ರೈತರ ಆರ್ಥಿಕ ಸ್ವಾವಲಂಬನೆಗೆ ಹೈನುಗಾರಿಕೆ ಸಹಕಾರಿ: ಹೆಚ್.ಎಸ್.ಬಸವರಾಜು

  • ಕಾಗಲವಾಡಿ ಬಿಎಂಸಿ ಕೇಂದ್ರದ ಹಾಲು ಉತ್ಪಾದಕರ ಸಹಕಾರ ಸಂಘದ 2025-26ನೇಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ.

ಚಾಮರಾಜನಗರ:  ರೈತರ ಆರ್ಥಿಕ ಸ್ವಾವಲಂಬನೆಗೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಸಹಕಾರಿ ಎಂದು ಚಾಮುಲ್ ನಿರ್ದೇಶಕ ಹೆಚ್.ಎಸ್. ಬಸವರಾಜು ಹೇಳಿದರು.
ತಾಲೂಕಿನ ಕಾಗಲವಾಡಿ ಬಿಎಂಸಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ಸಂಘದ 2025-26ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಗುಣಮಟ್ಟದ ಹಾಲು ಪೂರೈಸಿದಲ್ಲಿ ಸಂಘಕ್ಕೆ ಮತ್ತಷ್ಟು ಅನುಕೂಲಗಳನ್ನು ಪಡೆಯಲು ಸಾಧ್ಯ. ಸಂಘಕ್ಕೆ ಬರುವ ಎಲ್ಲ ಲಾಭವನ್ನು ಸಂಘದ ಸದಸ್ಯರು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು.
ರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸುವ ಜೊತೆಗೆ ಕಾಲಕಾಲಕ್ಕೆ ತಪಾಸಣೆ ಮಾಡಿಸಬೇಕು. ರೈತರು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ಹಣ ಹೊಂದಿಸಿಕೊಳ್ಳಲು ಸಾಧ್ಯ ಎಂದರು ಸಂಘದ ಕಟ್ಟಡ ಅನುದಾನವನ್ನು ಕೊಡಿಸಿಕೊಡವುದಾಗಿ ಭರವಸೆ ನೀಡಿದರು.
ಚಾಮುಲ್ ನಿರ್ದೇಶಕ  ಸದಾಶಿವಮೂರ್ತಿ ಮಾತನಾಡಿ: ಒಕ್ಕೂಟ ಕ್ಕೆ ಲಾಭ ಬಂದಿದ್ದರೆ ರೈತರಿಗೆ ಹೆಚ್ಚಿನ ಲಾಭ ಬರುತ್ತದೆ. ಒಕ್ಕೂಟವು  ಲೀಟರ್‌ ಹಾಲಿಗೆ ನಿಗದಿತ ಆಧಾರದಲ್ಲಿ  ಫ್ಯಾಟ್ ಆಧಾರದಲ್ಲಿ  ದರ ನೀಡುತ್ತದೆ. ಜೀವನಾಧಾರ ಯೋಜನೆ ಪಡೆದುಕೊಳ್ಳಬೇಕು. ಸಂಘವು ಲಾಭದಾಯಕವಾಗಿರುವುದು ತುಂಬಾ ಖುಷಿ ತಂದಿದೆ. ಸಂಘಕ್ಕೆ  ಗುಣಮಟ್ಟದ ಹೆಚ್ಚಿನ ಹಾಲನ್ನು ಡೈರಿಗೆ ಸರಬರಾಜು ಮಾಡುವ ಸಂಘದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ,  ಸಂಘವು 50 ವರ್ಷಗಳ ಇತಿಹಾಸ ಹೊಂದಿದ್ದು ಸಂಘದ ಸದಸ್ಯರು ಸಂಘಕ್ಕೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಘ ಲಾಭದಾಯಕವಾಗಿ ನಡೆಯುತ್ತಿದ್ದು, 2025-26ನೇ ಸಾಲಿಗೆ  211668 ರೂ. ನಿವ್ವಳ ಲಾಭ ಬಂದಿದೆ. ಸಂಘದ ಸಭಾಂಗಣ ಕಾಮಗಾರಿ ನಡೆಯುತ್ತಿದೆ. ಒಕ್ಕೂಟದ ನಿರ್ದೇಶಕರು 3 ,ಲಕ್ಷ ರೂ.ಕೊಡುವುದಾಗಿ ಭರವಸೆ ನೀಡಿದ್ದಾರೆ. ಒಟ್ಟು 9ಲಕ್ಷ ರೂ ಆದರೆ ಸಭಾಂಗಣದ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ವರ್ಷದ ಸಭೆಯನ್ನು ಅಲ್ಲೆ ಮಾಡಲಾಗುವುದು ಎಂದರು.
ಪ್ರತಿಭಾ ಪುರಸ್ಕಾರ: ಎಸ್ ಎಸ್ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಸಂಘದ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಬಹುಮಾನ ವಿತರಣೆ: ಸಂಘಕ್ಕೆ ಹೆಚ್ಚಿನ ಸರಬರಾಜು ಮಾಡಿದ ರೈತರಿಗೆ ಬಹುಮಾನ ವಿತರಿಸಲಾಯಿತು.
ಸಭೆಯಲ್ಲಿ ಚಾಮುಲ್ ಉಪ ವ್ಯವಸ್ಥಾಪಕ ಡಾ.ಎನ್.ಅಮರ್, ವಿಸ್ತರಣಾಧಿಕಾರಿ ಲಕ್ಷ್ಮೀ,  ಸಂಘದ ಉಪಾಧ್ಯಕ್ಷ ಮಹಾದೇವಸ್ವಾಮಿ, ನಿರ್ದೇಶಕರಾದ ಎಂ.ಮಹಾದೇವಸ್ವಾಮಿ, ಸಿದ್ದಶೆಟ್ಟಿ, ಮಹಾದೇವಸ್ವಾಮಿ, ಎಂ.ಶಿವಸ್ವಾಮಿ, ದಕ್ಷಿಣಮೂರ್ತಿ, ನಾಗರಾಜು, ಎಂ.ಜಗದೀಶ್, ಕೆ.ಎನ್.ಶೋಭ, ಶಶಿಕಲಾ, ಮುಖ್ಯ ಕಾರ್ಯನಿರ್ವಾಹಕ ಎಂ.ಮಹಾದೇವಸ್ವಾಮಿ, ಹಾಲು ಪರೀಕ್ಷಕ ಬಾಬು, ಸಹಾಯಕ ಸುರೇಶ್, ಸದಸ್ಯರ ಭಾಗವಹಿಸಿದ್ದರು.

Leave a Reply

Your email address will not be published. Required fields are marked *