ಗಾಳಿಪಟ ಉತ್ಸವದಿಂದ ಮಕ್ಕಳಲ್ಲಿ ಮಾನಸಿಕ, ದೈಹಿಕ ಆರೋಗ್ಯ ವೃದ್ದಿ: ಉದ್ಯಮಿ ಶ್ರೀನಿಧಿಕುದರ್

  • ಸೋಮವಾರಪೇಟೆ ಎಂಸಿಎಸ್ ಪಬ್ಲಿಕ್ ಸ್ಕೂಲ್ ನಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ
  • ಗಾಳಿಪಟ ಹಾರಿಸಿ ಕುಣಿದು ಸಂಭ್ರಮಿಸಿ ವಿದ್ಯಾರ್ಥಿಗಳು

ಚಾಮರಾಜನಗರ:  ಗಾಳಿಪಟ ಉತ್ಸವದಿಂದ ಮಕ್ಕಳಲ್ಲಿ ಮಾನಸಿಕ, ದೈಹಿಕ ಆರೋಗ್ಯ ವೃದ್ದಿಯಾಗುತ್ತದೆ ಎಂದು ಉದ್ಯಮಿ ಶ್ರೀನಿಧಿಕುದರ್ ಹೇಳಿದರು.
ನಗರದ ಸೋಮವಾರಪೇಟೆ ಎಂಸಿಎಸ್ ಪಬ್ಲಿಕ್ ಸ್ಕೂಲ್ ನಲ್ಲಿ ಅಯೋಜಿಸಿದ್ದ  ಗಾಳಿಪಟ ಉತ್ಸವ ಕ್ಕೆ ಚಾಲನೆ ನೀಡಿ ಮಾತನಾಡಿದರು.
ಗಾಳಿಪಟ ಉತ್ಸವವು ಮುಖ್ಯವಾಗಿ ಮಕರ ಸಂಕ್ರಾಂತಿ ಅಥವಾ ಉತ್ತರಾಯಣ ಹಬ್ಬದ ಸಂದರ್ಭದಲ್ಲಿ ಸೂರ್ಯನ ಉತ್ತರಾಯಣ ಗತಿಯ ಆರಂಭವನ್ನು ಸಂಭ್ರಮಿಸಲು ನಡೆಯುವ ಸಾಂಪ್ರದಾಯಿಕ ಕ್ರೀಡೆ, ಸಾಂಸ್ಕೃತಿಕ ಆಚರಣೆಯಾಗಿದೆ. ಇದು ಚಳಿಗಾಲದ ಮುಕ್ತಾಯ ಹಾಗೂ ಬೇಸಿಗೆಯ ಆಗಮನವನ್ನು ಸೂಚಿಸುತ್ತದೆ ಎಂದರು.
ಇತಿಹಾಸ ಮತ್ತು ಮಹತ್ವ ಉತ್ತರಾಯಣ ನಂಟು: ಭಾರತದಲ್ಲಿ, ವಿಶೇಷವಾಗಿ ಗುಜರಾತ್‌ನಲ್ಲಿ ಮಕರ ಸಂಕ್ರಾಂತಿಯ ದಿನದಂದು ಆಕಾಶವನ್ನು ಬಣ್ಣಬಣ್ಣದ ಪಟಗಳಿಂದ ಅಲಂಕರಿಸುವ ಉತ್ತರಾಯಣ ಉತ್ಸವ ಬಹಳ ಪ್ರಸಿದ್ದವಾಗಿದೆ. ಚಳಿಗಾಲದ ಮಾಗಿಯ ಕಾಲದಲ್ಲಿ ಬೀಸುವ ಅನುಕೂಲಕರ ಗಾಳಿಯು ಗಾಳಿಪಟಗಳನ್ನು ಆಕಾಶದಲ್ಲಿ ಹಾರಿಸಲು ಪ್ರೇರೇಪಿಸುತ್ತದೆ.
ಪ್ರಸ್ತುತ ಇದು ಕೇವಲ ಸ್ಥಳೀಯ ಆಟವಾಗಿರದೆ, ಅಂತರಾಷ್ಟ್ರೀಯ ಉತ್ಸವವಾಗಿದ್ದು, ಗುಜರಾತಿನ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿದೆ ಎಂದರು.
ಶಾಲೆಯ ಆಡಳಿತಾಧಿಕಾರಿ ಎಂ ನಾಗರಾಜು, ಪ್ರಾಂಶುಪಾಲ   ಕೆ.  ಶಶಿಧರಮೂರ್ತಿ ಮುಖ್ಯಶಿಕ್ಷಕ ಹೆಚ್. ಎಂ.ಮಹದೇವಸ್ವಾಮಿ, ಶಿಕ್ಷಕ ಸಿ ಎನ್ ಸಂಪತ್ ಕುಮಾರ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *