ಹನೂರು ತಾಲೂಕಿನ ಪುದುರಾಮಪುರದಲ್ಲಿ ರೈತ ಸಂಘದ ಗ್ರಾಮ ಘಟಕ ಉದ್ಘಾಟನೆ

ಹನೂರು: ತಾಲೂಕಿನ ಪುದುರಾಮಪುರ ಗ್ರಾಮದಲ್ಲಿ ಮೂಲ ಸಿದ್ದಂತದ ಅಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಲಸಿದ್ದಂತ ಅಡಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ ಅವರು, ರೈತರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ರೈತರು ಸಂಘಟಿತರಾದರೆ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ. ಅರಣ್ಯ ಅಂಚಿನಲ್ಲಿರುವ ರೈತರಿಗೆ ಕಾಡು ಪ್ರಾಣಿಗಳಿಂದ ಬೆಳೆ ನಷ್ಟ, ಜಮೀನು ಪಹಣಿ ಸಮಸ್ಯೆ, ಬೆಂಬಲ ಬೆಲೆ, ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸೇರಿದಂತೆ ಹಲವು ಸಮಸ್ಯೆಗಳಿವೆ. ಈ ಬಗ್ಗೆ ಸಂಘ ಯಾವಾಗಲೂ ರೈತರ ಪರವಾಗಿ ಹೋರಾಟ ಮಾಡುತ್ತದೆ ಎಂದರು.

ಪ್ರತಿ ಗ್ರಾಮದಲ್ಲೂ ರೈತ ಸಂಘದ ಘಟಕ ಬಲವಾಗಬೇಕು. ರೈತರ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಸಂಘದ ಗಮನಕ್ಕೆ ತನ್ನಿ ಎಂದು ಕರೆ ನೀಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ರಾಜಣ್ಣ ಮಾತನಾಡಿ, ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆಯವರು ರೈತರಿಗೆ ಸಹಕಾರ ನೀಡಬೇಕು. ಗ್ರಾಮ ಮಟ್ಟದಲ್ಲಿ ರೈತರಿಗೆ ಏನೇ ಸಮಸ್ಯೆ ಬಂದರೂ ತಾಲ್ಲೂಕು ಘಟಕ ಸದಾ ನಿಮ್ಮೊಂದಿಗೆ ಇರುತ್ತದೆ. ರೈತ ವಿರೋಧಿ ನೀತಿಗಳ ವಿರುದ್ಧ ಹೋರಾಟ ಅನಿವಾರ್ಯ ಎಂದು ತಿಳಿಸಿದರು.

ಗ್ರಾಮ ಘಟಕದ ಅಧ್ಯಕ್ಷ ತಿರುಮಲೈ ಮಾತನಾಡಿ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಜಿಲ್ಲಾ ಮತ್ತು ತಾಲೂಕು ನಾಯಕರಿಗೆ ಹಾಗೂ ಗ್ರಾಮಸ್ಥರಿಗೆ ಧನ್ಯವಾದಗಳು.ಮುಂದಿನ ದಿನಗಳಲ್ಲಿ ಎಲ್ಲ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ರೈತರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಹೇಳಿದರು.
.
ಗ್ರಾಮ ಘಟಕದ ಪದಾಧಿಕಾರಿಗಳು :ಗೌರವಧ್ಯಕ್ಷರಾಗಿ ನಾಗರಾಜು, ಅಧ್ಯಕ್ಷ ತಿರುಮಲೈ,ಉಪಾಧ್ಯಕ್ಷ ಮಾದಪ್ಪ,ಕರಾಯದರ್ಶಿ ಜಯ ವಿಜಯನ್,ಖಜಾಂಚಿ ಬೈರಾಲಿಂಗಂ,ಹಸಿರು ಸೇನೆಯ ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಅಧ್ಯಕ್ಷ ಅಲಮೇಲೂ ಸೇರಿದಂತೆ 20 ಕ್ಕೂ ಹೆಚ್ಚು ರೈತರು ಸೇರ್ಪಡೆಗೊಂಡರು.

ಇದೆ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸದಸ್ಯ ಹಾಗೂ ತಾ. ಉಪಾಧ್ಯಕ್ಷ ಕಾಶಿಗೌಡ ಮಹಿಳಾ ಜಿಲ್ಲಾ ಅಧ್ಯಕ್ಷೆ ರಾಜಮಣಿ, ಜಿಲ್ಲಾ ಉಪಾಧ್ಯಕ್ಷರಾದ ಲೋಕೇಶ್ ಗೌಡ,ರವಿ ನಾಯ್ಡು ಚಾಮರಾಜನಗರ ತಾ.ಅಧ್ಯಕ್ಷರ ಸಂತೋಷ್ ಆಲೂರು ಗುಂಡ್ಲುಪೇಟೆ ಅಧ್ಯಕ್ಷ ದಿಲೀಪ್,ಪ್ರಧಾನ ಕಾರ್ಯದರ್ಶಿ ಬೊಮ್ಮನಹಳ್ಳಿ ಲೋಕೇಶ್,ಕೊಳ್ಳೇಗಾಲ ತಾ.ಗೌರವಧ್ಯಕ್ಷ ಮಸಣಶೆಟ್ಟಿ,ಅಧ್ಯಕ್ಷ ನಟೇಶ್, ತಾಲ್ಲೂಕು ಮಹಿಳಾ ಅಧ್ಯಕ್ಷ ಮುಟ್ಟುಲಕ್ಷ್ಮಿ,ಹಸಿರು ಸೇನೆಯ ತಾ. ಅಧ್ಯಕ್ಷ ಪ್ರದೀಪ್ ಕುಮಾರ್,ಅಜ್ಜೀಪುರ ಗ್ರಾಮ ಘಟಕ ಅಧ್ಯಕ್ಷ ನಾಗರಾಜು, ವಾರದರಾಜು ಸೇರಿದಂತೆ ವಿವಿಧ ಗ್ರಾಮಗಳ ರೈತ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *