- ಬಿಸಲವಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 70 ಲಕ್ಷ ಸಾಲ ವಿತರಣೆ
ಚಾಮರಾಜನಗರ: ಸಹಕಾರ ಸಂಘಗಳು ರೈತರಿಗೆ ವರದಾನವಾಗಿದ್ದು, ಸಹಕಾರ ಸಾಲ ಪಡೆಯುವುದರಿಂದ ಎಲ್ಲ ರೀತಿಯ ಅನುಕೂಲ ಇದೆ ಎಂದು ನೂತನ ಸಚಿವ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಬಿಸಲವಾಡಿ ಶ್ರೀಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಬಿಸಲವಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ ವತಿಯಿಂದ ನಡೆದ ಕೆ.ಸಿ.ಸಿ.ಬೆಳೆ ಸಾಲದ ಚೆಕ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಚೆಕ್ ವಿತರಿಸಿ ಮಾತನಾಡಿದರು.
ಸಹಕಾರ ಸಾಲ ಪಡೆಯುವುದರಿಂದ ಎಲ್ಲ ರೀತಿಯ ಅನುಕೂಲ ಇದೆ. ಶೂನ್ಯ ಬಡ್ಡಿ ಇದೆ. ಕೆಲವು ವೇಳೆಯಲ್ಲಿ ಸಾಲ ಮನ್ನಾ ಆಗುತ್ತದೆ. ಆದರೆ ವಾಣಿಜ್ಯ ಬ್ಯಾಂಕ್ಗಳಲ್ಲಿ ಸಾಲ ಪಡೆದರೆ ಯಾವುದೇ ಕಾರಣಕ್ಕೂ ಸಾಲ ಮನ್ನಾ ಆಗುವುದಿಲ್ಲ. ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿರುವ ಇತಿಹಾಸವೇ ಇಲ್ಲ ಒಂದು ಬಾರಿ ಕಾಂಗ್ರೆಸ್ ಇದ್ದಾಗ ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಅವರು ರೈತರ ಸಾಲ ಮನ್ನಾ ಮಾಡಿರುವುದನ್ನು ಹೊರತುಪಡಿಸಿ ಎಲ್ಲವೂ ಸಾಲ ಮಾಡಿಲ್ಲ ಎಂದರು.
ರಾಜ್ಯ ಸರ್ಕಾರಗಳು ಬಂದಂತಹ ಸಂದರ್ಭದಲ್ಲಿ ಆಯಾಯ ಕಾಲದಲ್ಲಿ ರೈತರ ಸಾಲ ಬಡ್ಡಿ ಮನ್ನಾ, ಸಾಲವನ್ನೆ ಮನ್ನಾ ಮಾಡಿವೆ. ಆಗಾಗಿ ಸಾಲ ತೆಗೆದುಕೊಂಡವರಿಗೆ ಅನುಕೂಲ ಆಗುತ್ತದೆ. ಹೊಸಬರಿಗೆ ಸಾಲ ಕೊಡಬೇಕು ಎಂದು ಹೊಸಬರಿಗೂ ಸಾಲ ಕೊಡುವ ಕೆಲಸ ಮಾಡಲಾಗಿದೆ. ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 70 ಲಕ್ಷ ಸಾಲ ವಿತರಿಸಲಾಗಿದೆ ಎಂದರು.
ಹಿಂದೆ ಒಂದು ಎಕರೆ 30 ಸಾವಿರ ಸಾಲ ನೀಡಲಾಗುತ್ತಿತು ಈಗ 50 ಸಾವಿರ ಸಾಲ ನೀಡಲಾಗುತ್ತಿದೆ. 5 ಎಕರೆ ಹಿಂದೆ 1.50 ಲಕ್ಷ ಈಗ 2.50 ಲಕ್ಷ ಸಾಲ ನೀಡಲಾಗುತ್ತದೆ ಅನೇಕ ಬದಲಾವಣೆ ಮಾಡಲಾಗಿದೆ. ಅಪೆಕ್ಸ್ ಬ್ಯಾಂಕ್ ಗೆ ಇನ್ನೂ ಅಧ್ಯಕ್ಷರು ನೇಮಕ ಆಗಿಲ್ಲ. ಮಾಜಿ ಶಾಸಕ ನರೇಂದ್ರ ಅವರ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ದ್ದಾರೆ ಅವರ ಕಡೆಯಿಂದ ನಮ್ಮ ಎಂಡಿಸಿಸಿ ಬ್ಯಾಂಕ್ ಗೆ ಹೆಚ್ಚಿನ ಸಾಲವನ್ನು ಕೊಡಿಸುವ ಕೆಲಸ. ಮಾಡಲಾಗುತ್ತದೆ. ಟ್ರಾಕ್ಟರ್ ಸಾಲವನ್ನು ಕೊಡಿಸಲಾಗುತ್ತದೆ’ ಎಂದರು.
