- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕದಿಂದ ಪತ್ರಿಕಾ ದಿನಾಚರಣೆ
- ಪತ್ರಕರ್ತರ ಕ್ಷೇಮ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದ ಪುಟ್ಟರಂಗಶೆಟ್ಟಿ.
ಚಾಮರಾಜನಗರ : ಸಮಾಜದ ಸ್ವಾಸ್ಥ್ಯಕಾಪಾಡುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದು ಎಂದು ಎಂಎಸ್‌ಐಎಲ್ ಅಧ್ಯಕ್ಷರು, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ನಗರದ ವರ್ತಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಪ್ರಾಮಾಣಿಕ ಪತ್ರಕರ್ತರು ಇದ್ದಾರೆ. ಯಾವುದೇ ತಾರತಮ್ಯಗಳನ್ನು ಮಾಡದೆ ಎಲ್ಲರನ್ನೂ ಸಮನಾಗಿ ಪ್ರೀತಿ ವಿಶ್ವಾಸದಿಂದ ಕಾರ್ಯನಿರ್ವಹಿಸುತ್ತಿದ್ದು, ಪತ್ರಕರ್ತರು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಪತ್ರಕರ್ತರ ವಸ್ತುನಿಷ್ಠೆ ವರದಿಯಿಂದ.ನಮ್ಮಲ್ಲಿ ಏನಾದರೂ ತಪ್ಪುಗಳ ಇದ್ದರೆ ತಿದ್ದುಕೊಳ್ಳಬಹುದು. ನಾವು ನೀವು ಸೇರಿಕೊಂಡು ಜಿಲ್ಲೆಯ ಅಭಿವೃದ್ಧಿ ಶ್ರಮಿಸೋಣ ಎಂದು ಹೇಳಿದರು
ಕಾರ್ಯಕ್ರಮದಲ್ಲಿ ನೆರೆದಿದ್ದ ಎಲ್ಲ ಪತ್ರಕರ್ತರಿಗೂ ಪತ್ರಿಕಾ ದಿನಾಚರಣೆಯ ಶುಭಾಯಶ ಕೋರಿದರು. ಪತ್ರಕರ್ತರ ಕ್ಷೇಮ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಪ್ರತಿಭಾ ಪುರಸ್ಕಾರ ನೀಡಿ
ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸುತ್ತದೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಯಲ್ಲಿ ಜಿಲ್ಲೆಯ ಪತ್ರಕರ್ತರ ಪಾಲು ಹೆಚ್ಚಾಗಿದೆ. ಜಿಲ್ಲೆಯ ಪತ್ರಕರ್ತರಿಗೆ ಸರ್ಕಾರದ ಸೌಲಭ್ಯಗಳು ಹೆಚ್ಚಿನ ಮಟ್ಟದಲ್ಲಿ ಸಿಗುವಂತಾಗಬೇಕು ಎಂದರು.
ಅಧ್ಯಕ್ಷ ತೆ ವಹಿಸಿದ್ದ ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, 2025-26ನೇ ಸಂಘದ ಚುನಾವಣೆಯಲ್ಲಿ ನಮ್ಮ ತಂಡ ಗೆದ್ದು ಬಂದ ಮೇಲೆ ಸಂಘದ ಸದಸ್ಯರ ಹಿತಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ. ಮೊದಲಿಗೆ ಸಂಘದ ಎಲ್ಲರ ಸದಸ್ಯರಿಗೂ ವಿಮೆ ಸೌಲಭ್ಯ, ಪತ್ರಕರ್ತರ ಕ್ಷೇಮನಿಧಿ. ದತಿ ಪ್ರಶಸ್ತಿ ನಿಧಿ ಸ್ಥಾಪನೆ, ಜಿಲ್ಲಾ ಪತ್ರಕರ್ತರ ಭವನ ನವೀಕರಣಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸದಸ್ಯರ ಅಗತ್ಯ ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಮಾಡಲಾಗುತ್ತದೆ ಎಂದರು..
ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಯನ್ನು ಉದಯವಾಣಿ ಹಿರಿಯ ವರದಿಗಾರ ಕೆ.ಎಸ್. ಬನಶಂಕರ ಆರಾಧ್ಯ ಅವರಿಗೆ ಅಕಾಡೆಮಿ ಸದಸ್ಯರೂ ಆದ ಶಿವಾನಂದ ತಗಡೂರು ಅವರು ಅಕಾಡೆಮಿಯ ಪರವಾಗಿ ಪ್ರದಾನ ಮಾಡಿದರು. ನಂತರ ಶ್ರೀಮತಿ ಗೌರಮ್ಮ- ಬಿ.ರಾಚಯ್ಯ ದತ್ತಿ ಪ್ರಶಸ್ತಿಯನ್ನು ಸುದ್ದಿಸಂಜೆ ಪತ್ರಿಕೆಯ ವರದಿಗಾರರಾದ ಎಂ.ಬಸವರಾಜು ಅವರಿಗೆ, ಲಿಂಗಮ್ಮ ಮತ್ತು ಆರ್. ಸಿದ್ದೇಗೌಡ ದತ್ತಿ ಪ್ರಶಸ್ತಿಯನ್ನು ಹನೂರು ತಾಲ್ಲೂಕಿನ ಆಂದೋಲನ ಪತ್ರಿಕೆ ವರದಿಗಾರ ಎಂ. ಮಹಾದೇಶ ಅವರಿಗೆ,ಸಿದ್ದಲಿಂಗ ದೇವರು ಹಿರಿಯ ಛಾಯಾಗ್ರಾಹಕ ಪ್ರಶಸ್ತಿಯನ್ನು ಪತ್ರಿಕಾ ಛಾಯಾಗ್ರಾಹಕರಾದ ಬದನಗುಪ್ಪೆ ಮಲ್ಲಣ್ಣ ಅವರಿಗೆ ಮತ್ತು ಮಾಜಿ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ದತ್ತಿ ಪ್ರಶಸ್ತಿಯನ್ನು ಗುಂಡ್ಲುಪೇಟೆ ತಾಲ್ಲೂಕಿನ ವಿಜಯ ಕರ್ನಾಟಕ ಪತ್ರಿಕೆಯ ಬೇಗೂರು ವರದಿಗಾರ ಮಣಿಕಂಠ ಅವರಿಗೆ,
ಲೇಖಕಿ ಎಚ್.ಕೆ.ವಿಜಯಾ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿ ಪ್ರಶಸ್ತಿಯನ್ನು ಆರ್.ಮ್ಯಾಕ್ಸ್ ನ್ಯೂಸ್ ವರದಿಗಾರರಾದ ಕೊಳ್ಳೇಗಾಲದ
ಸಿ.ಬಸಂತ್ ಕುಮಾರ್ ಅವರಿಗೆ ಹಾಗೂ ಹೊನ್ನಹಳ್ಳಿ ಪಟೇಲ್ ಎಚ್.ಎಂ. ಪುಟ್ಟಮಾದಪ್ಪ ದತ್ತಿ ಪ್ರಶಸ್ತಿಯನ್ನು ಗೊರುಕನ ಪತ್ರಿಕೆಯ ಯಳಂದೂರು ತಾಲ್ಲೂಕು ವರದಿಗಾರರಾದ ವೈ.ಎಂ.ಭಾನುಪ್ರಕಾಶ್ ಅವರಿಗೆ. ದತ್ತಿ ಪ್ರಶಸ್ತಿ ಪುರಸ್ಕೃತ ದೇವರಾಜು ಕಪ್ಪಸೋಗೆ ಅವರಿಗೆ ಪ್ರದಾನ ಮಾಡಲಾಯಿತು.
ಪ್ರತಿಭಾ ಪುರಸ್ಕಾರ: ಎಸ್ ಎಸ್ ಎಲ್ ಸಿ, ಪಿಯುಸಿ ಶೇ75ಕ್ಕಿಂತ ಹೆಚ್ವು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಎಎಸ್ಪಿ ಶಶಿಧರ್,
ಸಂಘದ ಜಿಲ್ಲಾ ಉಸ್ತುವಾರಿ ಸೋಮಶೇಖರ್ ಕೆರಗೋಡು, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್.ಲಕ್ಕೂರು, ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್ , ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ- ಸಂಸ್ಥೆಯ ಮುಖಂಡರು ಭಾಗವಹಿಸಿದ್ದರು.
-++++++++++
ನಕಲಿ ಪತ್ರಕರ್ತರ ಹಾವಳಿ ತಡೆಯದಿದ್ದರೆ ನೈಜ ಪತ್ರಕರ್ತನ ಘನತಗೂ ಧಕ್ಕೆ : ಶಿವಾನಂದ ತಗಡೂರು
ಚಾಮರಾಜನಗರ: ರಾಜ್ಯದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು ಅದನ್ನು ತಡೆದಿದ್ದರೆ
ಸಮಾಜಕ್ಕೆ ಗಂಭೀರ ಸಮಸ್ಯೆ ಉಂಟಾಗುತ್ತದೆ. ಇದು ನೈಜಪತ್ರಕರ್ತರ ಘನತೆಗೂ ಧಕ್ಕೆ ತರುತ್ತದೆ. ಸಮಾಜಕ್ಕೆ ವಸ್ತು ನಿಷ್ಠೆ, ನೈತಿಕತೆಯಿಂದ ಕೂಡಿದ ವಿಶ್ವಾಸಾರ್ಹ ಪತ್ರಕರ್ತ ಅವಶ್ಯಕ ತುಂಬಾ ಇದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ನಗರದ ವರ್ತಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಚಾಮರಾಜನಗರ ಜಿಲ್ಲಾ ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ನಕಲಿ ಪತ್ರಕರ್ತರ ಹಾವಳಿ, ಬ್ಲ್ಯಾಕ್‌ಮೇಲ್ ದಂಧೆ ಹೆಚ್ಚಾಗುತ್ತಿದ್ದು, ನೈಜಪತ್ರಕರ್ತರ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ. ಇಂತಹ ನಕಲಿಪತ್ರಕರ್ತರನ್ನು ಹೊರಹಾಕುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದರು.
ನೈಜಪತ್ರಕರ್ತ ಯಾರಿಗೂ ನೋವಾಗದ ರೀತಿಯಲ್ಲಿ ಸಮಾಜ ಪತ್ರಕರ್ತರ ಮೇಲೆ ಇಟ್ಟಿರುವ
ನಂಬಿಕೆಯನ್ನು ಉಳಿಸಿಕೊಂಡು
ಬಹಳ ಎಚ್ಚರವಹಿಸಿ ಸುದ್ದಿ ಮಾಡುತ್ತಾನೆ.ಒಬ್ಬ…
ಪತ್ರಕರ್ತ ಆಗಬೇಕಾದರೆ 6 ತಿಂಗಳು, ಒಂದು ವರ್ಷ ಆಗಬೇಕು. ಆದರೆ ಇಂದು ಒಂದು ಮೊಬೈಲ್ ಹಿಡಿದು ಯೂಟ್ಯೂಬ್ ಚಾನಲ್ ಮಾಡಿ ಒಂದು ಲೋಗೋ ಹಿಡಿದು ಕ್ಷಣದಲ್ಲೇ ಪತ್ರಕರ್ತ ಆಗಿಬಿಡಿತ್ತಾನೆ. ಬೇರೆ ಅಲ್ಲದೆ ನಮ್ಮೊಡನೆ ಇರುವ ಅನೇಕ ಬ್ಲ್ಯಾಕ್ ಮೇಲ್ ಪತ್ರಕರ್ತರು, ಕ್ರಿಮಿನಲ್ ಪತ್ರಕರ್ತರು ಆರ್‌ಟಿ ಎ ಪತ್ರಕರ್ತರು, ಬೇರೆ ಬೇರೆ ರೀತಿಯಲ್ಲಿ ವೃತ್ತಿಯನ್ನು ದಂಧೆ ಮಾಡಿಕೊಂಡಿರುವಂತರನ್ನು ಹೊರಹಾಕಬೇಕು ಎಂದು ಸಂಘವು ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಲಾಗಿದೆ ಎಂದರು.
ಸ್ವಾತಂತ್ರ್ಯಪೂರ್ವದ ಪತ್ರಿಕೋದ್ಯಮವೇ ಬೇರೆ ಸ್ವಾತಂತ್ರ್ಯನಂತರದ ಪತ್ರಿಕೋದ್ಯಮವೇ ಬೇರೆ ಆಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ದೇಶಕ್ಕಾಗಿ ನಾವು ಅಂತ ಕೆಲಸ ಮಾಡುವ ಭಾವನವಿತ್ತು. ಆದರೆ ಸ್ವಾತಂತ್ರ್ಯದ ನಂತರದಲ್ಲಿ ಅನೇಕ ಬದಲಾವಣೆಗಳು ಆಗಿದ್ದು, ಸಮಾಜ ಕಟ್ಟುವಂತ ಕೆಲಸವನ್ನು ಮಾಡುತ್ತಿದ್ದರು. 90 ದಶಕದಲ್ಲಿ ರೈತ ಚಳುವಳಿ ಪ್ರಾರಂಭವಾದಾಗ ವೃತ್ತಿ ಬದ್ಧತೆಯಲ್ಲಿ ಕೆಲಸ ಮಾಡುತ್ತಿದ್ದರು. ಖಾಸಗೀಕರಣ ನಂತರ ಅವೆಲ್ಲವೂ ಬದಲಾಗಿದೆ’ ಎಂದರು.
ಚಾಮರಾಜನಗರ ಪತ್ರಕರ್ತರು ಹಠಕ್ಕೆ ಬೀಳುವಂತವರು ಜೊತೆಗೆ ವೃತ್ತಿ ಬದ್ಧವಾಗಿ ಪಪ್ಪನಿಷ್ಠೆಯನ್ನು ಸದಾ ಉಳಿಸಿಕೊಂಡವರು ಎಂಬ ಮಾತು ಎಲ್ಲಕಡೆ ಇದೆ. ಜಿಲ್ಲೆಯು ವಿಭಿನ್ನ… ಜಿಲ್ಲೆಯಾಗಿದೆ. ಪ್ರಾಕೃತಿಕ ಸೌಂದರ್ಯ ಅಡಗಿರುವಂತಹದ್ದು, ಜಾನಪದ ಕಲೆಗಳ ತವರೂರಾಗಿದ್ದು. ದೈವಗಳ ಹಿನ್ನಲೆ ಇರವಂತಹ ಜಿಲ್ಲೆಯು ಎಲ್ಲರಿಗೂ ಇಷ್ಟವಾಗುವಂತಹದ್ದಾಗಿದೆ. ಪತ್ರಕರ್ತರು ವೃತ್ತಿಯನ್ನು ಕೂಡ ಬಹಳ ಎತ್ತರಕ್ಕೆ ವೃತ್ತಿಗೆ.. ಬದ್ಧವಾಗಿ ಮಾಡಿ ಕೊಂಡು ಬರುತ್ತಿದ್ದಾರೆ ಇದು ತುಂಬಾ ಸಂತಸದಾಯಕ ವಿಚಾರವಾಗಿದೆ. ಎಂದರು.
ಸಂಘದ ಕಾರ್ಯಕ್ಕೆ ಮೆಚ್ಚುಗೆ: ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ
ಸಂಘದ ಅಭಿವೃದ್ಧಿ ಕಾರ್ಯವನ್ನು ನೋಡಿ ತುಂಭಾ ಖುಷಿಯಾಗಿದೆ.ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಎಸ್. ಲಕ್ಕೂರು ಮತ್ತು ತಂಡ ಸಂಘದ ಭವನವನ್ನು ನವೀಕರಣಗೊಳಿಸಿದ್ದು, ಪತ್ರಕರ್ತರಿಗೆ ವಿಮೆ ಸೌಲಭ್ಯ, ಪತ್ರಕರ್ತರ ಕ್ಷೇಮನಿಧಿ, ದತ್ತಿ ಪಶಸ್ತಿ ನಿಧಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕೆಲಸ ಮಾಡಿರುವುದು ತುಂಬಾ ಸಂತಸ ಎಂದು ಸಂಘದ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಆರ್.ಎನ್.ಸಿದ್ದಲಿಂಗಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, 2025-26ನೇ ಸಂಘದ ಚುನಾವಣೆಯಲ್ಲಿ ನಮ್ಮ ತಂಡ ಗೆದ್ದು ಬಂದ ಮೇಲೆ ಸಂಘದ ಸದಸ್ಯರ ಹಿತಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲಾಗಿದೆ. ಮೊದಲಿಗೆ ಸಂಘದ ಎಲ್ಲರ ಸದಸ್ಯರಿಗೂ ವಿಮೆ ಸೌಲಭ್ಯ, ಪತ್ರಕರ್ತರ ಕ್ಷೇಮನಿಧಿ. ದತಿ ಪ್ರಶಸ್ತಿ ನಿಧಿ ಸ್ಥಾಪನೆ, ಜಿಲ್ಲಾ ಪತ್ರಕರ್ತರ ಭವನ ನವೀಕರಣಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸದಸ್ಯರ ಅಗತ್ಯ ಕಾರ್ಯಕ್ರಮಗಳನ್ನು ಆದ್ಯತೆ ಮೇಲೆ ಮಾಡಲಾಗುತ್ತದೆ ಎಂದರು..