ಚಾಮರಾಜನಗರ: ತಾಲೂಕಿನ ಆಲೂರುಹೊಮ್ಮ ಗ್ರಾಮದಲ್ಲಿ ನಾಯಕ ಸಮುದಾಯ ವತಿಯಿಂದ ಶ್ರೀಮಂಟೇಸ್ವಾಮಿ ಕಂಡಾಯೋತ್ಸವ ವಿಜೃಂಭಣೆಯಿಂದ ನೆರವೇರಿತು.
ಕುರುಬರಹುಂಡಿಯ ನಲ್ಲಿಮರದಕಟ್ಟೆ ಗದ್ದುಗೆಯಿಂದ ತಂದ ಕಂಡಾಯಗಳನ್ನು ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಅರಳಿಕಟ್ಟೆಯ ಬಳಿಯಲ್ಲಿ ಸ್ವಚ್ಛಗೊಳಿಸಿ ವಿವಿಧ ಹೂ-ಹೊಂಬಾಳೆಯಿಂದ ಅಲಂಕರಿಸಿ ಪೂಜೆ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ನಾಯಕರ ಬೀದಿಯಲ್ಲಿ ಹಾಕಿದ ಹಸಿರು ಚಪ್ಪರದಲ್ಲಿದಡಿಯಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು. ಮೆರವಣಿಗೆ ಹಾದು ಹೋಗುವ ಬೀದಿಗಳನ್ನು ತಳಿರು-ತೋರಣಗಳು, ವರ್ಣಮಯ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ರಸ್ತೆಯ ಮೇಲೆ ಬಣ್ಣಬಣ್ಣದ ರಂಗೋಲಿ ಬಿಟ್ಟು ಸ್ವಾಗತಿಸಲಾಗಿತ್ತು. ತಮಟೆ ಸದ್ದಿಗೆ ಕುಣಿದು ಸಂಭ್ರಮ ಯುವಕರು.
ಮೆರವಣಿಗೆಯಲ್ಲಿ ದೇವರ ಗುಡ್ಡರು, ಗ್ರಾಮದ ಯಜಮಾನರು ಹಾಗೂ ಭಕ್ತರು ಭಾಗವಹಿಸಿದ್ದರು.