ಸಹಕಾರ ಸಂಘಕ್ಕೆ ಎಲ್ಲರೂ ಸದಸ್ಯರಾಗಬೇಕು. ಎಲ್ಲರೂ ಸಹಕಾರ ಸಂಘ ಅವಲಂಬಿಸಬೇಕು. ಸಹಕಾರ ಸಂಘ ಬಹಳ ಮುಖ್ಯ ರೈತರಿಗೆ ಸಹಕಾರ ಸಂಘ ವರದಾನವಾಗಿದೆ. ಆಗಾಗಿ ಎಲ್ಲರ ಸದಸ್ಯರಾಗಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು ಎಂದು ಸಲಹೆ ನೀಡಿದರು.
ಚಾಮರಾಜನಗರ ಜಿಲ್ಲೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ವ್ಯವಸಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಪಡೆದ ಜಿಲ್ಲೆ ಎಂದರೆ ಅದು ಚಾಮರಾಜನಗರ ಜಿಲ್ಲೆಯಾಗಿದೆ. ಜಿಲ್ಲೆಗೆ ಹೆಚ್ಚಿನ. ಸಾಲಸೌಲಭ್ಯ ನೀಡಬೇಕು ಎಂದು ಹೇಳಿದ್ದೇನೆ. ಆ ಮಟ್ಟದಲ್ಲಿ ಸಾಲಸೌಲಭ್ಯ ದೊರಕುತ್ತಿವೆ. ಹೆಚ್ಚಿನ ಹಣದ ವ್ಯವಹಾರ, ತೀರುವಳಿ ಆಗಬೇಕು ಎಂಬ ಒಂದು ನಿಯಮ ಇದೆ. ಅ. ನಿಯಮದ ಮಟ್ಟಕ್ಕೆ ತೆಗೆದುಕೊಂಡು ಹೋದರೆ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸಿಗುತ್ತದೆ ಎಂದರು.
ಸಂಘದ ಅಧ್ಯಕ್ಷ ಬಸವಣ್ಣ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ.ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹದೇವಪ್ಪ, ಸಂಘದ ಉಪಾಧ್ಯಕ್ಷ ಸಿದ್ದಶೆಟ್ಟಿ, ಮಾಜಿ
ಅಧ್ಯಕ್ಷರಾದ ಶಿವಸ್ವಾಮಿ, ಮಂಜೇಶ್,
ನಿರ್ದೇಶಕರಾದ ಎಸ್.ಉಮೇಶ್, ನಾಗರಾಜಪ್ಪ, ಶಿವಕುಮಾರ್, ನಂಜಪ್ಪ, ಕುಮಾರ್, ನೀಲಮ್ಮ,ಪದ್ಮ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಪಿಎಲ್ ಡಿಬ್ಯಾಂಕ್ ನಿರ್ದೇಶಕ ಎಂ.ರವಿ ಮುಖಂಡರಾದ ಶಂಭಪ್ಪ, ನಾರಾಯಣ ನಾಯಕ, ಸಿದ್ದನಾಯಕ, ಮಹದೇವಯ್ಯ, ನಾಗರಾಜು, ಚೆನ್ನಬಸಪ್ಪ, ಶಿವಕುಮಾರ್, ಶಿವಾನಂದ, ಬಸವರಾಜು, ಗಿರೀಶ್, ಚಂದ್ರಶೇಖರ್, ನಾಗೇಂದ್ರ, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮೇಶ್, ತಹಸೀಲ್ದಾರ್ ಗಿರಿಜಾ, ನಾಗೇಶ್, ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಗುತ್ತಿಗೆದಾರ ಪುರುಷೋತ್ತಮ, ಫಾದರ್ ಜೋಸೆಫ್, ಮಹದೇವಶೆಟ್ಟಿ, ಇತರರು ಹಾಜರಿದ್ದರು.
ಮತದಾರರೇ ನನ್ನ ಪಾಲಿನ ದೇವರು: ಸಚಿವ ಸಿ.ಪುಟ್ಟರಂಗಶೆಟ್ಟಿ
ಚುನಾಯಿತ ಪ್ರತಿನಿಧಿ ಆಯ್ಕೆಗೆ ಮತದಾರರೇ ದೇವರು, ಮತದಾರರ ಆಶೀರ್ವಾದ ಇಲ್ಲದೆ ಈ ಮಟ್ಟಕ್ಕೆ ಬೆಳೆಯಲು ಆಗೋದಿಲ್ಲ..ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮತದಾರರ ಆಶೀರ್ವಾದದಿಂದಲ್ಲೇ 4 ಬಾರಿ ಶಾಸಕರಾಗಲು, 2 ಬಾರಿ ಸಚಿವರಾಗಲು ಸಾಧ್ಯವಾಗಿದೆ ಎಂದರು.
