ಚಾಮರಾಜನಗರ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಚಾಮರಾಜನಗರ ಜಿಲ್ಲೆಯು ಶೇ. 91.27ರಷ್ಟು ಫಲಿತಾಂಶ ಪಡೆದಿದ್ದು, ರಾಜ್ಯದಲ್ಲಿ 30ನೇ ಸ್ಥಾನ ಪಡೆದುಕೊಂಡಿದೆ.
ಒಟ್ಟು 10544 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 9424 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ. 87.48ರಷ್ಟು ಬಾಲಕರು ಹಾಗೂ ಶೇ. 94.91ರಷ್ಟು ಬಾಲಕಿಯರು ಫಲಿತಾಂಶ ಪಡೆದಿದ್ದಾರೆ. ಕನ್ನಡ ಮಾಧ್ಯಮದ ಫಲಿತಾಂಶವು ಶೇ. 96.95ರಷ್ಟು ಹಾಗೂ ಅಂಗ್ಲ ಮಧ್ಯಮದ ಫಲಿತಾಂಶವು ಶೇ. 87.98ರಷ್ಟಿದೆ.
ಸರ್ಕಾರಿ ಶಾಲೆಗಳ 5133 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 4575 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 89.13ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಶಾಲೆಗಳ 2611 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 2335 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 89.43ರಷ್ಟು ಫಲಿತಾಂಶ ಬಂದಿದೆ. ಅನುದಾನ ರಹಿತ ಶಾಲೆಗಳ 2800 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 2714 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಶೇ. 96.93ರಷ್ಟು ಫಲಿತಾಂಶ ಬಂದಿದೆ.
ನಗರ ಪ್ರದೇಶದ ಫಲಿತಾಂಶವು ಶೇ. 92.64, ಗ್ರಾಮೀಣ ಪ್ರದೇಶದ ಫಲಿತಾಂಶವು ಶೇ. 90.45 ರಷ್ಟು ಫಲಿತಾಂಶ ಬಂದಿದೆ.
ಕೊಳ್ಳೇಗಾಲ ತಾಲೂಕು ಶೇ. 96.13, ಹನೂರು ಶೇ. 95.98, ಗುಂಡ್ಲುಪೇಟೆ ಶೇ. 93.03, ಯಳಂದೂರು ಶೇ. 92.23 ಹಾಗೂ ಚಾಮರಾಜನಗರ ತಾಲೂಕು ಶೇ. 84.48 ರಷ್ಟು ಫಲಿತಾಂಶ ಪಡೆದಿದೆ. ಜಿಲ್ಲೆಯಲ್ಲಿ ಒಟ್ಟು 59 ಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿವೆ.ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ವಿವರ ಇಂತಿದೆ.
- ರಿಷಿತ ಎಂ, ವಾಸವಿ ವಿದ್ಯಾಕೇಂದ್ರ ಕೊಳ್ಳೇಗಾಲ 625ಕ್ಕೆ 623
- ನಿಹಾರಿಕಾ, ಆದರ್ಶ ವಿದ್ಯಾಲಯ ಕೊಳ್ಳೇಗಾಲ 625ಕ್ಕೆ 620
- ಸಿಂಚನ ಸತೀಶ್, ವಾಸವಿ ವಿದ್ಯಾಕೇಂದ್ರ ಕೊಳ್ಳೇಗಾಲ 625ಕ್ಕೆ 620
- ದೀಪಿಕಾ ಎನ್, ಕಿತ್ತೂರು ರಾಣಿ ಚೆನ್ನಮ್ಮ ಕೊಳ್ಳೇಗಾಲ 625ಕ್ಕೆ 619
- ಪ್ರತಿಭಾ ಆರ್, ಆದರ್ಶ ವಿದ್ಯಾಲಯ ಗುಂಡ್ಲುಪೇಟೆ 625ಕ್ಕೆ 618
- ತನ್ಮಯ್, ವಾಸವಿ ವಿದ್ಯಾಕೇಂದ್ರ ಕೊಳ್ಳೇಗಾಲ 625ಕ್ಕೆ 618
- ಶಬರಿ, ಸರ್ಕಾರಿ ಪ್ರೌಢಶಾಲೆ ಕೆಂಪಯ್ಯನಹಟ್ಟಿ ಹನೂರು 625ಕ್ಕೆ 618