
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗ್ರಾನೈಟ್ ಕ್ವಾರಿ ಮತ್ತು ಫ್ಯಾಕ್ಟರಿ ಅಸೋಸಿಯೇಷನ್ ವತಿಯಿಂದ ಜಿಲ್ಲೆಯ ಸಚಿವರಾದ ಶ್ರೀ ಪುಟ್ಟರಂಗಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಜಿ.ಎಂ. ಹೆಗಡೆ ನೇತೃತ್ವದಲ್ಲಿ ಪದಾಧಿಕಾರಿಗಳು ಸಚಿವರನ್ನು ಸನ್ಮಾನಿಸಿದರು. ಕಾಮಿಲ್ ಖಾನ್, ಇಮ್ರಾನ್, ಸುಯೆದ್ ಅಲಿ ಖಾನ್, ಆಲೂರು ಪ್ರದೀಪ್, ಕಜ್ಜೂ ಸಾಬ್ ಸೇರಿದಂತೆ ಅಸೋಸಿಯೇಷನ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು
