ಚಾಮರಾಜನಗರದಲ್ಲಿ ಕಾಂಗ್ರೆಸ್ ವಿರುದ್ದ ಬಿಜೆಪಿ ಪ್ರತಿಭಟನೆ

ಚಾಮರಾಜನಗರ:  ಕಾಂಗ್ರೆಸ್ ದೇಶ ಹಾಗೂ ರಾಜ್ಯದಲ್ಲಿ ಅರಾಜಕತೆ ಹರಡಿಸುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ   ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಅವರ ನೇತೃತ್ವದಲ್ಲಿನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ , ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್, ಬಿ.ಕೆ.ಹರಿಪ್ರಸಾದ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡಿ ಆಡಳಿತಕ್ಕೆ ತೊಂದರೆ ಕೊಡುವ ನಿಟ್ಟಿನಲ್ಲಿ ಅನೇಕ ದುಷ್ಟಶಕ್ತಿಗಳು ಯತ್ನಿಸುತ್ತಿವೆ. ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್ ಕಚೇರಿಗೆ  ಮುತ್ತಿಗೆ ಹಾಕಲು ಹೋಗುತ್ತಿದ್ದ ಅನ್ನು ವೇಳೆ ಅವರ ಮೇಲೆ ಮೊಟ್ಟೆ ಎಸೆದಿರುವುದು ಖಂಡನೀಯ
ಯಾವುದೇ ರಾಜಕೀಯ ಪಕ್ಷಗಳು, ಸಂಘಟನೆಗಳು  ದೇಶದಲ್ಲಿ ಹೋರಾಟ . ಮಾಡಲು ಸಂವಿಧಾನದಲ್ಲಿ ಹಕ್ಕುವಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಇದನ್ನು ನೋಡಿ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು  ಕಾಂಗ್ರೆಸ್ ಗೆ ಎಚ್ಚರಿಸಿದರು.
ಕಾಂಗ್ರೆಸ್‌ನ ನಾಯಕರ ಮೇಲೆ ಸಾರ್ವಜನಿಕರು ಮೊಟ್ಟೆ ಎಸೆಯಲು ಶುರು ಮಾಡಿದರೆ ನೀವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ ಅವರು ನಿಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದವರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ.ಮೊಟ್ಟೆ ಹೊಡೆಯುವ ಸಂಸ್ಕೃತಿಯನ್ನು ಕಾಂಗ್ರೆಸ್‌ನವರು ಕೂಡಲೇ ಬಿಡಬೇಕು. ದೇಶಕ್ಕೆ ಮಾರಕವಾಗಿ ಬಂದಿರುವುದು ಕಾಕ್ರೋಚ್ ಜನತಾ  ಪಾರ್ಟಿಯಾಗಿದ್ದು ದೇಶದಿಂದ ಆ ಪಕ್ಷವನ್ನು ಆಚೆ ಹಾಕಬೇಕಿದೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರತಿವರ್ಷವೂ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಮೊನ್ನೆ ನಡೆದ ನೀಟ್ ಪರೀಕ್ಷೆಯಲ್ಲಿ ಪಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಗೊತ್ತಾದ ತಕ್ಷಣ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರ ತೀವ್ರವಾದ ಕಾರ್ಯಾಚರಣೆ ಮಾಡಿದೆ. ಯಾವ ಇದರ ಹಿಂದೆ ಯಾವಯಾವ ಶಕ್ತಿಗಳಿವೆ. ಯಾವಯಾವ ಕೋಚಿಂಗ್ ಸೆಂಟರ್‌ನಲ್ಲಿ ಕುತಂತ್ರ ನಡೆದಿದೆ ಅವರನೆಲ್ಲ ಒಂದು ಕಡೆಯಿಂದ ರೌಂಡಪ್ ಮಾಡಿ 10, 15 .
