- ಚಾಮುಂಡೇಶ್ವರಿಗೆ ಮಡಿಲಕ್ಕಿ ಸೇವೆ ಸಲ್ಲಿಸಿದ ಸುಮಂಗಲಿಯರು
- ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ಅನ್ನಸಂತರ್ಪಣೆ

ಚಾಮರಜನಗರ: ನಾಡದೇವಿ ಶ್ರೀಚಾಮುಂಡೇಶ್ವರಿ ವರ್ಧಂತಿ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿರುವ ಶ್ರೀಚಾಮುಂಡೇಶ್ವರಿ ಅಮ್ಮನವರಿಗೆ ವಜ್ರಾಂಗಿ ವಿಶ್ವರೂಪಿ ಅಲಂಕಾಲ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮುಂಜಾನೆಯೇ ದೇವಿಗೆ ಪ್ರಾತ:ಕಾಲದಲ್ಲಿ ಪಂಚಾಮೃತ ಅಭಿಷೇಕ, ಲಿಲತಾ ಸಹಸ್ರಾನಾಮ, ಖಡ್ಡಾಮಾಲಾರ್ಚನೆ ಮಾಡಿ. ದೇವಿಗೆ ವಿಶೇಷವಾಗಿ ವಜ್ರಾಂಗಿ ವಿಶ್ವರೂಪಿ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಯಿತು.
ಭಕ್ತರು ಸರತಿಸಾಲಿನಲ್ಲಿ ದೇವರಿಗೆ ಪೂಜೆ. ಸಲ್ಲಿಸಿದರು. ಸುಮಂಗಲಿಯರು ನಿಂಬೆಹಣ್ಣಿನ ಆರತಿ ಬೆಳಗಿದರು.
ದೇವಸ್ಥಾನದ ಆಗಮಿಕ ನಾಗರಾಜ್ ದೀಕ್ಷಿತ್ ಮಾತನಾಡಿ, ಆಷಾಢ ಮಾಸದಲ್ಲಿ ಬರುವ ರೇವತಿ ನಕ್ಷತ್ರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಆಚರಣೆ ಮಾಡಲಾಗುತ್ತದೆ. ಇಂದು ದೇವಿಗೆ ಪ್ರಾತ:ಕಾಲದಲ್ಲಿ ಪಂಚಾಮೃತ ಅಭಿಷೇಕ, ಲಿಲತಾ ಸಹಸ್ರಾನಾಮ, ಖಡ್ಡಾ ಮಾಲಾರ್ಚನೆ ಮಾಡಿ. ದೇವಿಗೆ ವಿಶೇಷವಾಗಿ ವಜ್ರಾಂಗಿ ವಿಶ್ವರೂಪಿ ಅಲಂಕಾರ ಮಾಡಿ ವಿಶೇಷಪೂಜೆ ಸಲ್ಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಲಾಗಿದೆ. ಆಗಾಗಿ ವಿಶೇಷವಾಗಿ ಯಾರು ದರ್ಶನ ಮಾಡುತ್ತಾರೋ ಅವರಿಗೆ ಅನುಗ್ರಹ ಆಗುತ್ತದೆ ಇಂದು ಮಂಗಳವಾರ ಎಲ್ಲ ಕಾರ್ಯಗಳು ಮಂಗಳ ಆಗಬೇಕು ವಿಶೇಷವಾದರಿಂದ ಸುಮಂಗಲಿಯರು ಮಡಿಲು ತುಂಬಿದರು ಎಂದರು.
ದೇವಿಗೆ ಮಡಿಲಕ್ಕಿ ಸೇವೆ ಸಲ್ಲಿಸಿದ
ರೇಖಾ ಮಾತನಾಡಿ, ಇಷ್ಟಾರ್ಥ ಸಿದ್ಧಿ ಗಾಗಿ ಚಾಮುಂಡೇಶ್ವರಿ ಮಡಿಲಕ್ಕಿ ಸೇವೆ ಸಲ್ಲಿಸಲಾಗಿದೆ. ದೇವಿ ಸರ್ವರಿಗೂ ಸನ್ಮಂಗಳ ಉಂಟು ಮಾಡಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದರು
ಅನ್ನಸಂತರ್ಪಣೆ : ಶ್ರೀಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯು
ಅನ್ನಸಂತರ್ಪಣೆ ನಡೆಯಿತು.