ದಿ ಮಾಡುತ್ತದೆ ಎಂದು ದಂತ ವೈದ್ಯ ಡಾ. ಕೃಪಾ ಶಂಕರ್ ಹೇಳಿದರು.
ನಗರದ ಪಿಡಬ್ಲ್ಯೂಡಿ ಸರ್ಕಾರಿ ಶಾಲಾವರಣದಲ್ಲಿ ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ನಡೆದ ಕಲರ್ ಬೆಲ್ಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬೆಲ್ಟ್ ವಿತರಿಸಿ ಮಾತನಾಡಿದರು. ಕಲುಷಿತ,ಕಲಬೆರಕೆ ಆಹಾರದಿಂದ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಆರೋಗ್ಯ ಹಾಳಾಗುತ್ತಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಇದರಿಂದ ಹೊರಬರಬೇಕಾದರೆ ಮಕ್ಕಳಿಗೆ ಕ್ರೀಡೆ ಅವಶ್ಯಕವಾಗಿದೆ ಎಂದರು.
ಕ್ರೀಡೆಯಿಂದ ಜೀವನದಲ್ಲಿ ಸದೃಢ ವ್ಯಕ್ತಿಗಳಾಗಿ ಬೆಳೆಯಬಹುದು. ಆಟೋಟಗಳಿಂದ ಉತ್ಸಾಹಿಯಾಗಿರಬಹುದು.ಜೀವನದಲ್ಲಿಯ ಉದ್ದೇಶ, ಗುರಿ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ ಇದೆ. ಆರೋಗ್ಯ ವೃದ್ಧಿಸಿಕೊಳ್ಳಲು ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ.ಪ್ರತಿಯೊಬ್ಬರೂ ಒಳ್ಳೆಯ ಆರೋಗ್ಯ ಹೊಂದಬಹುದು ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿಹಾನ್ ಸೋಸ್ಲೆ ಸಿದ್ದರಾಜು ಮಾತನಾಡಿ, ಆತ್ಮರಕ್ಷಣೆಗೆ ಕರಾಟೆ ಕಲೆಯು ಸಹಕಾರಿಯಾಗಿದೆ. ಕರಾಟೆಯು ಪ್ರಚಲಿತ ವಾಗುತ್ತಿದ್ದು, ಸರ್ಕಾರ ಕ್ರೀಡೆಗೆ ಸೇರಿಕೊಂಡಿದೆ. ಇದರಿಂದ ಉದ್ಯೋಗ ಸಿಗುವ ಭರವಸೆಯಿದೆ ಎಂದರು.
ಈ ಪರೀಕ್ಷೆಯಲ್ಲಿ ಜಿಲ್ಲೆಯ ಎಲ್ಲಾ ಭಾಗಗಳಿಂದ ನೂರಕ್ಕೂ ಹೆಚ್ಚು ಕರಾಟೆ ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆಯು ಯಶಸ್ವಿಯಾಗಿ ನಡೆದಿರುತ್ತದೆ.
ಕಾರ್ಯಕ್ರಮದಲ್ಲಿ ಪಿಡಬ್ಲ್ಯೂ.ಡಿ. ಶಾಲೆಯ ಮುಖ್ಯೋಪಾಧ್ಯಾಯ ಮಹದೇವಯ್ಯ, ಯೋಗ ತರಬೇತುದಾರ ರಾಜಶೇಖರ ಮೂರ್ತಿ, ಅನ್ಸರ್ ಖಾನ್ ಸಂಸ್ಥೆಯ ಮುಖ್ಯ ತರಬೇತಿದಾರ ವಕೀಲರಾದ ಸೆನ್ಸಾಯ್ ಎಂ. ರಾಜೇಂದ್ರ, ತರ ಬೇತುದಾರ ಸೆನ್ಸಾಯ್ ಯೋಗೇಶ್, ಸೆನ್ಸಾಯ್ ರಮೇಶ್, ಸೆಂಪಾಯ್ ಅಬ್ದುಲ್ ಫೈಸಲ್, ಶೇಖರ್, ವಿಜಯ್, ಅವಿನಾಶ್ ,ಲೋಕೇಶ್, ಸಿದ್ದರಾಜು ಮಹಾಂತೇಶ್ ಇನ್ನಿತರ ಕರಾಟೆ ತರಬೇತಿದಾರರು ಹಾಜರಿದ್ದರು.