ಕಾಂಗ್ರೆಸ್‌ ಮತ್ತು ಎಡಪಂಥೀಯ ಧೋರಣೆಯಿರುವ ಸಂಘಟನೆಗಳ ಜೊತೆ  ಕಾಕ್ರೋಚ್ ಜನತಾ ಪಾರ್ಟಿ ಜೊತೆ ಪ್ರತಿಭಟನೆ ಮಾಡುವ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿ ಮಾಡುವ ಕೆಲಸ ನಡೆಯುತ್ತಿದೆ. ಅದನ್ನು ಪ್ರತಿಭಟಿಸುವ ಕಾರ್ಯಕ್ರಮವನ್ನು ಬಿಜೆಪಿ ಮಾಡುತ್ತಿದೆ. ನರೇಂದ್ರಮೋದಿಯವರು ದೇಶದಲ್ಲಿ 12 ವರ್ಷಗಳಿಂದ ಯಾವುದೇ ಭ್ರಷ್ಟಾಚಾರ ಇಲ್ಲದೆ ಅಭಿವೃದ್ಧಿ ಪರ ಆಡಳಿತ ನಡೆಸಿದ್ದಾರೆ ಇದನ್ನು ಸಹಿಸಿಕೊಳ್ಳದೆ ಕಾಂಗ್ರೆಸ್ ದೇಶ, ರಾಜದಲ್ಲಿ ಆರಾಜಕತೆ ಸೃಷ್ಠಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, ಅಮೇರಿಕದಲ್ಲಿ ವ್ಯಾಸಂಗಕ್ಕೆ ಹೋಗಿದ್ದಂತಹ ಜಿರಲೆ ಪಾರ್ಟಿ ಸಂಸ್ಥಾಪಕರು ಅಮೇರಿಕದಿಂದ ಬಂದು ನೀಟ್ ಹಗರಣವನ್ನು ದೇಶವ್ಯಾಪಿ ಹಬ್ಬಿಸುವ ಕೆಲಸ ಮಾಡಿದರು. ಶಾಂತಿಯುತ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು ಆದರೆ ದೆಹಲಿ ಜಂತರ್ ಮಂತರ್ ಪ್ರತಿಭಟನೆ ನೋಡಿದರೆ ಗೂಂಡಾ ಸಂಸ್ಕೃತಿ ಲೋಕಸಭೆ ನುಗ್ಗುವ ಹೋರಾಟ ಮಾಡಿದರು. ಲೋಕಸಭೆಗೆ ನುಗ್ಗುವಂತಹದ್ದು ಏನಿತ್ತು. ದೇಶದ ಒಂದು ಪ್ರತಿಷ್ಠತ ಸಂಸ್ಥೆಯ ಮೇಲೆ ದಾಳಿ ಮಾಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ,   ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ವಕ್ತಾರ ಮನೋಜ್‌ ಪಟೇಲ್‌,ಜಿ.ಪಂ.ಮಾಜಿ ಸದಸ್ಯ ಬಾಲರಾಜು, ಸಾಹಿತಿ ಕೋಡಿಉಗನೆ ಮಂಜು, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಸೂರ್ಯಬಾಲರಾಜು, ಎಸ್ ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷ ಬುಲೆಟ್ ಚಂದ್ರು, ಟೌನ್ ಅಧ್ಯಕ್ಷ ಶಿವರಾಜ್,  ಎಸ್.ಟಿ. ಮೋರ್ಚಾ ರಾಜ್ಯ ಕಾರ್ಯಕರಿಣಿ ಸದಸ್ಯ ಶಂಕರ್‌ ನಾಯಕ,
ಚೂಡಾ ಮಾಜಿ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ ಜಿಲ್ಲಾ ಉಪಾಧ್ಯಕ್ಷರಾದ ಟಗರಪುರ ರೇವಣ್ಣ, ನಟರಾಜೇಗೌಡ್ರು,
ಕಾರ್ಯದರ್ಶಿಗಳಾದ ರವೀಶ್‌, ಸುಂದರ್‌ ರಾಜ, ಯಳಂದೂರು ಪಿ. ಮಹೇಶ್‌, ಕೆರೆಹಳ್ಳಿ ಮಹದೇವಸ್ವಾಮಿ, ಗುಂಡ್ಲುಪೇಟೆ ಮಂಡಲ ಅಧ್ಯಕ್ಷ ಮಹದೇವಪ್ರಸಾದ್ ರವರು‌, ಕೊಳ್ಳೇಗಾಲ ಗ್ರಾ. ಮಂಡಲ ಅಧ್ಯಕ್ಷ ಕೆ.ಎನ್.ನಾಗೇಶ್‌, ಕೊಳ್ಳೇಗಾಲ ನಗರ ಮಂಡಲ ಅಧ್ಯಕ್ಷ ಬೂದಿತಿಟ್ಟು ಶಿವಕುಮಾರ್‌ , ಹನೂರು ಮಂಡಲ ಅಧ್ಯಕ್ಷ ವೃಷಬೇಂದ್ರಸ್ವಾಮಿ , ಜಿಲ್ಲಾ ಮೋರ್ಚಾಗಳ ಅಧ್ಯಕ್ಷರಾದ ಕಮಲಮ್ಮ, ಚಂದ್ರಶೇಖರ್‌, ನವೀನ್‌ ಮೌರ್ಯ, ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಣ್ಣ ರಾಮಸಮುದ್ರ, ಗುರುಪ್ರಸಾದ್‌, ಗೋಪಾಲಕೃಷ್ಣ, ವೀರೇಂದ್ರ, ಮಂಜುನಾಥ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಂಗಸ್ವಾಮಿ, ಹಿರಿಯ ಮುಖಂಡರುಗಳಾದ ಗಣೇಶ್ ದೀಕ್ಷಿತ್‌, ಬಂಗಾರನಾಯಕ,ಐಟಿ ವಿಭಾಗದ ಪ್ರಕಾಶ್‌, ಮಂಜು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೂಸಣ್ಣ, ಭಾಸ್ಕರ್‌, ಸಾಹಿತಿ ಕೋಡಿಯುಗನೆ ಮಂಜು, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷ ಉಷಾ, ಬಿಎಲ್‌ಎ 1 ಲೋಕೇಶ್‌ ಜತ್ತಿ, ವೇಣುಗೋಪಾಲ್‌, ಮಾಜಿ ನಗರಸಭಾ ಸದಸ್ಯರಾದ ಶಿವಣ್ಣ ಹಾಗೂ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *