ಎಸ್‌.ಜಾನಕಿ ಅವರು ತಮ್ಮ ಗಾಯನದ ಮೂಲಕ ಜನಮಾನಸದಲ್ಲಿ ಅಜರಾಮರ: ಜಿಲ್ಲಾಧಿಕಾರಿ ಶ್ರೀರೂಪ

  • ಚಾಮರಾಜನಗರದಲ್ಲಿ ಗಾನಕೋಗಿಲೆ ಎಸ್.ಜಾನಕಮ್ಮ ಪುಣ್ಯಸ್ಮರಣಾ ಕಾರ್ಯಕ್ರಮ, ಅನ್ನಸಂತರ್ಪಣೆ

ಚಾಮರಾಜನಗರ: ಗಾನ ಕೋಗಿಲೆ ಎಸ್.ಜಾನಕಿ ಅವರು ತಮ್ಮ ಸುಮಧರ ಕಂಠ, ಅದ್ಭುತ ಗಾಯನದ ಮೂಲಕ ಜನರಮನಸ್ಸಿನಲ್ಲಿ ಎಂದೆಂದಿಗೂ ಅಜರಾಮರವಾಗಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಶ್ರೀರೂಪ ಹೇಳಿದರು.
ನಗರದ ಭುವನೇಶ್ವರಿ ವೃತ್ತದಲ್ಲಿ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ, ಯುವ ಕರ್ನಾಟಕ ವೇದಿಕೆ ವತಿಯಿಂದ ಆಯೋಜಿಸಿದ್ದ ಗಾನ ‌ ಕೋಗಿಲೆ ಎಸ್.ಜಾನಕಿ ಅವರ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಪುಷ್ಪಾರ್ಚನೆ ಮಾಡಿ
ಮಾತನಾಡಿದರು.
ಎಸ್. ಜಾನಕಿ ಅವರು 17ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರ ಹಾಡುಗಳನ್ನು ಹಾಡಿದ್ದಾರೆ. ಅವರ ಧ್ವನಿಯು ಪ್ರತಿಯೊಬ್ಬರ ಭಾವನೆಗಳಿಗೆ ಕನ್ನಡಿಯಾಗಿತ್ತು. ಅವರು ಜನಮಾನಸದಲ್ಲಿ ಹಸಿರಾಗಿದ್ದು, ಸಂಗೀತ ಲೋಕದ ಕಣ್ಮಣಿಯಾಗಿ ಶಾಶ್ವತವಾಗಿ ಉಳಿದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ನೆಲೆಸಲಿ ಎಂದು ಆಶಿಸಿದರು.
ನಂತರ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಗಣೇಶ್‌ ದೀಕ್ಷಿತ್, ಮಾಜಿ ಅಧ್ಯಕ್ಷೆ ಚಿನ್ನಮ್ಮ, ಉದ್ಯಮಿ ಶ್ರೀನಿಧಿಕುದರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಕೃಷ್ಣನಾಯಕ.ಜಿಲ್ಲಾರೈತ ಹಿತರಕ್ಷಣಾ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಲೂರಮಲ್ಲು, ಪ್ರಧಾನ ಕಾರ್ಯದರ್ಶಿ ‌ ಬಸವನಪುರ ರಾಜಶೇಖರ,  ಎಲ್.ಸುರೇಶ್,ಜಿ.ಎಂ.ಶಂಕರ್, ವೆಂಕಟೇಶ್, ಡಾ.ಎನ್.ಪಿ.ಬಾಲಸುಬ್ರಹ್ಮಣ್ಯಂ ಗಾನ ಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಗಲದ ಹೊಸೂರು ಶಿವಣ್ಣ, ಉಪಾಧ್ಯಕ್ಷೆ ವಸಂತಮ್ಮ, ಗೌರವಾಧ್ಯಕ್ಷ ಬಂಗಾರು, ಕಾರ್ಯದರ್ಶಿ ಜೋಸೆಫ್‌, ಆಟೋ ಲಿಂಗರಾಜು, ಯುವ ಕರ್ನಾಟಕ ವೇದಿಕೆಯ ತಾಲೂಕು ಅಧ್ಯಕ್ಷ ಆರ್.
ರಾಘವೇಂದ್ರ, ಗೌರವ ಅಧ್ಯಕ್ಷರಾದ ಸುಂದರ್ ರಾಮಸಮುದ್ರ. ತಾಲೂಕು ಉಪಾಧ್ಯಕ್ಷ ರಾಜೇಂದ್ರ ಮಡಿವಾಳ, ತಾಲೂಕು ಕಾರ್ಯದರ್ಶಿ ಮಹೇಶ್ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *