ಚಾಮರಾಜನಗರ: ಚಾಮರಾಜನಗರ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಅಬ್ದುಲ್ ಅಜೀಜ್ ದೀನಾ ಅವರನ್ನು ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ನಗರದ ಲೋಕೋಪಯೋಗಿ ಇಲಾಖೆ ಕಚೇರಿಯ ಪಕ್ಕದಲ್ಲಿರುವ ತಾಲೂಕು ಲೋಕೋಪಯೋಗಿ ಇಲಾಖೆ ಸಿವಿಲ್ ಗುತ್ತಿಗೆದಾರ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಎ.ಎನ್.ರವಿ ಅವರ ನೇತೃತ್ವದಲ್ಲಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಅಬ್ದುಲ್ ಅಜೀಜ್ ಅವರಿಗೆ ಶಾಲು ಹೊದಿಸಿ, ಹಾರಹಾಕಿ, ಫಲತಾಂಬೂಲ ನೀಡಿ ಸನ್ಮಾನಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಡಿ.ಪಿ.ಪ್ರಕಾಶ್,
ಖಜಾಂಚಿ ಬಿ .ಎಲ್ .ಮಹದೇವಸ್ವಾಮಿ, ನಿರ್ದೇಶಕರಾದ ಕೆ .ಎಲ್. ರವಿಕುಮಾರ್. ಸಿ.ಜಿ ನಾಗೇಶ್.ಕೆರೆಹಳ್ಳಿ ರೇವಣ್ಣ,ದೊರೆಸ್ವಾಮಿ ನಾಯಕ, ಡಿ.ನಾರಾಯಣಸ್ವಾಮಿ ನಲ್ಲೂರು, ಗುತ್ತಿಗೆದಾರರಾದ ಕೂಡ್ಲೂರು ಶ್ರೀಧರ್ಮೂರ್ತಿ,ಸಿ. ಕೆ .ಮಂಜು ಬಿಸಲವಾಡಿ ಶಿವಕುಮಾರ್ ಹಾಜರಿದ್ದರು