- ಭಾರತೀಯ ಭೌದ್ಧ ಮಹಾಸಭಾದ ಜಿಲ್ಲಾ ಶಾಖೆಯಿಂದ ಕಾರ್ಯಕರ್ತರ ಶಿಬಿರ
ಚಾಮರಾಜನಗರ : ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಸ್ಥಾಪಿಸಿದ ಭಾರತೀಯ ಬೌದ್ಧ ಮಹಾಸಭಾದ ಶಾಖೆಯನ್ನು ಪ್ರತಿ ಗ್ರಾಮದಲ್ಲಿ ಸ್ಥಾಪಿಸಬೇಕು ಎಂದು ಬೌದ್ಧ ಮಹಾಸಭಾ ರಾಷ್ಟ್ರೀಯ ಸಂಘಟಕ ಮಲ್ಲಿಕಾರ್ಜುನ ಭಾಲ್ಕಿ ಹೇಳಿದರು.
ನಗರದ ಸಾರನಾಥ ಭೌದ್ಧವಿಹಾರದಲ್ಲಿ ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾ ಶಾಖೆಯ ವತಿಯಿಂದ ನಡೆದ ಕಾರ್ಯಕರ್ತರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು 1954 ಮೇ 4 ರಂದು ಮುಂಬೈನಲ್ಲಿ ಭಾರತೀಯ ಭೌದ್ಧ ಮಹಾಸಭಾ ಸ್ಥಾಪಿಸಿ ಸ್ವತಹ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಭಾರತವನ್ನು ಪ್ರಬುದ್ಧ ನಿರ್ಮಾಣಕ್ಕಾಗಿ ಈ ಸಂಸ್ಥೆ ಸ್ಥಾಪಿಸಿದರು. ಇದು ದೇಶದ 24 ರಾಜ್ಯಗಳಲ್ಲಿ ಶಾಖೆಗಳಿದ್ದು, ಕರ್ನಾಟಕದ 18 ಜಿಲ್ಲೆಗಳಲ್ಲೂ ಬೌದ್ಧ ಮಹಾಸಭಾದ ಶಾಖೆಗಳಿದ್ದು, ಅಂಬೇಡ್ಕರ್ ಅವರ ಆಶಯ ಈಡೇರಿಸಬೇಕಾದರೆ ದೇಶದ ಪ್ರತಿಜಿಲ್ಲೆಯಲ್ಲಿ ಶಾಖೆಗಳು ಆಗಬೇಕಿದೆ ಎಂದರು.
ಕೇಂದ್ರ ಶಿಕ್ಷಕರಾದ ಮನೋಹರ್ ಮೌರ್ಯ, ವೈಶಾಲಿಮೌರ್ಯ ಬೌದ್ಧ ಮಹಾಸಭಾದ ನೀತಿ, ನಿಯಮಗಳ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಬಿಎಸ್‌ಐ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಮಂಗಳದೊಡ್ಡಮನಿ, ಕೇಂದ್ರ ಶಿಕ್ಷಕಿ ಲತಾ, ಜಿಲ್ಲಾಧ್ಯಕ್ಷ ಆರ್.ಬಸವರಾಜು, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗಶಿಲ್ಪ, ಉಪಾಧ್ಯಕ್ಷ ರಾದ ಉಮೇಶ್ ಕುದರ್, ವಕೀಲರಾದ ಮಲ್ಲಿಕ್ ಯಲಕ್ಕೂರು, ತಾಲೂಕು ಅಧ್ಯಕ್ಷ ಕೃಷ್ಣಯ್ಯ, ಪ್ರಧಾನ ಕಾರ್ಯದರ್ಶಿ ನಂಜುಂಡಯ್ಯ, ಖಜಾಂಚಿ ಡಿ.ಸೋಮಣ್ಣ ಹಾಗೂ ಪದಾಧಿಕಾರಿಗಳು ಹಾಜರಿದ್ದರು