
ಚಾಮರಾಜನಗರ: ತುಮಕೂರು ಜಿಲ್ಲಾ ಉಪ್ಪಾರ ಸಂಘ ಮತ್ತು ಜಿಲ್ಲಾ ಉಪ್ಪಾರ ಸರ್ಕಾರಿ ನೌಕರರ ಸಂಘದ ವತಿಯಿಂದ ನೂತನ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು.

ಚಾಮರಾಜನಗರದ ಪರಿವೀಕ್ಷಣಾ ಮಂದಿರದಲ್ಲಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರನ್ನು ಭೇಟಿ ಮಾಡಿದ ಮುಖಂಡರು ಹಾಗೂ ನೌಕರರು, ಜಿಲ್ಲೆಯ ಎಲ್ಲಾ ತಾಲೂಕು ಸಂಘದ ಪದಾಧಿಕಾರಿಗಳು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು.

ನಂತರ ತುಮಕೂರು ಜಿಲ್ಲೆಯಲ್ಲಿ ಉಪ್ಪಾರ ಸಮುದಾಯಕ್ಕೆ ಭವನ ನಿರ್ಮಾಣಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಹಾಗೂ ಕುಣಿಗಲ್ ಪುರಸಭಾ ಸದಸ್ಯರಾದ ರಾಮು, ತುಮಕೂರು ಜಿಲ್ಲಾ ಉಪ್ಪಾರ ಸಂಘ ಅಧ್ಯಕ್ಷ ಸಿ.ಎಸ್.ಮಂಜುನಾಥ್, ಉಪಾಧ್ಯಕ್ಷ ರೇಣುಕಯ್ಯ ಆರ್., ಪ್ರಧಾನ ಕಾರ್ಯದರ್ಶಿ ನಾಗರಾಜು, ಜಿಲ್ಲಾ ಉಪ್ಪಾರ ಸರ್ಕಾರಿ ನೌಕರರ ಸಂಘಧ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಜಿ., ತುಮಕೂರು ಜಿಲ್ಲಾ ಉಪ್ಪಾರ ಸಂಘದ ನಿರ್ದೇಶಕರುಗಳಾದ ಸತೀಶ್, ರಾಮಚಂದ್ರಯ್ಯ, ಶಿವಾನಂದ್, ಹರೀಶ್, ಚನ್ನಿಗರಾಯಪ್ಪ, ಮೂಡಲ ಗಿರಿಯಪ್ಪ, ಪಾಂಡುರಂಗಯ್ಯ, ಬಸವರಾಜು, ರಾಮಚಂದ್ರಯ್ಯ, ಶಿರಾ ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ರಾಮಚಂದ್ರಯ್ಯ, ಶಿರಾ ತಾಲೂಕು ನಗರಸಭೆ ಪೌರಾಯುಕ್ತರಾದ ರುದ್ರೇಶ್, ಪಶುಸಂಗೋಪನೆ ಇಲಾಖೆಯ ನಿರ್ದೇಶಕರು ನಾಗೇಶ್, ನಿವೃತ್ತ ಆರ್‌ಟಿಓ ನಾಗರಾಜು, ಸಿ.ಆರ್.ಪಿ. ಕಾಂತರಾಜು, ನಿವೃತ್ತ ಶಿಕ್ಷಕ ನಾಗರಾಜು, ಗುಬ್ಬಿ ತಾಲೂಕು ಉಪ್ಪಾರ ಸಂಘದ ನಿರ್ದೇಶಕ ಉಮೇಶ್ ಸೇರಿದಂತೆ ಜಿಲ್ಲೆಯ ಹಲವು ಉಪ್ಪಾರ ಸಮುದಾಯದ ಮುಖಂಡರುಗಳು, ವಕೀಲರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

